ಪಟ್ಟಕ್ಕಾಗಿ ಬದುಕಲ್ಲ (ಕವನ -115)


ಪಟ್ಟಕ್ಕಾಗಿ ಬದುಕಲ್ಲ
***************
ಅಂಗಳಗುಡಿಸಿ ಸುಸ್ತಾದವ
ಮಂಗಳನುಡಿಯುತ್ತಲೂ
ಧಣಿವಾಗತೊಡಗಿದ
ತಿಂಗಳ ಭವಿಷ್ಯ ಹೇಳುತಿದ್ದವ
ಬೆಳದಿಂಗಳ ಬೆಳಕಿಗೂ
ಬೆವರತೊಡಗಿದ, 
ಕಾಸಿದ್ದರೇನೇ ಜೀವನವೆಂದವ
ಬಿಡಿಗಾಸು ಬಿಡದೆ ಉಸಿರ ಬಿಟ್ಟ
ಹೆಸರಿದ್ದರೇನೇ ಗೌರವವೆಂದವ
ಹೆಸರಿನ  ಹುಡುಕಾಟದಲಿ
ತನ್ನ ಹೇಸರನ್ನೂ ಹೇಳದಷ್ಟು
ಮೌನವಾಗಿ ಬಿಟ್ಟ !
ಪಟ್ಟಕ್ಕಾಗಿ ಬದುಕಲ್ಲ
ಕೆಟ್ಟವನಾಗಿ ಇರೋದಲ್ಲ,
ಸುಟ್ಟು ಬಿಡೋ ಮನುಜನ
ಅಟ್ಟ ಹತ್ತಿಸಿಬಿಟ್ಟರೂ
ಬೇಕು ಬೇಕೆಂಬ ಹಠದಲಿ
ಇದ್ದುದನ್ನೆಲ್ಲಾ  ಕಳೆದುಬಿಟ್ಟ !
✍️ಮಾಧವ ನಾಯ್ಕ್ ಅಂಜಾರು🌹
   






Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ

ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ