(ಲೇಖನ -2)ನೆಮ್ಮದಿಯ ಜೀವನ ಬೇಕೇ, ಹಾಗಿದ್ದರೆ ಮೊದಲು ನಕಾರಾತ್ಮಕ ಚಿಂತನೆ ಮತ್ತು ನಕಾರಾತ್ಮಕ ಜನರಿಂದ ದೂರವಿರಿ

ನೆಮ್ಮದಿಯ ಜೀವನ ಬೇಕೇ, ಹಾಗಿದ್ದರೆ ಮೊದಲು ನಕಾರಾತ್ಮಕ ಚಿಂತನೆ ಮತ್ತು ನಕಾರಾತ್ಮಕ ಜನರಿಂದ ದೂರವಿರಿ. ಇದು ಇಂದು ನಿನ್ನೆಯ ಮಾತಲ್ಲ, ನಮ್ಮ ಜೀವನದ ಕೊನೆಯವರೆಗೂ ಅನುಭವಕ್ಕೆ ಬರುವ ವಿಚಾರಗಳು, ನೀನೊಂದು ಚಿಂತಿಸಿದರೆ ದೈವವೊಂದು ಬಗೆಯುತ್ತದೆ ಅನ್ನುವ ಬದಲು ನೀನೊಂದು ಚಿಂತಿಸಿದರೆ ನಿನ್ನ ಸುತ್ತಲಿರುವ ನಕಾರಾತ್ಮಕ ಜನರು ಇನ್ನೊಂದು ಬಗೆಯುತ್ತಾರೆ ಎಂದು ಹೇಳಿಕೊಳ್ಳಬಹುದು. ಯಾಕೆಂದರೆ ನೀನೆಷ್ಟು ಪ್ರಾಮಾಣಿಕನಾಗಿದ್ದರೂ,  ಸುತ್ತಲಿನ ಸಮಾಜದಲ್ಲಿ ಒಂದಷ್ಟು ಜನರು  ಮನಸ್ಸಿಗೆ ಹೆಚ್ಚು ಚುಚ್ಚಿ ಮಾತಾಡುವವರು, ಉದ್ದಾರ ಬಯಸದೇ ಇರುವವರು, ನಿನ್ನ ನಗುವನ್ನು,  ಅನ್ನ ಮತ್ತು ಹಾಕಿಕೊಳ್ಳುವ ಬಟ್ಟೇಯನ್ನೂ ಬಯಸದೇ ಇರುವವರು ಅನೇಕ ಮಂದಿ ನೀವು ಖುದ್ದಾಗಿ ನೋಡಿರಲೂಬಹುದು. ಅದಕ್ಕೆ ಸರಿಯಾಗಿ ನಿನ್ನಷ್ಟಕ್ಕೆ ನೀನಿದ್ದರೂ  ಕೆಣಕಿಸಿ ನಿನ್ನಿಂದ ತಪ್ಪುಗಳನ್ನು ಮಾಡಿಸುವ ಜನರು ಕೂಡ ಇರಲುಬಹುದು. ತನ್ನ ವಿಚಾರಧಾರೆಯನ್ನು ಸಮರ್ಥಿಸಿಕೊಂಡು ಒಂದಷ್ಟು ಜನರಲ್ಲಿ  ಸ್ವಂತ ವಿಚಾರದ ಬಗ್ಗೆ ಅಲ್ಲಲ್ಲಿ ಹೇಳಿಕೊಂಡು ತಿರುಗುವ ಜನರನ್ನು ಕಂಡಿರಬಹುದು.

            ಇಂತಹ ಮನಸುಳ್ಳ ಜನರೊಂದಿಗೆ ಎಷ್ಟು ಸಾಧ್ಯವೋ ಅಷ್ಟು ದೂರದಿಂದಿರಲು ನಿನ್ನನ್ನು ನೀನು ತಯಾರಿಯಲ್ಲಿಟ್ಟುಕೊಳ್ಳಬೇಕು. ಯಾವ ಕಾಲಕ್ಕೆ ಯಾರು ತನ್ನ ನಿಜವಾದ ಬಣ್ಣವನ್ನು ವ್ಯಕ್ತ ಪಡಿಸುತ್ತಾರೋ ತಿಳಿಯದು. ನೀನ್ಯಾರು ಒಳ್ಳೆಯವರೆಂದು ತಿಳಿದು ಬದುಕಿರುತ್ತಿಯೋ ಅವರೇ  ತಿರುಗಿ ಬೀಳುವ ಸಂಧರ್ಭಗಳು ನೋಡಿರಲುಬಹುದು. ಸಾಮಾನ್ಯವಾಗಿ ಇಂತಹ ಘಟನೆಗಳು ತುಂಬಾ ಹತ್ತಿರವೆಂದು ಭಾವಿಸಿದವರಲ್ಲಿ ಅಥವಾ ನಿನ್ನ ಹತ್ತಿರದ ಸಂಬಂಧಿಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತಾರೆ. ಅದು ಅವರ ತಪ್ಪು ಎಂದು ಹೇಳಲು ಆಗುವುದಿಲ್ಲ, ಬದಲಾಗಿ ಯಾರು ಇಂತಹ ಕೆಲಸವನ್ನು ಮಾಡುತ್ತಾರೋ ಅವರು ನಿನಗೆ ಹೊಸ ಪಾಠವನ್ನು ಕಲಿಸಿಕೊಟ್ಟಂತೆ. ಹಾಗಾಗಿ ಯಾರು ನಿನ್ನ ಜೀವನದಲ್ಲಿ ನಕಾರಾತ್ಮಕವೆಂದು ತೋರುತ್ತದೆಯೋ ಅವರಿಂದ ವಾದಕ್ಕೆ ಇಳಿಯದೆ ನಾಲ್ಕು ಹೆಜ್ಜೆ  ಹಿಂದೆ ನಿಂತು ನಿನ್ನ ಜೀವನವನ್ನು ಸಂತೋಷದ ಹಾದಿಯಲ್ಲಿ ಕೊಂಡುಹೋಗಲು ಪ್ರಯತ್ನ ಮಾಡಬೇಕು.

        ಪ್ರಪಂಚ ಬಹಳಷ್ಟು ದೊಡ್ಡದು, ನಿನ್ನನ್ನು ಆಸೆಪಡುವ  ಗೆಳೆಯ ಅಥವಾ ನಿನ್ನ ತಂದೆ, ತಾಯಿ, ಅಥವಾ ನಿನ್ನ ಒಳಿತನ್ನು ಬಯಸುವ ಒಬ್ಬ ವ್ಯಕ್ತಿ ಸಾಕು ನೀನು ಹಾಯಾಗಿ ಜೀವನ ಮಾಡಲು. ನಿನ್ನ ಬಗ್ಗೆ ಅನ್ಯರು ಏನು ಗೊಣಗಿದರು ಚಿಂತಿಸಬೇಡ. ಯಾವುದೇ ಆಸೆ ಆಕಾಂಕ್ಷೆ ಇಲ್ಲದೆ ನಿನ್ನ ಜೊತೆಗಿರುವ ಜನರನ್ನು ಜೀವನ ಪೂರ್ತಿ ಮರೆಯಬೇಡ. ಅಂತವರಿಗೆ ನೋವನ್ನು ಬಯಸಲು ಹೋಗಬೇಡ. ಪುರಂದರ ದಾಸರ ಕೆಲವು ಪದಗಳು "ಸತ್ಯವಂತರಿಗಿದು ಕಾಲವಲ್ಲ ದುಷ್ಟರಿಗೆ ಸುಭಿಕ್ಷ ಕಾಲ "  "ಬಂದದ್ದೆಲ್ಲ ಬರಲಿ ಗೋವಿಂದನ ದಯೆ ಇರಲಿ " "ಈಸಬೇಕು ಇದ್ದು ಜಯಿಸಬೇಕು " ಹಾಗೆಯೇ ಇಂತಹ ಅದೆಷ್ಟು ಪದಗಳನ್ನು ಅವರ ಕಾಲದಲ್ಲಿ ಬರೆದಿದ್ದಾರೆ ಎಂದರೆ, ಈಗಿನ ಪರಿಸ್ಥಿಯಲ್ಲಿ ಯಾವ ಮಟ್ಟದ ಸಮಾಜ ಇರಬಹುದು ಎಂಬುದನ್ನು ಪ್ರತ್ಯೇಕವಾಗಿ ಬರೆಯಬೇಕಾಗಿಲ್ಲ.

        ನಿನ್ನಿಂದ ಪ್ರಯೋಜನವಿದ್ದರೆ ಮಾತ್ರ ನಿನ್ನ ಬಳಿ ಸುತ್ತಾಡುವವರ ಬಗ್ಗೆ ಗಮನವಿರಲಿ,  ನಿನ್ನ ಬಳಿ ಹಣವನ್ನು ಪಡೆದುಕೊಂಡು ಹಿಂತಿರುಗಿಸಿ ಕೊಡದೇ ಇರುವವರ ಬಗ್ಗೆ ನೆನಪಿರಲಿ. ಅನ್ಯರು ಮಾಡಿದ ಸಹಾಯವನ್ನು ತಾನು ಮಾಡಿದ್ದೇನೆ ಎಂದು ಹೇಳುವವರ ಬಗ್ಗೆ ಜಾಗ್ರತೆ ಇರಲಿ. ನಿಮ್ಮ ಬಳಿ ಅನ್ಯರ ಬಗ್ಗೆ ಹೆಚ್ಚಾಗಿ ದೂರನ್ನು ಹೇಳುವವರ ಕುರಿತು ಆದಷ್ಟು ನಯವಾಗಿರಿ.

" ಭಾರತದ ಅನುರಾಗ "  ಸರ್ವರಿಗೂ ಒಳಿತನ್ನು ಬಯಸುವ ಜಾಲಬಂಧ, ಇದರಲ್ಲಿರುವ ಪ್ರತಿಯೊಬ್ಬ ಸದಸ್ಯರಿಗೆ ಉತ್ತಮವಾದ ಸಂದೇಶ ವಿಚಾರಗಳಿಗೆ ಅವಕಾಶಗಳು, ಸರ್ವೇ ಜನಃ ಸುಖಿನೋ ಭವಂತು.

✍️ಬರಹ : ಮಾಧವ. ಕೆ. ಅಂಜಾರು 





Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.