(ಲೇಖನ -51)ನಿನ್ನ ಪ್ರೀತಿಸುವೆ ಸುಗುಣ, ಎನ್ನ ಬಾಳಿನೊಳು ನಿನ್ನ ಆಗಮನ ಎಂದೆಂದಿಗೂ ಕಾಪಾಡುತ್ತಿದೆ ಸುಗುಣ

ನಿನ್ನ ಪ್ರೀತಿಸುವೆ ಸುಗುಣ, ಎನ್ನ ಬಾಳಿನೊಳು ನಿನ್ನ ಆಗಮನ ಎಂದೆಂದಿಗೂ ಕಾಪಾಡುತ್ತಿದೆ ಸುಗುಣ. ಯಾರೇನು ಹೇಳಿದರೂ ನನ್ನಲಿ ಸೇರಿಕೊಂಡಿರುವ ಸುಗುಣ ಕೆಲವೊಮ್ಮೆ ನನ್ನನ್ನು ಕಾಪಾಡಿಕೊಳ್ಳಲು ಶ್ರಮಿಸುತಿದ್ದರೂ ಮತ್ತೆ ಮತ್ತೆ ಬಂದು ಸಂತಸದ ದಾರಿ ತೋರಿಸಲು ಶ್ರಮಿಸುತ್ತಿರುವೆ ನೀ ಸುಗುಣ. ದುರ್ಗುಣ ಬಂದೆರಗಿದರೂ ಸುಗುಣ ಮೇಲೆದ್ದು ನಿಲ್ಲುತ್ತ , ಪ್ರಪಂಚದ ಬಣ್ಣ ಬಣ್ಣದ ಜನರೊಂದಿಗೆ ಸೇರಿ ಬದುಕಲು ನೀನೇ ಕಾರಣ ಸುಗುಣ. ಆಸೆಗಳ ಬೆನ್ನಟ್ಟುವ ಪರಿಪಾಠ, ದುರಾಸೆಗೆ ಒಳಗಾಗಿ ಅನ್ಯರಿಗೆ ತೊಂದರೆಕೊಡದೆ ಬದುಕುವ ರೀತಿ ನೀತಿಯನ್ನು ನೀನು ಕಲಿಸಿಕೊಟ್ಟಿರುವೆ ನನ್ನ ಅಂತರಾಳದ ಸುಗುಣ.



       ನಿನ್ನ ಗೆಳೆಯ, ಗೆಳತಿಯ ಕಣ್ಣಂಚಲಿ ನೀರ ಹನಿ ನೋಡಿ ಮರುಗಲು ನೀನೇ ಕಾರಣ, ಅವರಿವರ ಸಮಸ್ಯೆಗಳ ಬೆನ್ನಹತ್ತಿ ಕೈ ಹಿಡಿದು ಸಹಕರಿಸಲು ಪ್ರೇರಣೆ ನೀನೇ ಸುಗುಣ. ಎನ್ನ ಮನಸು, ಹೃದಯ ನೋವಲಿ ಮುಳುಗಿಹೋಗಿದ್ದರೂ ಅದನೆಲ್ಲವ ಮೀರಿ ಜೊತೆಯಾಗಿ ಬಂದು ನಿಲ್ಲುವ ನನ್ನೊಳಗಿನ ಸುಗುಣ, ಕೋಪಗೊಂಡಾಗ ಆಡಿದ ಮಾತನ್ನೆಲ್ಲ ಮರೆತು ಮತ್ತೆ ಮಾತನಾಡಲು ಸಹಕರಿಸಿ, ಧೈರ್ಯವಾಗಿರಲು ಹೇಳುವ ನನ್ನ ಅಂತರಾಳದ ಸುಗುಣ. ಮೋಸ ಹೋದಾಗ, ಹೀಯಾಳಿಕೆಗೆ ಗುರಿಯಾದಾಗ, ಗೌರವಕ್ಕೆ ಧಕ್ಕೆಯಾದಾಗ ಮತ್ತೆ ಮತ್ತೆ ನನ್ನನ್ನು ಸರಿದಾರಿಗೆ ತರುವ ನೀನು, ನಿನ್ನನ್ನು ಹೇಗೆ ಕೊಂಡಾಡಲಿ ಹೇಳು.?

      ದುರ್ಗುಣ  ಹೊಂದಿರುವ ಜನರೊಂದಿಗೆ ನಿನ್ನ ಬಾಳು ಕಷ್ಟವಾದರೂ, ನನ್ನ ಹೆಜ್ಜೆಯನು ಮುಂದಿಟ್ಟು ನಡೆಯಲು ಕಾರಣ ನೀನೇ ಅಲ್ಲವೇ? ದೇಹ ದಣಿದಾಗ, ಮನಸ್ಸು ಕುಗ್ಗಿದಾಗ, ಹೃದಯ ಒಡೆದಾಗ, ಮತ್ತೆ ಬೆನ್ನುತಟ್ಟಿ ಎಚ್ಚರಿಸುವ ನಿನಗೆ ನನ್ನ  ಪ್ರೀತಿಯ ಅಪ್ಪುಗೆ. ನೀನೆನ್ನ ಬಿಟ್ಟು ಹೋಗದಿರು, ನೀನೆನ್ನ ಕೊನೆಯಾಗಿಸದಿರು, ನೀನೆನ್ನ ಮರೆಯದಿರು, ನೀನಿದ್ದರೆ ಎನ್ನ ಬದುಕು, ನೀನಿದ್ದರೆ ಎನ್ನ ದ್ಯೇಯ, ಕನಸುಗಳು ನನಸಾಗಬಹುದು. ಸು - ಗುಣ. ಎಂದೆಂದಿಗೂ ಜೊತೆಯಾಗಿ ನನ್ನನ್ನು ರಕ್ಷಿಸು ನನ್ನಲಿರುವ ಸು -ಗುಣ.

"ಭಾರತದ ಅನುರಾಗ " ನಿಮ್ಮೆಲ್ಲರಿಗೂ ಹಾರೈಸುತ್ತ, ನಿಮ್ಮಲಿರುವ ಸು -ಗುಣ ನಿಮ್ಮನ್ನು ಕಾಪಾಡಲಿ ಎನ್ನುವ ಶುಭ ಸಂದೇಶದೊಂದಿಗೆ.

ಬರಹ : ಮಾಧವ. ಕೆ ಅಂಜಾರು.


         







Comments

Post a Comment

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ