ಅಪ್ಪನಾಗಿಹೆ (ಕವನ -113)

ಅಪ್ಪನಾಗಿಹೆ
****************
ಅಪ್ಪ, ನಾ ಅಪ್ಪನಾಗಿಹೆ
ಅಪ್ಪ ನಿನ್ನ ಚರಣದಿ ತಲೆಬಾಗುವೆ
ನಿನ್ನ ಸ್ನೇಹದ ಪರಿ ಇನ್ನೊಂದು ಸ್ನೇಹವಿಲ್ಲ
ನಿನ್ನ ಪ್ರೀತಿಯ ಸಿರಿ ಎನ್ನ ಜೀವಕೆ ಗರಿ, 
ನನ್ನ ಗೆಳೆಯನು ನೀನು ನಿನ್ನ ನಗುವೇ ಜೇನು
ಅಪ್ಪನಾಗಿಹ ನಾನು, ಅರಿವಾಗುತಿದೆ ಅಪ್ಪನೆಂದರೇನು !;

ಅಂದು ನಿನ್ನ ಪಾದದಲಿ
ಪಾದರಕ್ಷೆಯು  ಕಾಣಸಿಗಲಿಲ್ಲ  '
ಬಿಸಿಲ ಬೇಗೆಗೆ ನಡೆದ ನೋವ ಅರಿಯಲಿಲ್ಲ
ಬೆಂದು ಬಸವಳಿದ ನಿನ್ನ,  ಕಷ್ಟವನರಿಯಲಿಲ್ಲ
ಕಂದನಾಗಿದ್ದ ಎನಗೆ ಏನೂ ತಿಳಿಯಲಿಲ್ಲ
ಆದರಿಂದು ನಾ ಅಪ್ಪನಾಗಿಹೆ,
ನಿನ್ನ ತ್ಯಾಗ ತಿಳಿದು ಕಂಗಳು ತುಂಬಿತಲ್ಲ !;

ಕರುಳಕುಡಿಯ ಜನುಮದಾತ
ಹಸಿದ ಹೊಟ್ಟೇಲಿ ನಗುವ ಕಂಡಿಹೆ
ನೋವ ಮರೆಮಾಚಲು ಹಾಡು ಹಾಡಿಹೆ
ನಿನ್ನ ತುಳಿದ ಜನರ,  ನಾನಿಂದು  ಕಾಣುತಿಹೆ
ಮಣ್ಣು ತಿಂದು ಹುಚ್ಚರಾದರು
ನಿನ್ನ ಹಿಂಸಿಸಿದ  ಪ್ರತಿ ಜನರು
ದಿನ ದಿನವೂ ನಾಶವಾಗುತಿಹರು !;

ಸತ್ಯ ಧರ್ಮ ನಿನ್ನ ವಾದ
ಸತ್ಯಬಿಟ್ಟು ಇಲ್ಲ ಬೇಧ
ಅಸತ್ಯನಡೆಗೆ ಮಾಡುತಿಹೆ ವಿರೋಧ
ನಿತ್ಯ ನಿನ್ನ ಒಂದೇ ವಾದ
ಸತ್ಯ ಮಾತ್ರ ಜಯಿಸಬೇಕು
ಅಧರ್ಮ ದಾರಿ ಅಳಿಸಬೇಕು !
ಇಂದೆನಗೆ ಅರಿವಾಗುತಿದೆ 
ನನ್ನಪ್ಪನೆಂದರೆ ದೇವರೇ, ಸುಳ್ಳಲ್ಲ  !;
ಅವರಿಗೆ ಸರಿ ಸಾಟಿ ಯಾರೂ ಇಲ್ಲ,

ಅಪ್ಪ ನಿನ್ನ ಕಣ್ಣೀರ ಹನಿಗೆ
ಅಪ್ಪ ನಿನ್ನ ದುಡಿಮೆಯ ಬೆವರಿಗೆ
ದೈವವೊಂದೇ ಸಾಕ್ಷಿ ಯಾಗಿದೆ
ಪ್ರತಿದಿನದ ನೋವ ಕ್ಷಣಗಳು
ಕಣ್ಣಮುಂದೆ ಹಾಯುತಿದೆ
ಕಳೆದು ಹೋದ ಘಟನೆಗಳ
ನೆನೆದು ನೆನೆದು ಕೊರಗುತಿಹೆ
ಅಪ್ಪ ನಿನ್ನ ಜವಾಬ್ದಾರಿಯ
ಅಪ್ಪನಾಗಿ ಅರಿತುಕೊಂಡೆ !;

ಎಂದಿಗೂ ನೀ ಜೊತೆಯಲಿರು
ಎನ್ನ ಹೃದಯಗೂಡಲಿರು
ಅಪ್ಪ ನಾನಿರುವೆ ಹೇಳುತಿರು
ಆತ್ಮಸ್ಥೈರ್ಯ ತುಂಬುತಿರು
ನಿನಗೆ  ದೇವರು ಹಾರೈಸಲಿ
ನಿನ್ನ ಆಸೆ ಪೂರೈಸಲಿ
ನಿನ್ನ ಮಗನಾಗಿ ಎನಗೆ
ಪಾದ ಸೇವೆಭಾಗ್ಯ ಸಿಗಲಿ !, ;
      ✍️ಮಾಧವ ಅಂಜಾರು 🌹

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ