(ಲೇಖನ -7)ಅಪರಿಚಿತನಿಗೆ ಹಾಕಿದ ಅನ್ನದ ಪ್ರತಿಫಲ, ಕೆಲವೊಮ್ಮೆ ನಮ್ಮನ್ನು ಪರೀಕ್ಷಿಸಲು ದೇವರುಗಳು ಬರುತ್ತಾರೆ

 ಅಪರಿಚಿತನಿಗೆ ಹಾಕಿದ ಅನ್ನದ ಪ್ರತಿಫಲ,  ಕೆಲವೊಮ್ಮೆ ನಮ್ಮನ್ನು ಪರೀಕ್ಷಿಸಲು ದೇವರುಗಳು ಬರುತ್ತಾರೆ ಎಂಬುದು ವಾಡಿಕೆ ಮಾತು, ಹೌದು ಇಂತಹ ನಿದರ್ಶನಗಳು ನಿಮ್ಮ ಜೀವನದಲ್ಲಿ ಆಗಿರಬಹುದು. ನಿರ್ದಿಷ್ಟ ಸಮಯಗಳೆನ್ನದೆ ನಿಮ್ಮ ಜೀವನದಲ್ಲಿ ಅದೆಷ್ಟೋಜನರು ಭಿಕ್ಷುಕರು, ಹಿರಿಯ ನಾಗರೀಕರು, ಮಧ್ಯವಯಸ್ಕರು, ಮಕ್ಕಳೆನ್ನದೆ  ಅನ್ನಕ್ಕಾಗಿ ಪರದಾಡುತ್ತಿರುವ ಪ್ರಸಂಗಗಳು ಕಂಡಿರಬಹುದು.



      ಅದೊಂದು ದಿನ,  ಕೆಲಸನಿಮಿತ್ತ ಪಟ್ಟಣದ ಕಡೆಗೆ ಪಯಣ, ನನ್ನೊಂದಿಗೆ ನನ್ನ ಗೆಳೆಯ, ಸಾಧಾರಣವಾಗಿ ಊರಲ್ಲಿ ಚಿಕ್ಕ ಪುಟ್ಟ ಹೋಟೆಲು, ಗೂಡಿನಂಗಡಿ ಗೆ ಆಹಾರವನ್ನು ಸೇವಿಸಲು ಹೋಗುವ ಅಭ್ಯಾಸ,  ಚಿಕ್ಕಮಟ್ಟದ ವ್ಯಾಪಾರಿಗಳಿಗೆ ಉಪಕಾರವಾಗಲಿ ಅನ್ನುವ ಉದ್ದೇಶದಿಂದ, ಉಡುಪಿ ಸಮೀಪ ಮದ್ಯಾಹ್ನದ ಸಮಯ ಊಟಕೆಂದು ಹೋಗಿ ಕುಳಿತಾಗ, ನಾವು ಊಟ ಪ್ರಾರಂಭ ಮಾಡುವ ಸಮಯದಲ್ಲಿ ಮುದಿವಯಸ್ಸಿನ ವ್ಯಕ್ತಿಯೊಬ್ಬರು ಊಟಕ್ಕಾಗಿ ಅದೇ ಸ್ಥಳಕ್ಕೆ ಆಗಮಿಸಿದ್ದರು, ಕೈಲಿ ಒಂದು ಕೋಲು, ಹಣ್ಣಾಗಿ ಹೋಗಿರುವ ಕೂದಲು, ಉದ್ದನೆಯ ಗಡ್ಡ, ಹರುಕು ಮುರುಕು ಬಟ್ಟೆ, ಮತ್ತು ಪಂಚೆಯನುಟ್ಟು, ಮಾಲೀಕನಲ್ಲಿ ಊಟಕ್ಕೆ ಎಷ್ಟು ಎಂದು ಕೇಳಿಬಿಟ್ಟರು. ಊಟಕ್ಕೆ 50 ರೂಪಾಯಿ ಅಂದುಬಿಟ್ಟ ಮಾಲಿಕ. ಅದನ್ನು ಕೇಳಿದ ವ್ಯಕ್ತಿ, ತನ್ನ ಕಿಸೆಯಲ್ಲಿ 10 ರೂಪಾಯಿ ನೋಟನ್ನು ಅವರಿಗೆ ಕೊಟ್ಟು,  ನನಗೆ ಅನ್ನ ಸಾರು ಹಾಕು ಸಾಕು ಅನ್ನುತ್ತಾ ಟೇಬಲ್ ಮೇಲೆ ಕುಳಿತರು. ವ್ಯಾಪಾರಿ 10 ರುಪಾಯಿಗೆ ಏನು ಬರುತ್ತೆ ಎಂದು ಹೇಳುವ ಮೊದಲು, ಆ ವ್ಯಕ್ತಿಯನ್ನು ಗಮನಿಸುತಿದ್ದ ನಾನು, ನೀವು ಊಟಕ್ಕೆ ಧೈರ್ಯವಾಗಿ ಕುಳಿತುಕೊಳ್ಳಿ ಅಂದುಬಿಟ್ಟೆ.

        ಗೂಡಿನಂಗಡಿ ಮಾಲೀಕನಿಗೆ ಕರೆದು ಅವರೆಸ್ಟು ತಿನ್ನುತ್ತಾರೋ ಅವರಿಗೇನು ಬೇಕು ಕೇಳು, ಬೇಕಿದ್ದನ್ನೆಲ್ಲ ಹೊಟ್ಟೆತುಂಬಾ ಬಡಿಸು ಅಂದುಬಿಟ್ಟೆ. ಹೇಳಿದಂತೆ ಸರಿಯಾಗಿ ಊಟ ಬಡಿಸಿಬಿಟ್ಟರು, ಊಟ ಪ್ರಾರಂಭ ಮಾಡಿದಂತೆ ಅತಿಯಾದ ಹಸಿವು ಅವರ ಮುಖದಲ್ಲಿ ಭಾಸವಾಗಿತ್ತು,  ಹೊಟ್ಟೆ ತುಂಬಾ ಊಟ ಮಾಡುವವರೆಗೆ ನಾನೂ ಕುಳಿತುಕೊಂಡು ಕಾದುಬಿಟ್ಟೆ. ಅವರ ಊಟ ಮುಗಿದ ನಂತರ ಹೋಟೆಲು ಬಿಲ್ಲನ್ನು ಅವರಿಗೆ ತಿಳಿಯದೆ ಕೊಟ್ಟು ಬಿಟ್ಟೆ. ಮಾಲೀಕರು ನಿಮ್ಮ ಊಟದ ಅವರು ಕೊಟ್ಟರು ಎಂದು ಇಲ್ಲಿವಯಸ್ಸಿನ ವ್ಯಕ್ತಿಗೆ ಹೇಳಿಬಿಟ್ಟರು. ಅಷ್ಟು ಹೇಳಿದ ಮಾತ್ರಕ್ಕೆ, ಹೌದಾ ಮಗಾ, ನೀನೆಲ್ಲಿದ್ದರೂ ಖಂಡಿತವಾಗಿಯೂ ಒಳ್ಳೇದಾಗುತ್ತೀಯಾ, ನಿನಗೆ ದೇವರು ಕಾಪಾಡುತ್ತಾನೆ ಎಂದು ಆಶೀರ್ವಾದ ಮಾಡಿಬಿಟ್ಟರು.  ಆ ಮುಖದಲ್ಲಿದ್ದ, ನೋವು, ಸಂತೋಷ, ಕಷ್ಟದಲ್ಲಿ ಬಳಲಿ ಹೋಗಿದ್ದ ಜೀವವೆಂದು ನನಗೆ ತಿಳಿದುಬಿಟ್ಟರೂ, ಅವರಲ್ಲಿ ಮೂಡಿಬಂದ  ಹೃದಯ ಅಂತರಾಳದ ಮಾತುಗಳು ಇಂದಿಗೂ ನನ್ನ ಕಿವಿಯಲ್ಲಿದೆ.

     ಇಲ್ಲಿ ನಾನು ಮಾಡಿದ ಘನ ಕಾರ್ಯವೆಂದು ಹೇಳಿಕೊಳ್ಳಲು ಬರುತ್ತಿಲ್ಲ, ಒಂದು ಸಮಯದಲ್ಲಿ ನನಗೂ ನನ್ನ ಬಾಲ್ಯದ ಸಮಯದಲ್ಲಿ ಇಂತಹ ಸಂಧರ್ಭ ಬಂದೋದಗಿತ್ತು, ಬಡತನದ ಬೇಗೆ, ತಾಳಲಾರದ ಹಸಿವು, ಹೋಟೆಲಿನಲ್ಲಿ ತಿನ್ನಬೇಕೆಂಬ ಆಸೆ, ಹೆಚ್ಚು ಹಣವಿಲ್ಲದೆ ಹೋಟೆಲಿಗೆ ಹೋದೆ, ಆ ಸಮಯದಲ್ಲಿ ನನ್ನನ್ನು ಗಮನಿಸಿದ ಹಿರಿಯರೋರ್ವರು, ಮಗೂ ನಿನಗೇನು ಬೇಕು ಹೇಳು ನಾನು ಹಣ ಕೊಡುತ್ತೇನೆ ಎಂದು ಹೇಳಿಬಿಟ್ಟಾಗ, ಹೊಟ್ಟೆತುಂಬಾ ತಿಂದ ನೆನಪು. ಸಮಯ ಹೇಳಲಾಗದು, ಯಾರು, ಎಲ್ಲಿ, ಎಂಥವರು ನಿನಗೆ ಯಾವ ರೀತಿಯಲ್ಲಿ ನಿನ್ನನ್ನು ರಕ್ಷಿಸುತ್ತಾರೆ, ಪೋಶಿಸುತ್ತಾರೆ ತಿಳಿಯದು. ಈ ಇಲ್ಲಿವಯಸ್ಸಿನ ವ್ಯಕ್ತಿಯ ಭಾವನೆ ನನ್ನ ಮನದಲ್ಲೂ ಮೂಡಿ ಬಂದಿತ್ತು, ಯಾರೋ, ಎಲ್ಲಿಯವರು, ಜಾತಿ, ಮತ, ಪಂಥಗಳನ್ನು ಅರಿಯದೇ ಮಾನವೀಯತೆ ತೋರುವ ಅದೆಷ್ಟು ಜನರು ಅಂದಿನ ಕಾಲದಲ್ಲಿ ಹೆಚ್ಚಾಗಿ ಸಿಗುತಿದ್ದರು.

     ಇಂದಿನ ದಿನದಲ್ಲೂ ಅಲ್ಲಲ್ಲಿ ಇದ್ದಾರೆ, ಯಾವುದೇ ಆಸೆಗಳಿಲ್ಲದೆ ಪ್ರೀತಿಯಿಂದ ಬದುಕುವ ಜನರನ್ನು ಕಂಡಾಗ ನನಗೇನೋ ತುಂಬಾ ಹೆಮ್ಮೆಯಾಗುತ್ತದೆ. ಅಂತವರ ಸ್ನೇಹ ನನ್ನೊಂದಿಗೆ ಇದೆ ಅನ್ನುವುದು ಬಹಳ ಸಂತೋಷದ ವಿಷಯ. "ಭಾರತದ ಅನುರಾಗ " ಎಲ್ಲಾ ಸಜ್ಜನರಿಗೆ ಶ್ರೀ ದೇವರಲ್ಲಿ ಪ್ರಾರ್ಥಿಸುತ್ತದೆ. ಎಲ್ಲರಿಗೂ ಒಳಿತಾಗಲಿ ಎನ್ನುತ್ತಾ.

ನಿಮ್ಮ ಪ್ರೀತಿಯ

✍️ ಬರಹ : ಮಾಧವ. ಕೆ. ಅಂಜಾರು 

        


     




Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.