ಬಂಟಾಯನ 2025
ಬಂಟಾಯನ 2025
ಬಂಟೆರೆನ ಆಯನ = ಬಂಟಾಯನ, ಇದರ ಕನ್ನಡ ಅರ್ಥ ಬಂಟರ ಜಾತ್ರೆ, ತಾರೀಕು 21-11-2025 ರಂದು, ಕುವೈಟ್ ಅಬ್ಬಾಸಿಯದಲ್ಲಿ ಬಹಳ ಅದ್ಧುರಿಯಾಗಿ ನಡೆದ ಬಂಟಾಯನ ಹೊಸ ಮೆರುಗನ್ನು ಪಡೆದುಕೊಂಡಿತು. ಹೌದು, ಕುವೈಟ್ ನಲ್ಲಿ ಹಲವಾರು ಸಂಘಟನೆಗಳಂತೆ ಭಂಟರ ಕೂಟವೂ ಒಂದು, ತನ್ನ ಸಮಾಜದ ಏಳಿಗೆಗೆ ತನ್ನದೇ ಶೈಲಿಯಲ್ಲಿ ಪ್ರೋತ್ಸಾಹ, ಗೌರವ, ವೇದಿಕೆ ಶೃಷ್ಟಿ ಮಾಡಿ ಸಮಾಜದಲ್ಲಿ ಇನ್ನಷ್ಟು ಹೊಸ ಮುಖವನ್ನು ಪರಿಚಯ ಮಾಡುತ್ತ, ಬಂಟರ ಅಡಿಪಾಯವನ್ನು ಗಟ್ಟಿಗೊಳಿಸಿ ಇನ್ನುಳಿದವರಿಗೂ ಮಾದರಿಯಾಗಿ ಇರುತ್ತಿರುವುದು ಇತಿಹಾಸದಿಂದಲೇ ತಿಳಿದಿರುತ್ತೇವೆ. ಅದರಂತೆ ನಿನ್ನೆ ನಡೆದ ಬಂಟಾಯನ ಬಹಳಷ್ಟು ಅಚ್ಚುಕಟ್ಟಾಗಿ ನಡೆಯಿತು ಎಲ್ಲಾ ಪ್ರೇಕ್ಷಕರ ಮನಸೆಳೆಯಿತು, ಹೌದು ನಾವು ಬಂಟರು ಯಾವುದಕ್ಕೂ ಕಮ್ಮಿ ಇಲ್ಲ ಬಯಸಿದರೆ ಕನಸನ್ನು ನನಸು ಮಾಡುತ್ತೇವೆ ಎಂಬ ಸೂಚನೆಯನ್ನು ನೀಡಿದಂತಾಗಿದೆ.
ಸಾಮಾನ್ಯವಾಗಿ ಕುವೈತ್ ನ ಹೆಚ್ಚಿನ ಸಂಘಟನೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಪಳಗಿರುವ ಬಂಟರು, ತನ್ನ ಸಮಾಜದ ಹೆಗ್ಗಳಿಕೆಯನ್ನು ಹೆಚ್ಚಿಸಲು ಪ್ರತ್ಯೇಕ ವೇದಿಕೆಯನ್ನು ಮಾಡಿ, ಸಮಾಜ ಬಾಂಧವರನ್ನು ಕರೆದು ಗೌರವ ನೀಡಿ ಸನ್ಮಾನ ಮಾಡಿ ಮುಂದಿನ ಪೀಳಿಗೆಗೂ ಮಾದರಿಯಾಗುತ್ತಿದ್ದಾರೆ. ಇಲ್ಲಿ ಎರಡು ವರುಷದ ಮಗುವಿನಿಂದ ಹಿಡಿದು ಹಿರಿಯ ವಯಸ್ಕರವರೆಗೂ ವೇದಿಕೆಯಲ್ಲಿ ತನ್ನ ಚಾಕಚಕ್ಯತೆಯನ್ನು ತೋರಿಸಿ ನೆರೆದವರ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ.
ನಮ್ಮದೇ ಕ್ಷೇತ್ರದ M.L.A, ಗುರ್ಮೆ ಸುರೇಶ್ ಶೆಟ್ಟಿ ಮತ್ತು ಕತಾರ್ ಬಂಟರ ಸಂಘದ ಅಧ್ಯಕ್ಷ ಶ್ರೀ ನವೀನ್ ಶೆಟ್ಟಿ ಯವರು ಅಥಿತಿಯಾಗಿದ್ದರೂ, ಕುವೈತ್ನ ಪ್ರತೀ ಗಣ್ಯರೂ ಸೇರಿ ನಡೆದ ಬಂಟಾ ಯನ ನನಗೂ ಖುಷಿಯನ್ನು ನೀಡಿತು. ವೇದಿಕೆ ಯಲ್ಲಿ ನಡೆಯುವ ಪ್ರತೀ ದೃಶ್ಯವನ್ನು ಸರಿಯಾಗಿ ನೋಡುವವನು ಪ್ರೇಕ್ಷಕನು, ಅಲ್ಲಿ ನಡೆಯುವ ಪ್ರತೀ ಕಾರ್ಯಕ್ರಮ ಪ್ರೇಕ್ಷಕನ ಮನಮುಟ್ಟಬೇಕಿದ್ದರೆ ಎಲ್ಲರೂ ಬಹಳಷ್ಟು ಶ್ರಮಪಟ್ಟು ಕಾರ್ಯಕ್ರಮ ನಿರ್ವಹಿಸಿದಾಗ ಮಾತ್ರ ಸೇರಿದವರ ಕೈಚಪ್ಪಾಳೆ ಮತ್ತು ಪ್ರೀತಿಗೆ ಪಾತ್ರರಾಗುತ್ತಾರೆ.
ಸಂಘಟನೆಯಲ್ಲಿ, ಕ್ವಾಲಿಟಿ ಹೆಚ್ಚಿದಂತೆ ಅದರ ಕೆಲಸಗಳು ಪಾರದರ್ಶಕವಾಗಿ ಕಾಣುತ್ತದೆ, ಸಂಘಟನೆಯಲ್ಲಿ ರಾಜಕೀಯ ಹೆಚ್ಚಿದಂತೆ ಸಂಘಟನೆ ಕಳೆಗುಂದುತ್ತದೆ. ನಾನು ಕಂಡಂತೆ, ಬಂಟರ ಸಂಘದ ಕಾರ್ಯಕ್ರಮ ಈ ಹಿಂದೆಯೂ ಚೆನ್ನಾಗಿ ನಡೆಯುತಿತ್ತು, ಇಂದು, ಮುಂದೆಯೂ ಕೂಡ ಚೆನ್ನಾಗಿ ನಡೆಯುತ್ತದೆ, ಕಾರ್ಯಕ್ರಮ ನನ್ನ ಮನ ಮುಟ್ಟಿದಾಗ ನಾನು ಬರೆಯಲೇ ಬೇಕೆಂಬ ಮನಸ್ಸಿನ ಮಾತಿನ ಎರಡಕ್ಷರ ನನ್ನ ಜೀವನದ ಪುಟಗಳಿಗೆ ಸೇರಿತು.
ವೇದಿಕೆಯಲ್ಲಿ,ರಕ್ತ ಬೀಜಾಸುರನ ವಧೆ, ಯ ಬಗ್ಗೆ ನಡೆದ ನೃತ್ಯ ಪ್ರಸಂಘ, ಯಕ್ಷಗಾನ ನೃತ್ಯ, ಚಿಣ್ಣರ ನೃತ್ಯ, ಮತ್ತು ಹುಲಿವೇಷ ದ ಇತಿಹಾಸ, ಮತ್ತು ನಾಲ್ಕು ಯುಗಗಳ ಚಿತ್ರಣ ಒಂದಕ್ಕಿಂದ ಒಂದರಂತೆ ಪೈಪೋಟಿಯಲ್ಲಿ ನಡೆಯಿತು. ಹೌದು ನನ್ನನ್ನು ಎಲ್ಲರೂ ಗುರುತಿಸಲಿ, ನನ್ನ ಶ್ರಮ ಸಾರ್ಥಕವಾಗಲಿ ಎಂಬ ಹುರುಪು ಪ್ರತೀ ಕಲಾವಿದರಲ್ಲಿ ಎದ್ದು ಕಾಣುತಿತ್ತು.
ತೆಲಿಕೆದ ತೆನಾಲಿಯಲ್ಲಿ ಸಿಕ್ಕಿರುವ ಸಂದೇಶ " ಸಮಾಜವನ್ನು ಉತ್ತಮ ಗುಣಮಟ್ಟಕ್ಕೆ ಕೊಂಡು ಹೋಗುವ ಅತಿಥಿಗಳನ್ನು ಮಾತ್ರ ಕರೆದು ಸನ್ಮಾನ ಮಾಡಿ, ನಾಳೆ ನಮ್ಮ ಸಮಾಜ ಚೆನ್ನಾಗಿ ಇರಬೇಕಾದರೆ ಉತ್ತಮ ವ್ಯಕ್ತಿತ್ವವುಳ್ಳ ಜನರಿಂದ ಮಾತ್ರ ಭಾಷಣವನ್ನು / ಉಪದೇಶಗಳನ್ನು ಹಂಚಿಕೊಳ್ಳಿ ಆಗ ಮಾತ್ರ ಸಮಾಜ ಉದ್ದಾರವಾಗಲು ಸಾಧ್ಯ " ಈ ಮಾತು ನೂರಕ್ಕೆ ನೂರು ಸತ್ಯ. ಇಂದಿನ ದಿನಗಳಲ್ಲಿ ಹಣಕೊಟ್ಟು ಅಥವಾ ಬಡವರ ದುಡ್ಡನ್ನು ಲೂಟಿ ಮಾಡಿ, ಬರೇ ಶೋಕಿ ಜೀವನ ಮಾಡುತ್ತ ತನ್ನ ನಿಜ ಮುಖವನ್ನು ತನ್ನ ವೃತ್ತಿಯಲ್ಲಿ ತೋರಿಸಿ ಭ್ರಷ್ಟಾಚಾರ/ ಅನಾಚಾರಗಳಲ್ಲಿ ತೊಡಗಿಸಿಕೊಂಡು ಹೊಸ ಬಟ್ಟೆ ಧರಿಸಿ ಭಾಷಣ ಬೀಗುವವರ ಸಂಖ್ಯೆ ಬಹಳಷ್ಟು ಹೆಚ್ಚಾಗಿದೆ, ಬಾಯಿಗೆ ಬಂದಂತೆ ಹೇಳಿ ಸಮಾಜವನ್ನು ಕಳಂಕ ಮಾಡುವ ಜನರೂ ಕೂಡ ಅಲ್ಲಲ್ಲಿ ತಲೆಎತ್ತಿ, ಕಣ್ಣು ಮುಚ್ಚಿ ಹಾಲು ಕುಡಿಯುವ ಬೆಕ್ಕಿನಂತೆ ಓಡಾಡುತ್ತಾರೆ ಇದು ವಿಪರ್ಯಾಸವೆ. ಸಮಾಜದಲ್ಲಿ ಆದಷ್ಟು ಪ್ರಾಮಾಣಿಕ ಜನರನ್ನು ಗುರುತಿಸಿ ವೇದಿಕೆಯನ್ನು ಹಂಚಿದಾಗ ಅದರ ಬೆಲೆ ಹೆಚ್ಚಾಗುತ್ತದೆ ಹೊರತು ಬರೇ ಕಾರ್ಯಕ್ರಮಕ್ಕಾಗಿ ಅಲ್ಲ ಅನ್ನುವುದಾಗಿತ್ತು.
ಕೆಲಸದ ನಡುವೆ ಕಲಾ ಸೇವೆ ಸುಲಭದ ಮಾತಲ್ಲ, ಒಂದೊಂದು ಪಾತ್ರಕ್ಕೆ ಅದರದ್ದೇ ಆದ, ಶ್ರಮ ಕೊನೆಗೆ ಸಿಗುವ ಸಂತೋಷ ಬಹಳಷ್ಟು ವಿಭಿನವಾಗಿರುತ್ತದೆ. ನವ ದುರ್ಗೆಯರ ಪಾತ್ರದಲ್ಲಿ ಮಿಂಚಿರುವ ಪ್ರತೀ ಮಹಿಳೆಯರು ಬಣ್ಣ ಹಚ್ಚಿದ ಕೂಡಲೇ ನಿಜ ಅನುಭವ ಪಡೆದಿರುವ ಬಗ್ಗೆ ಪ್ರದರ್ಶನದಲ್ಲಿ ಎದ್ದು ಕಾಣುತಿತ್ತು, ಪ್ರತೀ ಕಲಾವಿದರ ಶ್ರಮ ಬಂಟಯನ ಯಶಸ್ವಿಯಾಗಿ ನಡೆಯಿತು.
ಕೊನೆಯದಾಗಿ, ಸಾರ್ವಜನಿಕ ಅನ್ನ ಸಂತರ್ಪಣೆ, ( ಮೃಸ್ಟಾನ್ನ ಭೋಜನ ವ್ಯವಸ್ಥೆ) ಸೇರಿರುವ ಎಲ್ಲರಿಗೂ ಇನ್ನಷ್ಟು ಸಂತೃಪ್ತಿ ನೀಡಿತು, ಶುಭ ಹಾರೈಕೆ ಆಶೀರ್ವಾದಗಳೊಂದಿಗೆ ಕಾರ್ಯಕ್ರಮ ತೆರೆಕಂಡಿತು. ಬಂಟರ ಬಂಟಾಯನ ಯಶಸ್ವಿಯಾಯಿತು.
✍🏻ಮಾಧವ. ಕೆ. ಅಂಜಾರು




Comments
Post a Comment