ನನಸು(ಕವನ -131)


ಕನಸು - ನನಸು
**********
ಭಾವನೆಗಳೊಂದಾದರೆ
ಜೀವನವು ಸುಗಮ
ದ್ವೇಷಗಳು ಅತಿಯಾದರೆ
ದೇಹಗಳು ನಿರ್ಣಾಮ
ಮನಸುಗಳು ಹತ್ತಿರವಾದರೆ
ಕನಸುಗಳು ನನಸು
ಹೃದಯಗಳೊಂದಾದರೆ
ಹಸನಾಗೋದು ಬದುಕು, 
ಬದುಕಿನಲಿ ಕರುಣೆಯಿರಲಿ
ಸ್ನೇಹದಲಿ ಸತ್ಯವಿರಲಿ
ಸಹಾಯದಲಿ ಪ್ರೀತಿಯಿರಲಿ
ಕೋಪದಲಿ ಹಿಡಿತವಿರಲಿ
ಲೋಪವು  ಸರಿಯಾಗಲಿ
ಲೋಕಕೆ ಒಳಿತಾಗಲಿ
ಅಧರ್ಮ ಅಳಿದು
ಧರ್ಮ ಮೆರೆಯಲಿ
       ✍️ಮಾಧವ ಅಂಜಾರು🌹








Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ