(ಲೇಖನ -4)ಸ್ವಚ್ಛತೆಯ ಮನೋಭಾವನೆ ಪ್ರತಿಯೊಬ್ಬ ಪ್ರಜೆಯ ಮನದಲ್ಲಿ ಮೂಡಬೇಕು, ಸ್ವಚ್ಛತೆಯನ್ನು ಕಾಪಾಡುವುದು ಎಲ್ಲರ ಜವಾಬ್ದಾರಿ ಕೂಡ

ಸ್ವಚ್ಛತೆಯ ಮನೋಭಾವನೆ ಪ್ರತಿಯೊಬ್ಬ ಪ್ರಜೆಯ ಮನದಲ್ಲಿ ಮೂಡಬೇಕು, ಸ್ವಚ್ಛತೆಯನ್ನು ಕಾಪಾಡುವುದು ಎಲ್ಲರ ಜವಾಬ್ದಾರಿ ಕೂಡ, ಸ್ವಚ್ಛತಾ ಆಂದೋಲವನ್ನು ಹಮ್ಮಿಕೊಳ್ಳುವ ಕೆಲವು ಸಂಘ ಸಂಘಟನೆಗಳು, ಸಮಾಜಸೇವಕರು, ವಯಕ್ತಿಕ ಆಸಕ್ತಿವುಳ್ಳ  ಕೆಲವು ಜನರು ಆಗಾಗ ಮಾಡುತ್ತಿರುತ್ತಾರೆ. ಆದರೆ ಅದನ್ನು ನೋಡಿ ಪಾಲಿಸುವ ಜನರು ಅತ್ಯಂತ ವಿರಳವಾಗಿದ್ದಾರೆ. ಕೇವಲ ಸಂಘ ಸಂಘಟನೆ, ಅಥವಾ ನಿಯಮಿತ ಜನಗಳು ಮಾತ್ರ  ಸ್ವಚ್ಛತೆಯನ್ನು ಕಾಪಾಡುವ ಜವಾಬ್ದಾರಿಯನ್ನು ಹೊಂದಿಲ್ಲ. ತಾವು ಉಪಯೋಗಿಸುತ್ತಿರುವ ಅದೆಷ್ಟು ವಸ್ತುಗಳನ್ನು ಬೇಕಾಬಿಟ್ಟಿ ಎಲ್ಲೆಂದರಲ್ಲಿ ಎಸೆಯುವ ಪ್ರವೃತ್ತಿಯುಳ್ಳ ಜನರು  ನೀವು ಆಗಾಗ ಎಲ್ಲಾ ಕಡೆನೂ ನೋಡುತ್ತಿರುತ್ತೀರಿ. ಇತ್ತೀಚೆಗೆ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳುವ ಜನರ ಸಂಖ್ಯೆ ಅಲ್ಪ ವೃದ್ಧಿ ಆಗುತ್ತಿದ್ದರೂ, ಅವರುಗಳು ಮಾಡುತ್ತಿರುವ ಕೆಲಸ ಕಾರ್ಯಗಳು  ಅಲ್ಪ ಬದಲಾವಣೆಯಷ್ಟೇ ತರಬಹುದು. ಹಾಗಾಗಿ  ಪ್ರತಿಯೊಬ್ಬರೂ ಎಲ್ಲೇ ಇರಲಿ, ದೇಶ-ವಿದೇಶ, ಊರು ಪರವೂರು ಎನ್ನದೆ, ತನ್ನ ಮನೆ,  ಕೆಲಸ ಮಾಡುವ ಪ್ರದೇಶಗಳಲ್ಲಿ ಉಂಟಾಗುವ ಕಸಗಳನ್ನು ನಿರ್ದಿಷ್ಟ ತೊಟ್ಟಿಯಲ್ಲಿ ಹಾಕುವ ಕಾರ್ಯವನ್ನು ಮಾಡಲೇಬೇಕು. ಇದರಿಂದ ಪ್ರಕೃತಿಯ  ಸೇವೆ, ಪ್ರಕೃತಿಯನ್ನು ಕಾಪಾಡಿದ ಪುಣ್ಯ ನಿಮ್ಮ ಕೈ ಸೇರಬಹುದು.



         ಪ್ಲಾಸ್ಟಿಕ್ ಮತ್ತು ಕಾಗದಗಳ  ಬಳಕೆಗೆ ಸರ್ಕಾರ ಸಾಕಷ್ಟು ಕಾನೂನಿನ ತಿದ್ದುಪಡಿ ಮಾಡಿದ್ದರೂ, ಕಸಗಳನ್ನು ಎಲ್ಲೆಂದರಲ್ಲಿ ಬಿಸಾಡುವ ಜನಗಳು  ಕಡಿಮೆಯಾಗಿಲ್ಲ. ಈಗಲೂ ವಾಹನದಿಂದ ಹೊರಗಡೆ ಎಸೆಯುವುದು, ದಾರಿ ಮಧ್ಯದಲ್ಲಿ  ಕಸಗಳನ್ನು ಬಿಸಾಕುವುದು, ನದಿ ತಟಗಳಲ್ಲಿ ಸಮುದ್ರ ಬದಿಗಳಲ್ಲಿ ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಚೆಲ್ಲುವುದು, ಅಲ್ಲಲ್ಲಿ ಕಸದ ತೊಟ್ಟಿ ಗಳಿದ್ದರೂ ಕಸವನ್ನು ಅದರೊಳಗೆ ಹಾಕದೆ  ಕಸದ ತೊಟ್ಟಿಯ ಹೊರಗೆ ಬಿಸಾಕುವುದು, ದಟ್ಟಾರಣ್ಯ, ಬೆಟ್ಟಗುಡ್ಡಗಳಲ್ಲಿ, ತಿರುಗಾಡಲು ಹೋದಾಗ ಕೊಂಡೊಯ್ದ ವಸ್ತುವನ್ನು ಅಲ್ಲಿಯೇ ಚೆಲ್ಲಿ ಬರುವುದು. ಧಾರಾಕಾರ ಮಳೆ ಬಂದು ಚೆಲ್ಲಿದ ಹೆಚ್ಚಿನ ಕಸದ ರಾಶಿಗಳು ನದಿ ಸಮುದ್ರ ಸೇರಿ ಸಮುದ್ರ ಜೀವಿಗಳನ್ನು ನಾಶಪಡಿಸಿ ಇನ್ನಷ್ಟು ತೊಂದರೆಗಳನ್ನು ಅನುಭವಿಸಲು ಆಹ್ವಾನವಿಟ್ಟು, ಕೊನೆಗೆ ಪಶ್ಚಾತಾಪಪಡುವ ಜನರು ನಾವೆಲ್ಲರೂ.

          ಈ ಭೂಮಿಯಲ್ಲಿ ಪ್ರತಿಯೊಂದು ಜೀವಿಗೆ ಬದುಕುವ ಹಕ್ಕಿದೆ, ಮಾನವರು ಅತೀ ವಿಕೃತಿಯನ್ನು ಮೆರೆದು ಪ್ರಕೃತಿಯ ನಿಯಮದಲ್ಲಿ ಚೆಲ್ಲಾಟವನ್ನು ಈಗಾಗಲೇ ಅತೀ ಹೆಚ್ಚಾಗಿಯೇ ಮಾಡುತ್ತಿದ್ದಾನೆ. ಅದರ ಪರಿಣಾಮವನ್ನು ಆಗಾಗ ಎದುರಿಸಲಾಗದೆ ಪ್ರಕೃತಿಯ ಕೋಪಕ್ಕೆ ಒಳಗಾಗಿ ಸದ್ದಿಲ್ಲದೆ ಮಣ್ಣಾಗುತ್ತಿದ್ದಾನೆ. ಪ್ರಕೃತಿಯನ್ನು ಕಾಪಾಡುವುದು ಮನುಷ್ಯರ ಕರ್ತವ್ಯ, ಇನ್ನಿತರ ಜೀವಿಗಳನ್ನು ಹಾಯಾಗಿ ಬದುಕಲು ಬಿಡುವುದು ಕೂಡ ಮನುಷ್ಯನ ಕರ್ತವ್ಯ.  ಭಾರತದ ಅನುರಾಗ ಗುಂಪಿನಲ್ಲಿ ಒಂದಷ್ಟು ಪ್ರಕೃತಿಯ ಆರಾಧಿಸುವವರು, ಒಂದಷ್ಟು ಜನರು ಪ್ರಾಣಿ ಪಕ್ಷಿಗಳ ಆರೈಕೆ ಮಾಡುವವರು ಇನ್ನಷ್ಟು ಹೆಚ್ಚಲಿ. ಅವರನ್ನು ಭಾರತದ ಅನುರಾಗ ಗುಂಪು ಬಹಳ ಗೌರವದಿಂದ ಮತ್ತು ಆದರ್ಶ ವ್ಯಕ್ತಿಗಳಾಗಿ ಪರಿಗಣಿಸುತ್ತದೆ.

ನಿಮಗೆಲ್ಲರಿಗೂ ಶುಭವಾಗಲಿ

ಬರಹ : ಮಾಧವ. ಕೆ. ಅಂಜಾರು 







          






 

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ