(ಲೇಖನ -5)ಜೀವನದಲ್ಲಿ ತೃಪ್ತಿಯಿಂದ ಬದುಕುವವರು ಯಾರು? ಜೀವನಪೂರ್ತಿ ಅತೃಪ್ತರಾಗಿ ಇರುವವರು ಯಾರು? ಎಲ್ಲರಿಗಾಗಿ ಬದುಕುವವರು ಯಾರು?
ಜೀವನದಲ್ಲಿ ತೃಪ್ತಿಯಿಂದ ಬದುಕುವವರು ಯಾರು? ಜೀವನಪೂರ್ತಿ ಅತೃಪ್ತರಾಗಿ ಇರುವವರು ಯಾರು? ಎಲ್ಲರಿಗಾಗಿ ಬದುಕುವವರು ಯಾರು? ಇಂತಹ ಪ್ರಶ್ನೆಗೆ ಉತ್ತರ ಬಹಳ ಸುಲಭವಾಗಿ ಕೊಡಲು ಸಾಧ್ಯವಿಲ್ಲ, ತೃಪ್ತಿ ಅನ್ನುವುದು ನಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಇರುವುದನ್ನು ಸಂತೋಷದಿಂದ ಒಪ್ಪಿಕೊಂಡು ಬದುಕುವುದು. ನಮ್ಮಲಿರುವ ಪ್ರತೀ ವಸ್ತು, ಹುದ್ದೆ, ಮತ್ತು ನಮ್ಮ ಮೇಲಿರುವ ಪ್ರೀತಿಯನ್ನ ಹೆಮ್ಮೆಯಿಂದ ಒಪ್ಪಿಕೊಳ್ಳುವ ಮನುಷ್ಯರು ಯಾವತ್ತೂ ತೃಪ್ತಿಯಿಂದ ಬದುಕುತ್ತಾರೆ. ಮನುಜನಾಗಿ ಜನಿಸಿದವರು ಬಹಳಷ್ಟು ವಿರಳ ಜನರು ತೃಪ್ತಿಯಾಗಿದ್ದೇನೆ ಎಂದು ಹೇಳುವುದನ್ನು ನೀವೆಲ್ಲರೂ ಕೇಳಿರುತ್ತಿರಿ. ತೃಪ್ತಿಯಾಗಿದ್ದೇನೆ ಎಂದು ಹೇಳುವವರು ಹೆಚ್ಚಾಗಿ ಆಸೆಗಳ ಹಿಂದೆ ಸುತ್ತಾಡುವುದಿಲ್ಲ.
ಅತೃಪ್ತರು ಆಸೆಗಳ ದಾಸರು, ಅವರು ಯಾವ ಕೆಲಸವನ್ನು ಒಪ್ಪುವುದಿಲ್ಲ, ಹೋಗಳುವುದಿಲ್ಲ, ಮತ್ತವರಿಗಾಗಿ ಬಿಟ್ಟು ಕೊಡುವುದಿಲ್ಲ, ತಾನೊಬ್ಬನೇ ಶ್ರೇಷ್ಠ ಎಂದು ತೋರಿಸುತ್ತಾರೆ, ತಾನೊಬ್ಬನೇ ಸಾಹಸಿ ಎಂದು ಹೇಳಿಕೊಳ್ಳುತ್ತಾರೆ, ತಮ್ಮ ಚಟುವಟಿಕೆಗಳನ್ನು ತೊರ್ಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ, ತನ್ನ ಸುತ್ತಲಿರುವ ಜನರನ್ನು ಓಲೈಸಲು ಹರಸಾಹಸ ಪಡುತ್ತಾ, ತನ್ನ ಸ್ವಂತಿಕೆಗಾಗಿ ತೃಪ್ತಿಯನ್ನು ತೊರ್ಪಡಿಸಿ ಜೀವನಪರ್ಯಂತ ಅತೃಪ್ತರಾಗಿ, ಪಾಲಿಗೆ ಬಂದದ್ದೇ ಪಂಚಾಮೃತವೆಂದು ಜೀವನಪೂರ್ತಿ ಒದ್ದಾಡುತ್ತಾರೆ, ಅತೃಪ್ತರಾಗಿಯೇ ಆಗಲುತ್ತಾರೆ.
ಎಲ್ಲರಿಗಾಗಿ ಬದುಕುವವರು, ತನಗಿರುವ ಕಷ್ಟವನ್ನು ಬದಿಗೊತ್ತಿಯಾದರೂ ಮತ್ತೊಬ್ಬರ ಸಹಾಯಕ್ಕಾಗಿ ಧಾವಿಸುತ್ತಾರೆ, ತನ್ನ ಕಷ್ಟವೇ ಅನ್ಯರ ಕಷ್ಟವೆಂದು ಹೃದಯಪೂರ್ವಕವಾಗಿ ಮಾಡುತ್ತಾರೆ, ಯಾವುದೇ ಕಲ್ಮಶವಿಲ್ಲದೆ ಜೀವಿಸಲು ಪ್ರಯತ್ನಿಸುತ್ತಾರೆ. ಪ್ರತಿಯೊಂದು ಕೆಲಸದಲ್ಲಿ ಸತ್ಯವನ್ನು ಪಾಲಿಸುತ್ತಾರೆ. ಸೌಮ್ಯ ಸ್ವಭಾವ ಮತ್ತು ಪ್ರತೀ ಮಾತಲ್ಲೂ ಗೌರವ ನಿಸ್ಸಂದೇಹವಾಗಿ ವ್ಯವಹಾರವನ್ನು ಮಾಡುತ್ತ, ದೇವರಂತೆ ಬದುಕುತ್ತಾರೆ ಮತ್ತು ಅತ್ಯಂತ ತೃಪ್ತಿಯಿಂದ ಜೀವಿಸುತ್ತಾರೆ.
ಭಾರತದ ಅನುರಾಗದ ಈ ಗುಂಪು ಎಲ್ಲರಿಗಾಗಿ ಬದುಕುವ ಜಾಲಬಂಧ , ಸೌಜನ್ಯತೆ, ಪ್ರೀತಿ ಬಾಂಧವ್ಯ ಮತ್ತು ಗೌರವಕ್ಕೆ ಮಾನ್ಯತೆ ಕೊಟ್ಟು ಭಾರತ ಮಣ್ಣಿನ ಮುತ್ತುಗಳಾಗಿ ಜೀವಿಸಲು ಶ್ರಮಪಡುವ ಜನರು, ಇಂತಹ ಜಾಲಬಂಧದಲ್ಲಿ ಸೇರಿರುವ ಎಲ್ಲರಿಗೂ ನನ್ನ ನಮನಗಳು.
ಉತ್ತಮ ಚಿಂತನೆ ಮತ್ತು ಭಾರತದ ಅತ್ಯುತ್ತಮ ಪ್ರಜೆಗಳಾಗಿ ಮಾರ್ಪಟ್ಟು ಇನ್ನಷ್ಟು ಉತ್ತಮವಾದ ಕೆಲಸಗಳನ್ನು ಮಾಡುತ್ತ ಭಾರತ ಮಣ್ಣಿನ ಮುತ್ತುಗಳು ನಾವೆಂದು ಹೆಮ್ಮೆಯಿಂದ ಹೇಳೋಣ.
ನಿಮ್ಮ ಪ್ರೀತಿಯ
: ಮಾಧವ ನಾಯ್ಕ್ ಅಂಜಾರು
Comments
Post a Comment