ಆಗರವೇ ನೀನು (ಕವನ -125)
ಆಗರವೇ ನೀನು
*****-******
ನೀನೆಂದು ನನಗೆ ಗೊತ್ತು
ನಾನೇನೆಂದು ನಿನಗೆ ಗೊತ್ತು
ನಿನ್ನಲಿರುವ ಪ್ರೀತಿ
ಆಗಿರಲೆನ್ನ ಸಂಪತ್ತು
ನನ್ನಲಿರುವ ಪ್ರೀತಿ
ನಿನಗಾಗಿರಲಿ ಸ್ವತ್ತು,
ಎನ್ನ ಮನದಾಸೆ ಹಲವು
ನಿನ್ನೊಲವ ಗೀತೆ ಹೂವು
ನೀ ನಿನ್ನ ಜೊತೆಗಿರಲು
ಜೀವನ ಸವಿ ಜೇನು
ಇಂದು ಜೊತೆಯಾಗಿ
ನಾಳೆಯು ಹಿತವಾಗಿ
ಸಾಗುತಿರಲಿ ನಮ್ಮ ಬದುಕು,
ಗೆಳೆಯನಾಗಿ ನೀನು
ಗೆಳತಿಯಾಗಿಯೂ ನೀನು
ಅಮ್ಮನಾಗಿಯೂ ನೀನು
ಎಲ್ಲಾ ಸಂಭಂದಗಳ
ಆಗರವೇ ನೀನು
ನನ್ನ ನಿನ್ನ ಬಾಂಧವ್ಯ
ಚಿರವಾಗಿರಲಲ್ಲ್ವೇನು !
*****-******
ನೀನೆಂದು ನನಗೆ ಗೊತ್ತು
ನಾನೇನೆಂದು ನಿನಗೆ ಗೊತ್ತು
ನಿನ್ನಲಿರುವ ಪ್ರೀತಿ
ಆಗಿರಲೆನ್ನ ಸಂಪತ್ತು
ನನ್ನಲಿರುವ ಪ್ರೀತಿ
ನಿನಗಾಗಿರಲಿ ಸ್ವತ್ತು,
ಎನ್ನ ಮನದಾಸೆ ಹಲವು
ನಿನ್ನೊಲವ ಗೀತೆ ಹೂವು
ನೀ ನಿನ್ನ ಜೊತೆಗಿರಲು
ಜೀವನ ಸವಿ ಜೇನು
ಇಂದು ಜೊತೆಯಾಗಿ
ನಾಳೆಯು ಹಿತವಾಗಿ
ಸಾಗುತಿರಲಿ ನಮ್ಮ ಬದುಕು,
ಗೆಳೆಯನಾಗಿ ನೀನು
ಗೆಳತಿಯಾಗಿಯೂ ನೀನು
ಅಮ್ಮನಾಗಿಯೂ ನೀನು
ಎಲ್ಲಾ ಸಂಭಂದಗಳ
ಆಗರವೇ ನೀನು
ನನ್ನ ನಿನ್ನ ಬಾಂಧವ್ಯ
ಚಿರವಾಗಿರಲಲ್ಲ್ವೇನು !
Comments
Post a Comment