ಕೃತಕ ಬುದ್ಧಿಮತ್ತೆ- (Artificial Inteligence) ಮತ್ತು ಬುದ್ಧಿವಂತಿಕೆ.
ಕೃತಕ ಬುದ್ಧಿಮತ್ತೆ- (Artificial Inteligence) ಮತ್ತು ಬುದ್ಧಿವಂತಿಕೆ.
ವಿಜ್ಞಾನ ಮುಂದುವರಿಯುತ್ತಿರುವಂತೆ ತಾಂತ್ರಿಕ ಕ್ಷೇತ್ರದಲ್ಲಿ ಬಹಳಷ್ಟು ಬೆಳವಣಿಗೆಗಳನ್ನು ಕಾಣುತ್ತಿರುವ ನಾವುಗಳು, ಇತ್ತೀಚಿನ ದಿನಗಳಲ್ಲಿ AI ಟೆಕ್ನಾಲಜಿಯನ್ನು ಹೆಚ್ಚಾಗಿ ಉಪಯೋಗಿಸಿಕೊಳ್ಳುತ್ತಿದ್ದೇವೆ. ಅದರಲ್ಲೂ ವಿಭಿನ್ನ ಕಂಪನಿಗಳ ವಿವಿಧ ತರಹದ ಅಪ್ಲಿಕೇಶನ್ ಅಭಿವೃದ್ಧಿ ಪಡಿಸಿ ತನ್ನ ಗ್ರಾಹಕರನ್ನು ಬೆಳೆಸಿಕೊಳ್ಳುತ್ತಿದೆ. ಈ AI ಟೆಕ್ನಾಲಜಿ, ರೋಬೋಟ್, ಕಂಪ್ಯೂಟರ್, ವಿಮಾನ, ಮೊಬೈಲ್ ಹಾಗೂ ಯುದ್ಧ ತಂತ್ರಗಳಲ್ಲಿ ಕೂಡ ಉಪಯೋಗಿಸುವ ಮಟ್ಟಿಗೆ ಬೆಳೆದಿದ್ದು ಇದೊಂದು ಬಹಳ ದೊಡ್ಡ ಬದಲಾವಣೆಯಾಗಿದೆ. ಅದರೊಂದಿಗೆ ಅವಲಂಬಿತಾರಗುತ್ತಿರುವ ನಾವು ನಮ್ಮ ಸ್ವತಃ ಬುದ್ದಿವಂತಿಕೆಯನ್ನು ತೀರಾ ಕಡಿಮೆಯಾಗಿ ಉಪಯೋಗಿಸುವ ಮಟ್ಟಕ್ಕೆ ಬರುತ್ತಿದ್ದೆವೋ ಅನಿಸುತ್ತಿದೆ. ಅದರಲ್ಲೂ ಒಂದು ಕಾಲದಲ್ಲಿ ತೆಗೆದ ಕಪ್ಪು ಬಿಳಿ ಚಿತ್ರಗಳನ್ನು ಇಂದಿನ ಯುಗದಲ್ಲಿ ಕುಣಿಯುವಂತೆ, ಮಾತನಾಡುವಂತೆ ಮಾಡುತ್ತಿರುವ AI ಇನ್ನೂ ಮುಂದಿನ ದಿನಗಳಲ್ಲಿ ಏನೆಲ್ಲಾ ಮಾಡಬಹುದು ಅಲ್ಲವೇ? ಇಲ್ಲಿ ಮನುಷ್ಯನ ಬುದ್ದಿವಂತಿಕೆ ಏನನ್ನೂ ಮಾಡಬಹುದು ಎಂಬ ಸಂದೇಶ ಕೊಡುತ್ತಿದೆ.
ಕೃತಕ ಬುದ್ದಿವಂತಿಕೆ ಬುದ್ದಿವಂತರಿಂದಲೇ ಮಾಡಲ್ಪಟಿದ್ದು ಆದರೆ ಅದನ್ನು ತಿಳಿಯದ ಇಂದಿನ ಕೆಲವು ಮಕ್ಕಳು ತನ್ನ ದೈನಂದಿನ ಚಟುವಟಿಕೆಗಳಲ್ಲಿ ಅತಿಯಾಗಿ ಅವಲಂಬಿತರಾಗುತ್ತಿದ್ದಾರೆ ಮತ್ತು AI ಬಗ್ಗೆ ತಿಳಿಯದೇ, ಎಲ್ಲಾ ವಿಷಯದ ಬಗ್ಗೆ ಆಗಾಗ್ಗೆ ಪ್ರಶ್ನೆಯನ್ನು ಮಾಡುವ ಹಲವರು. ಸಾಮಾನ್ಯವಾಗಿ ಮಕ್ಕಳು AI ಉತ್ತರಿಸಲಾಗದ ಪ್ರಶ್ನೆಯನ್ನು ಕೇಳುತ್ತಾರೆ ಮತ್ತು ಯಾವುದು ಕೇಳಬಾರದೋ ಅದನ್ನೂ ಕೇಳುತ್ತಾರೆ ಒಂದು ವಿಧದಲ್ಲಿ ಇದರಲ್ಲಿ ಎಷ್ಟು ಪ್ರಯೋಜನ ಇದೆಯೋ ಅಷ್ಟೇ ಅಪಾಯ ಕೂಡ ಇದೆ ಅನಿಸುತ್ತದೆ. ತುಂಬಾ ಸಮಯ ತೆಗೆದುಕೊಳುತಿದ್ದ ಇ ಮೇಲ್, ಅಥವಾ ಯಾವುದೇ ಡ್ರಾಫ್ಟ್ ಗಳು ಇವಾಗ ಕೆಲವೇ ಕ್ಷಣದಲ್ಲಿ ವಿವಿಧ ರೀತಿಯಲ್ಲಿ ನಮಗೆ ಒದಗಿಸುವ ಚಾಟ್ ಜಿ.ಪಿ.ಟಿ ಯಂತಹ ಅನೇಕ ಅಪ್ಲಿಕೇಶನ್ ಗಳು ಇಂದಿನ ದಿನಗಳನ್ನು ಮತ್ತಷ್ಟು ಸುಲಭಗೋಳಿಸುತ್ತಿದೆ.
ನಮ್ಮ ಬುದ್ದಿವಂತಿಕೆಯನ್ನು ಇನ್ನೂ ಹೆಚ್ಚಿಸುವ ಕಾಲ ಎದುರಾಗಿದೆ, ಎಲ್ಲರೂ ತಿಳಿದಂತೆ ನಮ್ಮನ್ನು ನಾವು ಕಾಲಕ್ಕೆ ತಕ್ಕಂತೆ ಅಪ್ಡೇಟ್ ಮಾಡಿಕೊಳ್ಳದಿದ್ದರೆ ನಾವು ಹಿಂದುಳಿಯುತ್ತೇವೆ ಮತ್ತು ಜಗತ್ತಿನ ಪೈಪೋಟಿಯಲ್ಲಿ ಹಿಂದಿನ ಸಾಲನ್ನು ಸೇರುತ್ತೇವೆ. ಮುಂದಿನ ದಿನಗಳಲ್ಲಿ AI ಯ ಉಪಯೋಗ ಹೆಚ್ಚಾಗುತ್ತಲೇ ಹೋಗುತ್ತದೆ ಅದರೊಂದಿಗೆ ನಮ್ಮ ಬುದ್ದಿಯ ಉಪಯೋಗವನ್ನು ಕಡಿಮೇಗೊಳಿಸುತ್ತ ಹೋಗುತ್ತೇವೆ, ಹಾಗಾಗಿ ನಮ್ಮ ಮುಂದಿನ ಪೀಳಿಗೆಗೆ ಈ ಬಗ್ಗೆ ಹೆಚ್ಚು ಮಾಹಿತಿಯನ್ನು ಒದಗಿಸಿದರೆ ಉಪಯೋಗ ಆಗಬಹುದು.
ಮುಂದಿನ ಪೀಳಿಗೆಗೆ ವಾಸ್ತವ ಬುದ್ಧಿಮತ್ತೆ ಮತ್ತು ಕೃತಕ ಬುದ್ಧಿಮತ್ತೆಯ ಬಗ್ಗೆ ಇರುವ ವ್ಯತ್ಯಾಸವನ್ನು ಹೇಳಿ ಕೊಡುವ ಸಂಧರ್ಭಗಳು ಎದುರಾಗಬಹುದು, ಮಕ್ಕಳಿಗೆ ಹೆಚ್ಚಾಗಿ ಪ್ರಾಪಂಚಿಕ ಜ್ಞಾನ, ಸಂಸ್ಕಾರ, ಕೃಷಿ, ತಾಂತ್ರಿಕತೆ ಮತ್ತು ಆರೋಗ್ಯ ಇವೆಲ್ಲದರ ಕುರಿತು ವ್ಯತ್ಯಾಸಗಳನ್ನು ತಿಳಿಸುತ್ತ AI ಯ ಉಪಯೋಗದೊಂದಿಗೆ ತನ್ನ ಸ್ವಂತ ಬುದ್ದಿಯನ್ನು ಹೆಚ್ಚಾಗಿ ಉಪಯೋಗಿಸುವ ಕುರಿತು ಅರಿವು ಮೂಡಿಸಬೇಕಾಗಿದೆ.
✍🏻ಮಾಧವ. ಕೆ. ಅಂಜಾರು

Comments
Post a Comment