ಜೀವ ವೀಣೆ (ಕವನ -135)


ತಂತಿ ನುಡಿಸೋಕೆ ತಿಳಿಯದೆನಗೆ
ಈ ಜೀವನ ಸಂತೆಲಿ
ಡಂಗುರ ಸಾರೋಕೆ ಬರದು,
ನನ್ನಲಿರೋ  ಪ್ರೇಮವ
ನಟಿಸಿ ತೋರಿಸಲೂ ಬರದು
ಪೊಳ್ಳು ಭರವಸೆ ಇರದು
ನನ್ನ ಪ್ರೇಯಸಿ ನೀನು
ನಿನ್ನಬಿಟ್ಟು ಈ ಜೀವವಿರದು, 
ಜೀವ ವೀಣೆ ನುಡಿಸೇನು
ಪ್ರಾಣವನ್ನೇ ಕೊಡುವೆನು
ನಿಂತ ನೀರಾಗದೆ,  ಎಂದೂ
ಹರಿವ ನದಿಯಂತಿರುವೆನು
ಮೋಡದಿ  ಮಂಕಾಗದಿರು
ನೀ ಈ   ಬಡಜೀವದುಸಿರು
ಎನ ಹೆಸರ ಹೇಳುತಲೆ
ನನ್ನುಸಿರು ಕಾಪಾಡುತಿರು, 
        ✍️ಮಾಧವ ಅಂಜಾರು 🌹










  







Comments

Popular posts from this blog

( ಲೇಖನ -122) ಭೂ - ಕೈಲಾಸ

ಲೇಖನ -117) ವಿದೇಶದಲ್ಲಿ ಪೊಲೀಸರು ಸಾರ್ವಜನಿಕರಿಗೆ ಹೇಗೆಲ್ಲ ಸಹಾಯ ಮಾಡುತ್ತಾರೆ ನೀವೇ ನೋಡಿ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ