(ಲೇಖನ -13)ಯಾರಿಗಾದರೂ ಸಹಾಯ ಮಾಡಿದ್ದರೆ, ಇನ್ನೊಬ್ಬರಿಗೆ ತಿಳಿಯಬೇಕಾಗಿಲ್ಲ, ನಿಸ್ವಾರ್ಥವಾಗಿ ಮಾಡು!
ಯಾರಿಗಾದರೂ ಸಹಾಯ ಮಾಡಿದ್ದರೆ, ಇನ್ನೊಬ್ಬರಿಗೆ ತಿಳಿಯಬೇಕಾಗಿಲ್ಲ, ನಿಸ್ವಾರ್ಥವಾಗಿ ಮಾಡು!
ನನ್ನ ಆತ್ಮೀಯರೊಬ್ಬರ ಮಾತು, ಮಾತನ್ನಾಡುವುದು ಸುಲಭ ಆಡಿದ ಮಾತನ್ನು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳುವವರು ಬಹಳ ವಿರಳ. ಅದೆಷ್ಟು ವರುಷದ ಗೆಳೆತನ, ಯಾವುದೇ ಅತಿಯಾಸೆ, ಅತೀ ಮಾತು, ಇನ್ನೊಬ್ಬರಿಗೆ ಕೇಡನ್ನು ಬಯಸಿರುವ ವ್ಯಕ್ತಿಯಂತೂ ಅಲ್ಲವೇ ಅಲ್ಲ. ಸರ್ ನಿಮ್ಮಂತಿರುವ ವ್ಯಕ್ತಿ ಸದ್ದು ಮಾಡದೇ ಅದೆಷ್ಟು ಜನರಿಗೆ ಅಪತ್ಕಾಲದಲ್ಲಿ ಸಹಾಯ ಮಾಡುತ್ತಿರುತ್ತಾರೆ ಅಲ್ಲವೇ, ಅದು ಇನ್ನೊಬರಿಗೆ ಪ್ರೇರಣೆ ಅಲ್ಲವೇ ಅಂದುಬಿಟ್ಟೆ,.. ಅವರ ಪ್ರತಿಯುತ್ತರ ನನ್ನ ಆತ್ಮಕ್ಕೆ ಗೊತ್ತಿದ್ದರೆ ಸಾಕು ಮತ್ತು ಮೇಲೊಬ್ಬ ದೇವನಿದ್ದಾನೆ ಅವನಿಗೆ ನನ್ನ ಲೆಕ್ಕಾಚಾರ ಗೊತ್ತಿರುತ್ತದೆ ಮತ್ಯಾರಿಗೂ ಬೇಕಾಗಿಲ್ಲ ಅವನ ಆಶೀರ್ವಾದ ಇದ್ದರೆ ಸಾಕು ?
ತಿಳಿಯಬೇಕಾದ್ದು ತುಂಬಾನೆ ಇದೆ, ನಿಮ್ಮ ಸುತ್ತಮುತ್ತಲೂ ಇಂತಹ ಜನರು ಇರಬಹುದು, ಇವರೆಲ್ಲರೂ ಸಮುದ್ರದ ಆಳದಲ್ಲಿ ಸಿಗುವ ಮುತ್ತಿನಂತೆ ಬಹಳ ವಿರಳ ಮತ್ತು ಮೌಲ್ಯವುಳ್ಳವರು. ಜೀವನವೆಂದರೆ ಏನೆಂದು ಅರ್ಥ ಮಾಡಿಕೊಂಡಿರುವವರು. ಹೊಗಳಿಕೆ, ಆಡಂಭರ ಬಯಸದೆ, ಸತ್ಯವಂತರಾಗಿ ಬಾಳುವವರು. ಬದುಕಿರುವಷ್ಟು ದಿನ ಆ ದೇವರು ನನ್ನನ್ನು ಕಾಪಾಡುತ್ತಿರಲಿ ಅನ್ನುವ ವಿಶ್ವಾಸದಿಂದ ಬದುಕುವವರು.
ಅಂತವರ ಗೆಳೆತನ ಮಾಡಿಕೊಳ್ಳಿ, ಅವರಂತೆ ಬದುಕಲು ಶ್ರಮಿಸಿ ಇರುವ ದಿನಗಳಲ್ಲಿ ಉಸಿರಲ್ಲಿ ಉಸಿರಾಗಿ ಬಾಳುವ ಜನರೊಂದಿಗೆ ಬೆರೆಯುವ ಪದ್ದತಿಯನ್ನು ಬೆಳೆಸಿಕೊಳ್ಳಿ ಅವಾಗ ಅವರಿಂದ ತೊಂದರೆಗಳು ಅಥವಾ ನೋವು ನಿಮಗೆ ಸಿಗುವುದಿಲ್ಲ. ನಾನೆಂಬ ಬಲೆಯೋಳು ಬೀಳದೆ ನಾವೆಂಬ ದಾರಿಯಲಿ ನಡೆದಾಡು.
ಭಾರತದ ಅನುರಾಗದ ಹಾರೈಕೆ ಮುತ್ತುಗಳಂತಹ ವ್ಯಕ್ತಿತ್ವವುಳ್ಳವರಿಗೆ.
ಬರಹ :ಮಾಧವ ಕೆ. ಅಂಜಾರು.
Comments
Post a Comment