ಕಹಿ ಸತ್ಯ (ಕವನ 30)
ನಿನ್ನ ಭಕ್ತಿಗೆ ಮಾತ್ರ
ದೇವರೊಲಿಯೋದು ಗೊತ್ತಿದ್ದರೂ
ಗುಡಿಗಳ ಮುಂದೆ ಹುಂಡಿ,
ನಿನ್ನ ಪೂಜೆಗೆ ಮಾತ್ರ ದೇವರೊಲಿಯೋದು
ಪೂಜೆಗೆ ವೇಷ ಭೂಷಣ
ಅದರೊಂದಿಗೆ ಧನಕ್ಕಾಗಿ ಹರಿವಾಣ
ದೇವರಿಗೆ ಭಕ್ತರೆಲ್ಲ ಸಮಾನ
ಊಟಕ್ಕೆ ಕುಳಿತಾಗ
ಶ್ರೇಷ್ಠ ಜನರೆಂದು ಹೇಳುವರು ನಿಧಾನ
ಕಳ್ಳನೆಂದು ಗೊತ್ತಿದ್ದರೂ
ಕಳ್ಳನೇ ಅಲ್ಲವೆಂದು ವಾದಿಸುವ
ಕೆಲವು ಕರಿಕೋಟು ಜನ!
Comments
Post a Comment