ದೇವರ ಭಯ (ಕವನ -108)


ದೇವರ ಹೆಸರಲಿ
ಹಣ ವಸೂಲಿಗರೆಲ್ಲ
ಸಿರಿವಂತರಾದರೆ,
ದೇವರ ಭಯದಲಿ
ಹಣ ಹಾಕಿದವರೆಲ್ಲ
ಬಡವರೇ.
ಹಣಕ್ಕಾಗಿ ಪ್ರಸಾದ
ಹಂಚಿದವರೆಲ್ಲ
ಸಿರಿವಂತರಾದರೆ,
ಊಟಕ್ಕಿರದೆಯೂ
ಹುಂಡಿ ತುಂಬಿದವರೆಲ್ಲ
ಬಡವರೇ.
ದೇವರ ಭಯ
ಇಲ್ಲದಿರುವುದು
ಮೋಸಗಾರರಿಗಾದರೆ,
ದೇವರ ದಯ
ಇರುವುದೂ
ಬಡವರಿಗೆ.
✍️ಮಾಧವ ಅಂಜಾರು 🌹

Comments

Popular posts from this blog

( ಲೇಖನ -122) ಭೂ - ಕೈಲಾಸ

ಲೇಖನ -117) ವಿದೇಶದಲ್ಲಿ ಪೊಲೀಸರು ಸಾರ್ವಜನಿಕರಿಗೆ ಹೇಗೆಲ್ಲ ಸಹಾಯ ಮಾಡುತ್ತಾರೆ ನೀವೇ ನೋಡಿ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ