(ಲೇಖನ -10) ನಿನ್ನ ಹೆಸರಲೊಂದು ಗಿಡ ಬೆಳೆಸು, ನಿನ್ನ ಹೆಸರಲೊಂದು ಮರವನ್ನುಳಿಸು, ನಾಗರೀಕತೆ ಬೆಳೆದಂತೆ ಪ್ರಾಣಿ ಪಕ್ಷಿ, ಪ್ರಕೃತಿಯನ್ನು ನಾಶಪಡಿಸುತ್ತಿರುವ ನಾವುಗಳು, ನಾಳೆಯ ದಿನವನ್ನು ಬಹಳ ಶೋಚನಿಯ ಸ್ಥಿತಿಗೆ ತಲುಪಿಸುತ್ತಿದ್ದೇವೆ,

ನಿನ್ನ ಹೆಸರಲೊಂದು ಗಿಡ ಬೆಳೆಸು, ನಿನ್ನ ಹೆಸರಲೊಂದು ಮರವನ್ನುಳಿಸು, ನಾಗರೀಕತೆ ಬೆಳೆದಂತೆ ಪ್ರಾಣಿ ಪಕ್ಷಿ, ಪ್ರಕೃತಿಯನ್ನು ನಾಶಪಡಿಸುತ್ತಿರುವ ನಾವುಗಳು, ನಾಳೆಯ ದಿನವನ್ನು ಬಹಳ ಶೋಚನಿಯ ಸ್ಥಿತಿಗೆ ತಲುಪಿಸುತ್ತಿದ್ದೇವೆ,



       ಅಭಿವೃದ್ಧಿ ಎನ್ನುವ ಕಾರಣವಿಟ್ಟು, ಸುತ್ತಮುತ್ತಲಿರುವ ಕಾಡು ಪ್ರದೇಶವನ್ನು ಪಟ್ಟಣವಾಗಿ ಮಾರ್ಪಡಿಸಿ, ಶುದ್ಧ ಗಾಳಿ, ನೀರು, ಸ್ವಚ್ಛ ಪರಿಸರದಿಂದ ದಿನದಿಂದ ದಿನಕ್ಕೆ ದೂರವಾಗುತ್ತಿದ್ದೇವೆ. ಹತ್ತು ಹದಿನೈದು ಅಥವಾ ಇಪ್ಪತ್ತು ವರುಷಗಳ ಹಿಂದೆ ಇದ್ದ ನಮ್ಮ ಹಳ್ಳಿ ಪ್ರದೇಶಗಳು ಇಂದಿನ ದಿನಗಳಲ್ಲಿ ಸಂಪೂರ್ಣವಾಗಿ ಪಟ್ಟಣ, ಮಾನವ ವಸತಿ ಪ್ರದೇಶಗಳಿಂದ ಕೂಡಿದ್ದು, ನೀರಿಗೂ ಪರದಾಟ ಮಾಡುವ ಸ್ಥಿತಿಗೆ ತಲುಪಿದ್ದೇವೆ. ಇದಕ್ಕೆ ಯಾರು ಜವಾಬ್ದಾರರು ಅಲ್ಲವೇ ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಬಂದಿದ್ದರೆ, ಅದಕ್ಕೆ ನಾವೆಲ್ಲರೂ ಜವಾಬ್ದಾರರು ಎಂದು ಹೇಳಬಹುದು. ಒಂದು ಮರವನ್ನು ಕಡಿಯುವ ಮೊದಲು ಎರಡು ಗಿಡವನ್ನು ನೆಡುವ ಕೆಲಸವನ್ನು ನಾವೆಲ್ಲರೂ ಸೇರಿ ಮಾಡಿದರೆ ಮುಂದಿನ ದಿನಗಳಲ್ಲಿ ಅಲ್ಪವಾದರೂ ಹಸಿರು ಭೂಮಿಯನ್ನು ಕಾಣಬಹುದು. ತಪ್ಪಿದ್ದಲ್ಲಿ ನೆರೆ, ಭೂಕುಸಿತ, ಮತ್ತಿತರ ಪ್ರಾಕೃತಿಕ ವಿಕೋಪಕ್ಕೆ ಒಳಗಾಗಿ ಮನುಜ ಸಂಕುಲವೇ ನಾಶವಾಗುವ ಮಟ್ಟಕ್ಕೆ ತಲುಪುವ ದಿನಗಳು ದೂರವಿಲ್ಲ.

         ಅರಣ್ಯ ಇಲಾಖೆ, ರಾಜಕೀಯ ನಾಯಕರು, ಮತ್ತು ಪ್ರತೀ ಭಾರತೀಯ ಪ್ರಜೆ ಪ್ರಕೃತಿಯ ರಕ್ಷಣೆಯ ಜವಾಬ್ದಾರಿ ಹೊತ್ತುಕೊಳ್ಳಬೇಕು, ಸಾಧ್ಯವಾದಷ್ಟು ಮಟ್ಟಿಗೆ ಪ್ರಕೃತಿಯನ್ನು ಪ್ರೀತಿಸುವ ಪರಿಸರ ಪ್ರೀಯರು, ಪರಿಸರವಾದಿಗಳು, ಹಿತ ಚಿಂತಕರು ಒದ್ದಾಟ ಮಾಡುತ್ತಿರುವಾಗಲೇ, ಇದನ್ನೆಲ್ಲಾ ತಿಳಿದು ತಿಳಿಯದಂತೆ ವರ್ತಿಸುವ ಕೆಲವು ಭ್ರಷ್ಟ ಅಧಿಕಾರಿಗಳು, ರಾಜಕೀಯ ಮತ್ತು ಹಣದ ಪ್ರಾಬಲ್ಯಕ್ಕೆ ಒಳಗಾಗಿ ಎಗ್ಗಿಲ್ಲದೇ ಅರಣ್ಯ ನಾಶವನ್ನು ಮಾಡುತ್ತಿರುವುದು ನಾವೆಲ್ಲರೂ ನೋಡುತ್ತಲೇ ಇದ್ದೇವೆ.

     ಇನ್ನಾದರೂ, ಇದಕ್ಕೆಲ್ಲ ಕಡಿವಾಣ ಬೀಳಲಿ, ಅರಣ್ಯ ನಮ್ಮ ಆಸ್ತಿ, ಅದರಲ್ಲಿರುವ ಪ್ರಾಣಿ ಪಕ್ಷಿಗಳು ನಮ್ಮ ಆಸ್ತಿ, "ಭಾರತದ ಅನುರಾಗದ" ಈ ಗುಂಪಲ್ಲಿ ಒಂದಷ್ಟು ಜನರು ಪರಿಸರವಾದಿಗಳು ಸೃಷ್ಟಿಯಾಗಲಿ, ಭಾರತದ ಮಡಿಲಿಗೆ ಹಸಿರು ಹೊದಿಸಿ ಆ ಮಣ್ಣಿನ ಪವಿತ್ರತೆ ಹೆಚ್ಚಿಸುವಲ್ಲಿ ಕೈ ಜೋಡಿಸೋಣ.

       "ಭಾರತದ ಅನುರಾಗ " ನಿಮ್ಮೆಲ್ಲರಿಗೂ ಹಾರೈಸುತ್ತದೆ.

ನಿಮ್ಮ ಪ್ರೀತಿಯ

✍️ಮಾಧವ ನಾಯ್ಕ್ ಅಂಜಾರು 





         



Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.