ದಣಿವು ತಿಳಿಯದು
ಮನವು ಕೇಳದು
ಹೃದಯ ಬಡಿತವೇ
ಜ್ಞಾಪಿಸುತಿದೆ
ಒಂದು ಕವನವಿಲ್ಲದೆ
ಈ ಜೀವ ವಿಶ್ರಮಿಸದು,
ಹಸಿವು ತಿಳಿಯದು
ಏದುಸಿರು ಬಿಡುತಲೇ
ಹೊಸ ಜೀವನ ಕವನ
ಬರೆಯುವಾಸೆ
ಎಂದೂ ನಿಲ್ಲದು
ಎನ್ನ ಪ್ರಪಂಚವಿದು
✍️ಮಾಧವ ಅಂಜಾರು 🌹
ಬಂಟಾಯನ 2025 ಬಂಟೆರೆನ ಆಯನ = ಬಂಟಾಯನ, ಇದರ ಕನ್ನಡ ಅರ್ಥ ಬಂಟರ ಜಾತ್ರೆ, ತಾರೀಕು 21-11-2025 ರಂದು, ಕುವೈಟ್ ಅಬ್ಬಾಸಿಯದಲ್ಲಿ ಬಹಳ ಅದ್ಧುರಿಯಾಗಿ ನಡೆದ ಬಂಟಾಯನ ಹೊಸ ಮೆರುಗನ್ನು ಪಡೆದುಕೊಂಡಿತು. ಹೌದು, ಕುವೈಟ್ ನಲ್ಲಿ ಹಲವಾರು ಸಂಘಟನೆಗಳಂತೆ ಭಂಟರ ಕೂಟವೂ ಒಂದು, ತನ್ನ ಸಮಾಜದ ಏಳಿಗೆಗೆ ತನ್ನದೇ ಶೈಲಿಯಲ್ಲಿ ಪ್ರೋತ್ಸಾಹ, ಗೌರವ, ವೇದಿಕೆ ಶೃಷ್ಟಿ ಮಾಡಿ ಸಮಾಜದಲ್ಲಿ ಇನ್ನಷ್ಟು ಹೊಸ ಮುಖವನ್ನು ಪರಿಚಯ ಮಾಡುತ್ತ, ಬಂಟರ ಅಡಿಪಾಯವನ್ನು ಗಟ್ಟಿಗೊಳಿಸಿ ಇನ್ನುಳಿದವರಿಗೂ ಮಾದರಿಯಾಗಿ ಇರುತ್ತಿರುವುದು ಇತಿಹಾಸದಿಂದಲೇ ತಿಳಿದಿರುತ್ತೇವೆ. ಅದರಂತೆ ನಿನ್ನೆ ನಡೆದ ಬಂಟಾಯನ ಬಹಳಷ್ಟು ಅಚ್ಚುಕಟ್ಟಾಗಿ ನಡೆಯಿತು ಎಲ್ಲಾ ಪ್ರೇಕ್ಷಕರ ಮನಸೆಳೆಯಿತು, ಹೌದು ನಾವು ಬಂಟರು ಯಾವುದಕ್ಕೂ ಕಮ್ಮಿ ಇಲ್ಲ ಬಯಸಿದರೆ ಕನಸನ್ನು ನನಸು ಮಾಡುತ್ತೇವೆ ಎಂಬ ಸೂಚನೆಯನ್ನು ನೀಡಿದಂತಾಗಿದೆ. ಸಾಮಾನ್ಯವಾಗಿ ಕುವೈತ್ ನ ಹೆಚ್ಚಿನ ಸಂಘಟನೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಪಳಗಿರುವ ಬಂಟರು, ತನ್ನ ಸಮಾಜದ ಹೆಗ್ಗಳಿಕೆಯನ್ನು ಹೆಚ್ಚಿಸಲು ಪ್ರತ್ಯೇಕ ವೇದಿಕೆಯನ್ನು ಮಾಡಿ, ಸಮಾಜ ಬಾಂಧವರನ್ನು ಕರೆದು ಗೌರವ ನೀಡಿ ಸನ್ಮಾನ ಮಾಡಿ ಮುಂದಿನ ಪೀಳಿಗೆಗೂ ಮಾದರಿಯಾಗುತ್ತಿದ್ದಾರೆ. ಇಲ್ಲಿ ಎರಡು ವರುಷದ ಮಗುವಿನಿಂದ ಹಿಡಿದು ಹಿರಿಯ ವಯಸ್ಕರವರೆಗೂ ವೇದಿಕೆಯಲ್ಲಿ ತನ್ನ ಚಾಕಚಕ್ಯತೆಯನ್ನು ತೋರಿಸಿ ನೆರೆದವರ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ...
ಕೃತಕ ಬುದ್ಧಿಮತ್ತೆ- ( Artificial Inteligence ) ಮತ್ತು ಬುದ್ಧಿವಂತಿಕೆ. ವಿಜ್ಞಾನ ಮುಂದುವರಿಯುತ್ತಿರುವಂತೆ ತಾಂತ್ರಿಕ ಕ್ಷೇತ್ರದಲ್ಲಿ ಬಹಳಷ್ಟು ಬೆಳವಣಿಗೆಗಳನ್ನು ಕಾಣುತ್ತಿರುವ ನಾವುಗಳು, ಇತ್ತೀಚಿನ ದಿನಗಳಲ್ಲಿ AI ಟೆಕ್ನಾಲಜಿಯನ್ನು ಹೆಚ್ಚಾಗಿ ಉಪಯೋಗಿಸಿಕೊಳ್ಳುತ್ತಿದ್ದೇವೆ. ಅದರಲ್ಲೂ ವಿಭಿನ್ನ ಕಂಪನಿಗಳ ವಿವಿಧ ತರಹದ ಅಪ್ಲಿಕೇಶನ್ ಅಭಿವೃದ್ಧಿ ಪಡಿಸಿ ತನ್ನ ಗ್ರಾಹಕರನ್ನು ಬೆಳೆಸಿಕೊಳ್ಳುತ್ತಿದೆ. ಈ AI ಟೆಕ್ನಾಲಜಿ, ರೋಬೋಟ್, ಕಂಪ್ಯೂಟರ್, ವಿಮಾನ, ಮೊಬೈಲ್ ಹಾಗೂ ಯುದ್ಧ ತಂತ್ರಗಳಲ್ಲಿ ಕೂಡ ಉಪಯೋಗಿಸುವ ಮಟ್ಟಿಗೆ ಬೆಳೆದಿದ್ದು ಇದೊಂದು ಬಹಳ ದೊಡ್ಡ ಬದಲಾವಣೆಯಾಗಿದೆ. ಅದರೊಂದಿಗೆ ಅವಲಂಬಿತಾರಗುತ್ತಿರುವ ನಾವು ನಮ್ಮ ಸ್ವತಃ ಬುದ್ದಿವಂತಿಕೆಯನ್ನು ತೀರಾ ಕಡಿಮೆಯಾಗಿ ಉಪಯೋಗಿಸುವ ಮಟ್ಟಕ್ಕೆ ಬರುತ್ತಿದ್ದೆವೋ ಅನಿಸುತ್ತಿದೆ. ಅದರಲ್ಲೂ ಒಂದು ಕಾಲದಲ್ಲಿ ತೆಗೆದ ಕಪ್ಪು ಬಿಳಿ ಚಿತ್ರಗಳನ್ನು ಇಂದಿನ ಯುಗದಲ್ಲಿ ಕುಣಿಯುವಂತೆ, ಮಾತನಾಡುವಂತೆ ಮಾಡುತ್ತಿರುವ AI ಇನ್ನೂ ಮುಂದಿನ ದಿನಗಳಲ್ಲಿ ಏನೆಲ್ಲಾ ಮಾಡಬಹುದು ಅಲ್ಲವೇ? ಇಲ್ಲಿ ಮನುಷ್ಯನ ಬುದ್ದಿವಂತಿಕೆ ಏನನ್ನೂ ಮಾಡಬಹುದು ಎಂಬ ಸಂದೇಶ ಕೊಡುತ್ತಿದೆ. ಕೃತಕ ಬುದ್ದಿವಂತಿಕೆ ಬುದ್ದಿವಂತರಿಂದಲೇ ಮಾಡಲ್ಪಟಿದ್ದು ಆದರೆ ಅದನ್ನು ತಿಳಿಯದ ಇಂದಿನ ಕೆಲವು ಮಕ್ಕಳು ತನ್ನ ದೈನಂದಿನ ಚಟುವಟಿಕೆಗಳಲ್ಲಿ ಅತಿಯಾಗಿ ಅವಲಂಬಿತರಾಗುತ್ತಿದ್ದ...
ಜೇನಾಗಿ ಹಾಲಾಗಿ ನಿನ್ನ ಪ್ರೇಮಕೆ ಸಿಲುಕಿ, ರವಿಯನ್ನೇ ಮೀರುವ ಬಾಳಿನ ಕಿರಣವಾಗಿ ನಿನ್ನ ಕಣ್ಣು ನೋಡಲು ಮನವು ಮರುಳಾಗಿ, ನಿನ್ನ ನೆನಪಿನ ದಾರಿಯಲ್ಲಿ ಜೀವನವೇ ಸಾಗಿಹೋಗಿ ನಿನ್ನ ನಗುವಿನ ಬೆಳಕಲ್ಲಿ ಕತ್ತಲು ಕರಗಿಹೋಗಿ, ನೀ ಇದ್ದರೆ ಸಾಕೆಂದು ಹೃದಯವೇ ಹಾಡಿಹೋಗಿ ಜೊತೆಯಾಗಿ ಹಿತವಾಗಿ ಬದುಕು ಸಾಗಲಿ ನೆಮ್ಮದಿಯಾಗಿ ನಾನಿರುವುದೇ ನಿನಗಾಗಿ ✍🏻ಮಾಧವ ಕೆ ಅಂಜಾರು
Comments
Post a Comment