(ಲೇಖನ -3)ಸಾಮಾಜಿಕ ಜಾಲತಾಣಗಳಲ್ಲಿ ನಿನ್ನ ಜವಾಬ್ದಾರಿ? ಸಾಮಾಜಿಕ ಜಾಲತಾಣವನ್ನು ಜನರು ಸದುದ್ದೇಶಕ್ಕೆ ಉಪಯೋಗಿಸಿಕೊಳ್ಳಬೇಕು!

ಸಾಮಾಜಿಕ ಜಾಲತಾಣಗಳಲ್ಲಿ ನಿನ್ನ ಜವಾಬ್ದಾರಿ?  ಸಾಮಾಜಿಕ ಜಾಲತಾಣವನ್ನು ಜನರು ಸದುದ್ದೇಶಕ್ಕೆ ಉಪಯೋಗಿಸಿಕೊಳ್ಳಬೇಕು! ತಾಂತ್ರಿಕತೆಯು ಮುಂದುವರಿದಂತೆ  ಅದರ ಒಳಿತು-ಕೆಡುಕು  ಎಲ್ಲವೂ ನಾವು ಹೇಗೆ ಉಪಯೋಗಿಸಿಕೊಳ್ಳುತ್ತಿವೆಯೋ ಅದನ್ನು ಅವಲಂಬಿತವಾಗಿರುತ್ತದೆ.



ಇಂದಿನ ದಿನಗಳಲ್ಲಿ ಸಾವಿರಾರು ತರದ  ಮಾಧ್ಯಮಗಳು,ವಿವಿಧ ಸಾಮಾಜಿಕ ಜಾಲತಾಣ ಮತ್ತು ಹತ್ತು ಹಲವಾರು ವಿಷಯಗಳು  ನಮ್ಮ ಕೈಯಲ್ಲಿರುವ  ಮೊಬೈಲ್ನಲ್ಲಿ  ತುಂಬಾ ಸುಲಭವಾಗಿ ಸಿಗುತ್ತದೆ. ಕೆಲವರು  ಇದನ್ನು  ಒಳಿತಿಗಾಗಿ ಉಪಯೋಗಿಸಿದರೆ, ಕೆಲವರು ಕೆಡುಕಿಗೆ ಪ್ರಯೋಗಿಸುತ್ತಾರೆ. ಯಾರೋ ಮಾಡಿದ ತಪ್ಪಿನಿಂದ  ಇನ್ನ್ಯಾರೋ ಶಿಕ್ಷೆಯನ್ನು ಅನುಭವಿಸಿದ  ಸಂದರ್ಭಗಳು ಬಹಳಷ್ಟು ನೀವು ನಿಮ್ಮ ಕಣ್ಣಾರೆ  ನೋಡಿರಲು ಬಹುದು. ಸಾಮಾಜಿಕ ಜಾಲತಾಣದಲ್ಲಿ, ಅವಿವೇಕಿಗಳು ತನ್ನ ವಿಕೃತ ಮನೋಭಾವದಿಂದ, ಸಮಾಜದ ಜನರಿಗೆ ಕೆಡುಕನ್ನು ಮಾಡಿದ ಸಂದರ್ಭಗಳು, ಮಕ್ಕಳು,  ವಯಸ್ಕರು, ವೃದ್ಧರು ಅಥವಾ ಅಮಾಯಕ  ಕುಟುಂಬಗಳನ್ನು ಬಲಿತೆಗೆದುಕೊಂಡಿರುವ ಪ್ರಸಂಗಗಳು  ನಡೆಯುತ್ತಲೇ ಇದೆ.

               ಇದಕ್ಕೆಲ್ಲ ಕಾರಣ, ಸಮಾಜದಲ್ಲಿ ಹೆಚ್ಚುತ್ತಿರುವ ಸಮಾಜ ಘಾತುಕರ ಸಂಖ್ಯೆ,  ಹೆಚ್ಚಾಗಿ ತನ್ನ ಮನಸ್ಸಿನೊಳಗೆ  ಕೊಳಕನ್ನು ತುಂಬಿಸಿಕೊಂಡು, ಬೇರೆ ಬೇರೆ ಕಾರಣಗಳಿಂದ ಸಮಾಜದ ಸಾಮಾನ್ಯ ಜನರನ್ನು ಬಲಿ ತೆಗೆದುಕೊಳ್ಳಲು  ಶ್ರಮ ಪಡುತ್ತಿರುತ್ತಾರೆ. ಇಂತಹ ಜನರಿಂದ ಆಗಾಗ ಜನರಿಗೆ ತೊಂದರೆಗಳು ಹೆಚ್ಚಾಗಿ ನಡೆಯುತ್ತಿರುತ್ತದೆ. ತಾನು ಮಾಡಿದ ಘನ ಕಾರ್ಯಕ್ಕೆ ಅಂತವರು ತನ್ನ ಬೆನ್ನು ತಟ್ಟಿಕೊಳ್ಳುತ್ತಾ ಮತ್ತೆ ಅದೇ ಹುಚ್ಚು ಬುದ್ದಿಯನ್ನು ನಿರಂತರವಾಗಿ ಮಾಡುವ ಚಪಲ, ಇಂತಹ ಕೆಲಸಗಳಿಗೆ ಹೆಚ್ಚಾಗಿ ಲೋಕದ  ಪರಿಜ್ಞಾನವಿಲ್ಲದ ಜನರು ಹೆಚ್ಚಾಗಿ ಮಾಡುತ್ತಾರೆ. ಯಾವುದೇ ವಿಷಯಗಳು ಸುದ್ದಿ ಮಾದ್ಯಮದಲ್ಲಿ ಬಂದಾಗ ಅದರ ಒಳಿತು ಕೆಡುಕು ಏನನ್ನೂ ನೋಡದೆ, ಹುಚ್ಚರಂತೆ ಅನ್ಯರಿಗೆ ಕಳುಹಿಸಿ  ಬೆದರಿಕೆ ಹಾಕುತ್ತಾ, ಹೊಡೆಯುತ್ತೇನೆ, ಬಡಿಯುತ್ತೇನೆ ಎಂದು ಬೊಬ್ಬೆರಿಯುತ್ತ, ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ತನ್ನ ವಿಕೃತಿಯನ್ನು ತೋರಿಸುತ್ತಾರೆ. ತನ್ನದೇ ಮಾನಸಿಕ ಸ್ಥಿಮಿತ ಕಳೆದುಕೊಂಡು ಎಷ್ಟು ಸಾಧ್ಯವೋ ಅಷ್ಟರಮಟ್ಟಿಗೆ ಹಗಲಿರುಳು ಇನ್ನೊಬ್ಬರ ಅವನತಿಗಾಗಿ ಶ್ರಮಿಸಿ ತಾತ್ಕಾಲಿಕ ಸಮಾಧಾನ ಮಾಡಿಕೊಳ್ಳುತ್ತಾರೆ.

           ಜಾಲತಾಣ, ಮಾಧ್ಯಮಗಳನ್ನು  ಊರಿನ, ದೇಶದ ಹಿತಕ್ಕಾಗಿ ಉಪಯೋಗಿಸಿ, ಸಮಾಜದಲ್ಲಿ ಕಿಚ್ಚು ಹಬ್ಬಿಸುವ ಸಮಾಚಾರಗಳನ್ನು ಅನ್ಯರಿಗೆ ಕಳುಹಿಸಬೇಡಿ, ಇನ್ನೊಬ್ಬರ ಜೀವನ ನಶಿಸುವ ವಿಚಾರದಲ್ಲಿ ನಿಮ್ಮ ಪರಿಶ್ರಮ ಇರದಿರಲಿ.  ನಾವೆಲ್ಲರೂ ಮನುಷ್ಯರು ಸಾಧ್ಯವಾದಷ್ಟು ಪ್ರಬುದ್ಧ ಸಮಾಜದ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿ.

     ಭಾರತದ ಅನುರಾಗ ಈ ಗುಂಪಲ್ಲಿ ಇನ್ನಷ್ಟು ಪ್ರಬುದ್ಧ, ಜವಾಬ್ದಾರಿಯುತ ಪ್ರಜೆಗಳು ಸೇರುತ್ತಲಿರಲಿ, ಉತ್ತಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಲಿ.

ವಂದನೆಗಳು

ಬರಹ : ಮಾಧವ. ಕೆ. ಅಂಜಾರು.



         

      















Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ