ಅಟ್ಟ ಸೋರಿತು (ಕವನ -103)


ಅಟ್ಟ ಸೋರಿತು 
**********************
ಉಟ್ಟ ತೊಡುಗೆಗೆ
ರಂಧ್ರವಾದರೂ
ಬದುಕುತಿದ್ದೆ ಆನಂದದಿ
ಉಟ್ಟ ತೊಡುಗೆಗೆ
ದೂಳು ಮೆತ್ತಿದ್ದರೂ
ಓಡಾಡುತಿದ್ದೆ ಆರಾಮಾಗಿ
ತಟ್ಟೆ ಬಟ್ಟಲು
ನಜ್ಜುಗುಜ್ಜಾಗಿದ್ದರೂ
ಗಂಜಿ ಕುಡಿಯುತ್ತಿದ್ದೆ ಖುಷಿಲಿ
ಅಟ್ಟ ಸೋರಿ
ನೀರು ಬಿದ್ದರೂ
ಮಲಗುತ್ತಿದ್ದೆ ಸುಖದಲಿ
ಗಾಳಿ ಮಳೆಗೆ
ಛತ್ರಿ ಇಲ್ಲದಿದ್ದರೂ
ಕುಣಿದು ನೆನೆಯುತಿದ್ದೆ ಊರಲಿ
ಹಸಿದ ಹೊಟ್ಟೆಗೆ
ಅನ್ನವಿಲ್ಲದೆಯೂ
ತಿನ್ನುತಿದ್ದೆ ಮಾವು ಹುಳಿ
ಅಂಗಳದಲಿ ಆಟವಾಡಲು
ಹುಡುಕುತ್ತಿದ್ದೆ
ಗಾಲಿ ಕೋಲು
ಪಕ್ಕದಲಿ ಹರಿಯುವ ನೀರಲಿ
ತೇಲಿ ಬಿಡುತ್ತಿದ್ದೆ
ಕಾಗದದ ದೋಣಿಯ
ಸಿಡಿಲ ಶಬ್ದದ
ಆರ್ಭಟದಲಿ
ಮಿಂಚನು ನೋಡುತಿದ್ದೆ ಕಿಟಕಿಲಿ
ಸೂರ್ಯಮೂಡಿ
ಮೇಲೆಬಂದಾಗ
ಓಡಿ ಹೋಗುತಿದ್ದೆ ಮಾವಿನ ಮರದಡಿ
ಕಾಮನಬಿಲ್ಲಿನ
ಕೊನೆಯನು ಕಾಣಲು
ನಡೆಯುತ್ತಿದ್ದೆ ಹಲವು ಮೈಲಿ
ತೊಡಲಿ ಸಿಕ್ಕಿದ
ಮೀನನು ಹಿಡಿದು
ತುಂಬಿಸುತ್ತಿದೆ ಬಾಟ್ಲಿಯಲ್ಲಿ
ತೆಂಗು ಗರಿಕೆಯ
ಕನ್ನಡಕ ಮಾಡಿ
ನೋಡುತಿದ್ದೆ ಅಮ್ಮನನು
ಬಣ್ಣ ಕಾಗದದ
ಗಾಳಿಪಟ ಮಾಡಿ
ಕೊಡುತಿದ್ದೆ ತಂಗಿ ಕೈಲಿ
ಗಾಳಿ ಮಳೆಗೆ ಬಂದ
ತೆಂಗಿನಕಾಯಿಗೆ
ಜಿಗಿದು ಬಿಟ್ಟೆ  ನೀರಲಿ
ಚಳಿಗೆ ಮೈ ನಡುಗದಂತೆ
ಹೊದಿಸಿಕೊಳ್ಳುತಿದ್ದೆ
ಕಂಬಳಿಯಲಿ
ಮೀನು ಹಿಡಿಯಲು
ರಾತ್ರಿ ಪಯಣ
ಮಾಡುತಿದ್ದೆ
ದೊಂದಿ ದೀಪದಲಿ
ಒಂದು ಏಡಿ ಸಿಕ್ಕಿದರೂ
ತಂದು ತಿಂದೆ ನೆಕ್ಕುತಲಿ
ಎರಡು ಜುಟ್ಟಿನ
ಸೈಕಲಲಿ
ರಾತ್ರಿ ಪಯಣ ದೈರ್ಯದಲಿ
ಒಬ್ಬಂಟಿ ಬರಬೇಕಾದರೆ
ಜೋರಾಗಿ ರಾಮ ರಾಮ
ಹೇಳುತಿದ್ದೆ ಬಾಯಲಿ
ಮನೆಯ ಸುತ್ತ
ಹಸಿರ ತೋಟವ
ನೋಡುತಿದ್ದೆ ಕಂಗಳಲಿ
ಮನೆಯಂಗಳದ
ತಳಿರು ಚಪ್ಪರವು
ಕರೆಯುತಿತ್ತು ಪ್ರೀತಿಯಲಿ
ಮನೆಯೊಳಗಿನ
ದೈವ ದೇವರ
ಪೂಜೆಗಯ್ಯುತ ಧ್ಯಾನದಲಿ
ಭಕುತಿಯಿಂದ
ಹೊರಡುತಿದ್ದೆ
ದಿನದ ಅನ್ನಕೆ ಸಂತೋಷದಲಿ
✍️ಮಾಧವ ನಾಯ್ಕ್ ಅಂಜಾರು 🌹🙏



Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.