ಜಗದೀಶ್ವರ (ಭಕ್ತಿ -04)
ಜಗದೀಶ್ವರ
********
ಮನ್ನಿಸೆನ್ನ ಜಗದೀಶ್ವರ
ನಾ ನಿನ್ನ ಬಿಟ್ಟಿರಲಾರೆ
ಮಣ್ಣಾಗೋ ಈ ಜೀವಕೆ
ಯಾಕಿನ್ನೂ ಆಸೆ ಆಕಾಂಕ್ಷೆ
ಹೊನ್ನು ಮಾಡೆನ್ನ ಮನ
ನಾನಿನ್ನ ಮರೆಯಲಾರೆ,
********
ಮನ್ನಿಸೆನ್ನ ಜಗದೀಶ್ವರ
ನಾ ನಿನ್ನ ಬಿಟ್ಟಿರಲಾರೆ
ಮಣ್ಣಾಗೋ ಈ ಜೀವಕೆ
ಯಾಕಿನ್ನೂ ಆಸೆ ಆಕಾಂಕ್ಷೆ
ಹೊನ್ನು ಮಾಡೆನ್ನ ಮನ
ನಾನಿನ್ನ ಮರೆಯಲಾರೆ,
ತನ್ನಾಸೆಯ ಬಿಟ್ಟಿದ್ದರೂ
ಬಿಗಿದು ಹಿಡಿದಿವೆ ಬಂಧ
ನಾನಿಂದು ಬೇಡುತಿಹೆ
ನೀನಾಗು ಎನ್ನ ಆನಂದ
ಒಂದು ಬಿನ್ನಹ ನಿನ್ನಲಿ
ಮರೆಯಬೇಡ ನಾ ನಿನ್ನ ಕಂದ,
ಬಿಗಿದು ಹಿಡಿದಿವೆ ಬಂಧ
ನಾನಿಂದು ಬೇಡುತಿಹೆ
ನೀನಾಗು ಎನ್ನ ಆನಂದ
ಒಂದು ಬಿನ್ನಹ ನಿನ್ನಲಿ
ಮರೆಯಬೇಡ ನಾ ನಿನ್ನ ಕಂದ,
ಕೋಟಿ ಕೋಟಿ ಭಕ್ತರು
ಬೇಕು ಬೇಡಗಳ ಹೊಣೆ
ನಿನ್ನಮೇಲೆ ಹಾಕಿಹರು
ಎಲ್ಲರಿಚ್ಛೆಯನು ಈಡೇರಿಸಲು
ಹಗಲು ರಾತ್ರಿ ಬೇಡುತಿಹರು
ಸತತ ನಿನ್ನ ಕಾಡುತಿಹರು
ಬೇಕು ಬೇಡಗಳ ಹೊಣೆ
ನಿನ್ನಮೇಲೆ ಹಾಕಿಹರು
ಎಲ್ಲರಿಚ್ಛೆಯನು ಈಡೇರಿಸಲು
ಹಗಲು ರಾತ್ರಿ ಬೇಡುತಿಹರು
ಸತತ ನಿನ್ನ ಕಾಡುತಿಹರು
ನಿನ್ನ ನೋವ ಕ್ಷಣದಲಿ
ನಾ ನಿನ್ನ ಜೊತೆ ಬಯಸುವೆ
ನಿನ್ನ ಆನಂದ ಕ್ಷಣದಲೂ
ನಿನ್ನ ಪಾದ ಸೇವೆ ಬಯಸುವೆ
ಬಂದು ನೆಲೆಸೆನ್ನ ಹೃದಯದಿ
ನಾ ನಿನ್ನ ಹಾದಿ ಕಾಯುತಿರುವೆ
✍️ಮಾಧವ ನಾಯ್ಕ್ ಅಂಜಾರು 🙏
ನಾ ನಿನ್ನ ಜೊತೆ ಬಯಸುವೆ
ನಿನ್ನ ಆನಂದ ಕ್ಷಣದಲೂ
ನಿನ್ನ ಪಾದ ಸೇವೆ ಬಯಸುವೆ
ಬಂದು ನೆಲೆಸೆನ್ನ ಹೃದಯದಿ
ನಾ ನಿನ್ನ ಹಾದಿ ಕಾಯುತಿರುವೆ
✍️ಮಾಧವ ನಾಯ್ಕ್ ಅಂಜಾರು 🙏
Comments
Post a Comment