(ಲೇಖನ -6)ನಿನ್ನ ಜೀವನ ನಿನ್ನದೇ ಕರ್ಮಗಳಿಗನುಸಾರವಾಗಿ ಎಂದು ಹೇಳಬಹುದೇ?

ನಿನ್ನ ಜೀವನ ನಿನ್ನದೇ ಕರ್ಮಗಳಿಗನುಸಾರವಾಗಿ ಎಂದು ಹೇಳಬಹುದೇ? ಹೌದು ಒಮ್ಮೆಮ್ಮೆ ಜೀವನದಲ್ಲಿ ನಡೆಯುವ ವಿಷಯಗಳು ನಾವೇನು ಮಾಡಿರುತ್ತೇವೆಯೊ ಅದನ್ನೇ ಅನುಭವಿಸುತ್ತೇವೆ ಅನಿಸುತ್ತದೆ ಅದು ಕೆಟ್ಟ ವಿಷಯವಾಗಲಿ, ಒಳ್ಳೆ ವಿಚಾರಗಳೆ ಆಗಲಿ. ಇವತ್ತಿನ ಒಂದು ನಿದರ್ಶನ ನಿಮ್ಮಲ್ಲಿ ಹೇಳುವುದಕ್ಕೆ ಇಚ್ಚಿಸುತ್ತೇನೆ. ಮಾಡಿದುಣ್ಣೋ ಮಾರಾಯ ಅಥವಾ ಮಾಡಿದ ಕರ್ಮ ತಿನ್ನುತ್ತಾರೆ ಎಂಬ ಮಾತನ್ನು ಆಗಾಗ ಕೇಳುತ್ತೇವೆ. ನಾನು ಈ ಮುಂಚಿನ ಲೇಖನದಲ್ಲಿ ಪಾಪ - ಪುಣ್ಯ - ಕರ್ಮದ ಬಗ್ಗೆ ಬರೆದಿದ್ದೆ. ಅದು ನನ್ನ ಕರ್ಮವೋ ತಿಳಿಯದು, ಆದರೆ ಇವತ್ತಿನ ವಿಷಯದಲ್ಲಿ ಬರೆಯಲೇಬೇಕೆಂಬ ಮನಸಿನಿಂದ ರಾತ್ರಿ 12.30 ಕ್ಕೆ ಈ ಲೇಖನ ಬರೆಯುತ್ತಿದ್ದೇನೆ.



         ದಿನಚರಿಯಂತೆ ಬೆಳಗೆದ್ದು ಕಾಯಕ್ಕಾಗಿ ನನ್ನ ಪಯಣ, ದಾರಿ ಮದ್ಯೆ ನನ್ನ ಮಗಳ ಪಾಸ್ಪೋರ್ಟ್ ಸಂಖ್ಯೆ ಸರಿಯಿಲ್ಲದ ಕಾರಣ ಸರಕಾರಿ ಕಛೇರಿಗೆ ತೆರಳಿದೆ, ಬಹಳಷ್ಟು ವ್ಯವಸ್ಥಿತವಾಗಿರುವ ಸರಕಾರಿ ಕಛೇರಿಗಳು, ಯಾವುದೇ ವ್ಯಕ್ತಿ ಒಳಗೆ ಹೋದಂತೆ ಟೋಕನ್ ಮೆಷಿನ್ ನಲ್ಲಿ ಟೋಕನ್ ತೆಗೆದುಕೊಂಡು ನಮ್ಮ ಕಾಗದ ಪತ್ರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ದಾಖಲೆ ಪರಿಶೀಲಿಸಿ ತನ್ನ ಸಹಿ ಹಾಕಿ ಮುಂದಿನ ಹೆಜ್ಜೆಗೆ ಅನುವು ಮಾಡಿಕೊಡುತ್ತಾರೆ. ಯಾವುದೇ ಅನಗತ್ಯ ಮಾತು, ಅಥವಾ ಸಮಯ ವ್ಯರ್ಥ ಮಾಡದೆ ಬರುವ ಪ್ರತೀ ನಾಗರೀಕರಿಗೆ, (ದೇಶ ವಿದೇಶ ) ತಾರತಮ್ಯವಿಲ್ಲದೆ ಬೇಕಾದ ಕೆಲಸಗಳು ಬೇಗನೆ ಮುಗಿದುಬಿಡುತ್ತದೆ. ಅದಿರಲಿ ಬಹಳಷ್ಟು ಸಂತೋಷ,

       ನಾನು, ಕಛೇರಿಗೆ ಹೋಗುವಾಗ ಅಲ್ಪ ತಡವಾಗಿದ್ದು ನನಗೆ ಸರಿಸುಮಾರು ಕೊನೆಯ ಟೋಕನ್ ಸಂಖ್ಯೆ ದೊರಕಿತು, ಇನ್ನೇನು ಮಾಡಲಿ ಕಾಯಲೇ ಬೇಕು ಅಂದುಕೊಂಡು ಕುಳಿತುಬಿಟ್ಟೆ. ಎಲ್ಲರೂ ತನ್ನ ಸಂಖ್ಯೆ ಬರುತ್ತದೆಂದು ಕಾಯುತ್ತಾ ಕುಳಿತಿದ್ದರು. ನನ್ನ ಪಕ್ಕದಲ್ಲಿ ಕುಳಿತ ಮಲಯಾಳಿ ಒಬ್ಬಾತನೊಂದಿಗೆ ಮಾತನ್ನ ಆರಂಭಿಸಿದೆ ಒಂದೆರಡು ನಿಮಿಷಗಳ ಕಾಲ ಮಾತನಾಡುತ್ತಿರುವಾಗಲೇ ನನ್ನ ಬೆನ್ನ ಹಿಂದೆ ಒಬ್ಬ ವ್ಯಕ್ತಿ, ಸಂಖ್ಯೆ 72 ರ ಟೋಕನ್ ನನ್ನ ಕೈಗೆ ಕೊಟ್ಟುಬಿಟ್ಟರು, ನಾನು ಆಗಲೇ 118 ರ ಟೋಕನ್ ಕೈಲಿ ಹಿಡಿದು ಕಾಯುತ್ತಿರುವಾಗ 72 ರ ಟೋಕನ್ ಸಿಕ್ಕಿದ್ದು ನನಗೆ ಸಂತೋಷವಾಯ್ತು, ಕೊಟ್ಟ ವ್ಯಕ್ತಿಗೆ ಧನ್ಯವಾದ ಹೇಳಿಬಿಟ್ಟೆ, ಅದೇ ಕ್ಷಣದಲ್ಲಿ ನನ್ನ 72 ನಂಬರ್ ಬಂದಾಗ ನನ್ನ ಕಾಗದ ಪತ್ರ ಕೊಟ್ಟು ಮತ್ತೊಂದು ಕೋಣೆಗೆ ಹೋಗಲು ಹೇಳಿದರು ಅಧಿಕಾರಿ.

       ಅವರ ಹೇಳಿಕೆಯಂತೆ ಮತ್ತೊಂದು ಕೋಣೆಗೆ ಹೋಗಿ ಇನ್ನೊಂದು ಟೋಕನ್ ಪಡೆದುಕೊಂಡೆ, ಅದು ಕೂಡ ಸಾಧಾರಣ 100 ಜನರು ಸರದಿಯಾಗಿ ಕಾಯುತ್ತಿರುವ ಕೋಣೆಯಾಗಿತ್ತು.  ಅಲ್ಲೂ ಕುಳಿತುಕೊಂಡೆ, ಆ ಸಮಯದಲ್ಲಿ ನನ್ನೊಂದಿಗಿದ್ದ ಮಲಯಾಳಿ ಯುವಕ, ನೀನು ಕಂಪ್ಯೂಟರ್ ವಿಭಾಗಕ್ಕೆ ಹೋಗು ಮೊದಲು ಅಲ್ಲಿ ಕೇಳಿಕೊಳ್ಳು ಅಂದುಬಿಟ್ಟರು, ಅವ್ರು ಹೇಳಿದಂತೆ ನನ್ನ ಕಡತವನ್ನು ಅವರಲ್ಲಿ ಕೊಟ್ಟುಬಿಟ್ಟೆ,  ಟೋಕನ್ ತೆಗೆದುಕೊಳ್ಳದೆ ನನ್ನ ಕಿಸೆಯಲ್ಲಿ ಉಳಿದುಬಿಟ್ಟಿತು. ಸರಿಸುಮಾರು 1 ರಿಂದ 2 ಗಂಟೆ ತೆಗೆದುಕೊಳ್ಳುವ ಕೆಲಸ 30 ನಿಮಿಷದಲ್ಲಿ ಮುಗಿಯಿತು. ತಿರುಗಿ ನೋಡುವಾಗ ಮಲಯಾಳಿ ಅವರ ಕೆಲಸದ ಕೌಂಟರ್ ಗೆ ತೆರಳಿದ್ದರು. ಅವರಿಗೆ ದೂರದಲ್ಲಿ ನಮಸ್ಕಾರ ಹೇಳಿ. ಅಲ್ಲಿಂದ ಹೊರಡುವ ಸಮಯದಲ್ಲಿ,   ಹೊಸ ಟೋಕನ್ ತೆಗೆದುಕೊಳ್ಳಲು ಬಂದ ಮದ್ಯ ವಯಸುಳ್ಳವಗೆ ನನ್ನ ಟೋಕನ್ ಕೊಟ್ಟು ಬಿಟ್ಟೆ. ಅವನಿಗೆ ಬಹಳ ಸಂತೋಷವಾಯಿತು ಮತ್ತು ಅವರ ಕೆಲಸಕ್ಕೆ ಓಡಿದರು.

    ಆದರೆ, ನನಗೇನೂ ಅನಿಸಿತು, ಅಷ್ಟು ಜನರಲ್ಲಿ ನಾನೂ ಒಬ್ಬ, ಅಪರಿಚಿತ ನನ್ನ ಕೈಲಿ ಟೋಕನ್ ಹೇಗೆ ಕೊಟ್ಟ, ಮತ್ತು ನಾನು ತೆಗೆದುಕೊಂಡ ಟೋಕನ್ ಇನ್ನೊಬ್ಬರಿಗೆ ಕೊಡುವ ಸಂಧರ್ಭ ನನಗ್ಯಾಕೆ ಅದೇ ಸಮಯದಲ್ಲಿ ಬಂದೋದಗಿತ್ತು ಅನ್ನುವ ಆಲೋಚನೆಗಳು ಮನದಲ್ಲಿ ಬಂದಾಗ, ನನ್ನ ಅಪ್ಪ ಹೇಳುವ ಮಾತು ನೆನಪಾಯಿತು, ನೋಡು ಮಗನೆ, ನೀನು ಎಲ್ಲಿಯೇ ಇರು, ಹೇಗೆಯೇ ಇರು, ಸತ್ಯವಂತನಾಗಿರು, ಅನ್ಯರಿಗೆ ದ್ರೋಹವನ್ನು ಮಾಡಲು ಹೋಗಬೇಡ, ನೀನು ಕಲ್ಮಶವಿಲ್ಲದೆ ಬದುಕು ಸಾಗಿಸು, ಕಷ್ಟವಾದರೂ, ನಿನ್ನ ಜೊತೆ ನಿನ್ನ ಒಳ್ಳೆಯ ಕೆಲಸಗಳು ಸದಾ ಕಾಪಾಡುತ್ತದೆ. ಸತ್ಯವಿದ್ದರೆ ಯಾರಿಗೂ ಹೆದರುವ ಸಂಧರ್ಭ ಬರುವುದಿಲ್ಲ, ಅಲ್ಲ ಅಪ್ಪ ಕೆಲವರು ಬೆಕ್ಕಿನಂತೆ ಕಣ್ಣು ಮುಚ್ಚಿಕೊಂಡು ಹಾಲು ಕುಡಿದು ಪ್ರಪಂಚ ನನ್ನನ್ನು ನೋಡಿಲ್ಲವೆಂದು ಬೇಕಾದನ್ನು ಮಾಡುತ್ತಾರಲ್ಲ, ಎಂಬ ಪ್ರಶ್ನೆಗೆ, ನೋಡು ಮಗಾ ಎಲ್ಲದಕ್ಕೂ ಅದರದ್ದೇ ಆದ ಸಮಯವಿದೆ ತಾಳ್ಮೆಯಿಂದ ಇರು, ಎಲ್ಲವೂ ನಿನ್ನ ಕಣ್ಣೆದುರಿಗೆ ಗೋಚರವಾಗುತ್ತದೆ.

      " ಭಾರತದ ಅನುರಾಗ " ನಿಮಗೆಲ್ಲರಿಗೂ ಶುಭ ಹಾರೈಸುತ್ತ, ಇಂದಿನ ಲೇಖನಕ್ಕೆ ಪೂರ್ಣ ವಿರಾಮ. ಶುಭ ಮಸ್ತು.

ಬರಹ : ಮಾಧವ ನಾಯ್ಕ್ ಅಂಜಾರು.







     

Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ