ಜೀವನ ಸಂತೆ(ಕವನ -139)

ಜೀವನ ಸಂತೆ
**********
ಬದುಕ ಸಂತೆಯಲಿ
ನನಗ್ಯಾಕೆ ಚಿಂತೆ
ಇಂದಿಗೋ ನಾಳೆಗೋ
ಖಚಿತದ ಚಿತೆ
ಉಸಿರಿರುವ ತನಕ
ನವ ಕೋಟಿ ಕಥೆ
ಜೀವನಕ್ಕಿಲ್ಲ ಅರ್ಥ
ಇಲ್ಲದಿರೆ ವ್ಯಥೆ,
ನಂಬಿರೋ ದೇವರ ಹಾರೈಕೆಯು
ಸಾಕೆನಗೆ ಎನ ಪುಟ್ಟ ಹೃದಯದ
ಪ್ರೀತಿ ಮಾತು ಸವಿಯೆನಗೆ
ನೊಂದರೂ, ನಕ್ಕರೂ ಈ ಜೀವನ
ಸಂತೆ ಗಿಜಿಗುಡುವ ಗೂಡಂತೆ
ನನಗ್ಯಾಕೆ ಚಿಂತೆ
✍️ಮಾಧವ ಅಂಜಾರು 🌹

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ