(ಲೇಖನ -1)ಓ ನನ್ನ ಹೃದಯವೇ ನೀ ಕಲ್ಲಾಗಬೇಡ, ಚಂಚಲ ಮನಸ್ಸಿನ ಮಿಂಚಿನ ಹೊಡೆತಕ್ಕೆ ಜರ್ಜರಿತಗೊಂಡು ನೋವನ್ನೇ ಸೇವಿಸುತ್ತಾ ನೀ ಕಲ್ಲಾಗಬೇಡ.

 ಓ ನನ್ನ ಹೃದಯವೇ ನೀ ಕಲ್ಲಾಗಬೇಡ, ಚಂಚಲ ಮನಸ್ಸಿನ ಮಿಂಚಿನ ಹೊಡೆತಕ್ಕೆ ಜರ್ಜರಿತಗೊಂಡು ನೋವನ್ನೇ  ಸೇವಿಸುತ್ತಾ ನೀ ಕಲ್ಲಾಗಬೇಡ. ನಿನ್ನ ಕಣ್ಣಲ್ಲಿ  ಪ್ರಪಂಚದ ಎಲ್ಲಾ ದುಃಖ ದುಮ್ಮಾನಗಳನ್ನು ನೋಡುತ್ತಾ ನಿನ್ನ ಹೃದಯ ಬಡಿತ ನಿಲ್ಲಿಸುವಷ್ಟು ಕಲ್ಲಾಗಬೇಡ. ನಿನ್ನ ಆಸೆಗಳು ಈಡೇರಲಿಲ್ಲ, ನಿನ್ನ ಕೇಳುವವರಿಲ್ಲ,  ನಿನ್ನನು ಮಾತನಾಡಿಸುವವರಿಲ್ಲ, ನಿನ್ನನು ಆರೈಕೆ ಮಾಡುವವರು ಇಲ್ಲ, ಈ ಕತ್ತಲು ಜಗತ್ತಿನಲ್ಲಿ ನೀನು ಕಾಣುತ್ತಲೇ ಇಲ್ಲವೆಂಬ ಚಿಂತೆಯಲಿ ಬಿದ್ದು ಕಣ್ಣೀರು ಹಾಕುತ್ತಾ  ನಿಲ್ಲಲಾಗದೆ ಕುಳಿತುಕೊಳ್ಳಲು ಆಗದೆ ವ್ಯಥೆಯ ಬಲೆಗೆ ಸಿಕ್ಕಿಬೀಳಬೇಡ . ನಿನ್ನ ದೂಷಿಸುವರೆ, ನಿನ್ನನು ದ್ವೇಷಿಸುವರೇ, ನಿನ್ನ ಪ್ರತಿಯೊಂದು ಮಾತನ್ನು ತಿರುಚಿ ಬಿಡುವರೇ ಚಿಂತಿಸದಿರು ಧೃತಿಗೆಡದಿರು ನೀನು ನೀನಾಗಿಯೇ ಬದುಕಿ ಮೇಲೆದ್ದು ಬರುವೆನೆಂದು ಅಚಲ ನಿರ್ಧಾರ ಮಾಡಿಕೊಳ್ಳು ಬದಲಾಗಿ ಇನ್ನೇನು ಬೇಕು ನನಗೆ, ಇನ್ನು ಸಾಕು ಎನಗೆ, ಪ್ರಪಂಚವೇ ಸುಳ್ಳು  ಎಂಬ ಪದಗಳಿಗೆ ಮಾರುಹೋಗಿ ಇನ್ನ್ಯಾಕೆ ಕನಸು, ಇನ್ನ್ಯಾಕೆ ಆಸೆಗಳು ಹೇಳುತ್ತಾ ನಿನ್ನ ತಲೆಗೆ ನೀನೇ ಕಲ್ಲನ್ನು ಹಾಕಿಕೊಳ್ಳಬೇಡ.



         ಬೇಸರವೇ ಅತ್ತು ಬಿಡು, ಕೋಪವೇ ವಿಶ್ರಾಂತಿ ಪಡೆ, ದ್ವೇಷವೇ, ಸುಮ್ಮನಿರು- ಈ ಪ್ರಪಂಚದಲ್ಲಿ ಯಾರೂ ಶಾಶ್ವತವಲ್ಲ, ಈ ಪ್ರಪಂಚದಲ್ಲಿ ಯಾರೂ ದೊಡ್ಡವರಲ್ಲ, ಈ ಪ್ರಪಂಚದಲ್ಲಿ ಯಾರಿಗೆ ಯಾರೂ ಇಲ್ಲ! ನೀನೊಬ್ಬನೇ ಬಂದಿರುವೆ, ನೀನೊಬ್ಬನೇ ಹೋಗಬೇಕಾಗುತ್ತದೆ, ನಿನ್ನ ಜೊತೆಯಲ್ಲಿರುವ ಪ್ರತಿಯೊಬ್ಬರೂ ತಾತ್ಕಾಲಿಕ, ನಿನ್ನಲಿರುವ ಪ್ರತಿ ಆಸೆಯು ತಾತ್ಕಾಲಿಕ, ನಿನ್ನಲಿರುವ ಅಷ್ಟ ಐಶ್ವರ್ಯಗಳು ತಾತ್ಕಾಲಿಕ, ನೀನು ಕೂಡಿಟ್ಟ ಎಲ್ಲಾ ಹಣ ಮನೆ ಆಸ್ತಿ ಬಂಗಾರ ನಾಳೆ ಇನ್ಯಾರದೋ ಆಗುತ್ತದೆ. ನೀನು ಕೊಟ್ಟ ಪ್ರೀತಿ, ಸೇವೆ, ನೆನಪಿಸಿಕೊಳ್ಳುವ ಜನರು ತುಂಬಾ ವಿರಳ, ನೀನು ಮಾಡಿದ ಸಹಾಯ ನೆನಪಿಸಿಕೊಳ್ಳುವವರು ಬಹಳ ವಿರಳ, ಪ್ರಪಂಚದಲ್ಲಿ ನಾನು ನಾನೆಂಬ ಪೈಪೋಟಿಗೆ ಬಿದ್ದವರು ಅತ್ಯಧಿಕ.  ಮತ್ಯಾಕೆ ಚಿಂತೆ, ಅರಿಯದ ನಾಳೆಗೆ ಇಂದು ಯಾಕೆ ಚಿಂತೆ, ಈ ಕ್ಷಣ ಕಳೆದಂತೆ, ನಿನ್ನ ಮರುಕ್ಷಣವು ಕಳೆದು ಹೋಗುತ್ತದೆ, ನೀನಾಗಿಯೇ ಹೃದಯ ಕಲ್ಲಾಗಿ ಸಬೇಡ, ನಿನ್ನ ಉಸಿರು ನಿಲ್ಲಿಸುವವನು ಮೇಲೊಬ್ಬನಿದ್ದಾನೆ.  ಮತ್ಸರ ಪಡಬೇಡ, ಅಹಂಕಾರ ಪಡಬೇಡ,  ಮೋಸ ವಂಚನೆಗಳ ಗುರುವಂತೂ ನೀನಾಗಬೇಡ.

        ತಾಳು ಮನಸೇ ತಾಳು, ಹೃದಯಕ್ಕೆ ವಿಶ್ರಾಂತಿ ಕೊಡು, ತಾಳು ಮನವೇ ತಾಳು ಹೃದಯಕ್ಕೆ ಬಲವನ್ನು ಕೊಡು, ತಾಳು ಮನವೇ ತಾಳು ಹೃದಯಕ್ಕೆ ಉಸಿರಾಗಿರು. ಚಂಚಲವಾಗಬೇಡ ಮನಸೇ ಇಂಚು ಇಂಚಿನ ಲು ಉದ್ವೇಗಕ್ಕೆ ಒಳಗಾಗಬೇಡ. ಬದುಕೆಂಬ ಸಂತೆಯಲ್ಲಿ ಚಿಂತೆ ನಿನ್ನ ಆವರಿಸಿಕೊಂಡರು ನಿನ್ನ ಹೃದಯಕ್ಕೆ ಹೂವಾಗಿ ಮಗುವಂತೆ ಕಾಪಾಡು ಓ ಮನಸೇ.

       ಒಪ್ಪಿಕೊಳ್ಳುವೆ ನಿನ್ನನು, ಅಪ್ಪಿಕೊಳುವೆ ನಿನ್ನನ್ನು, ಮುದ್ದಾಡುವೆ ನಿನ್ನನು, ಜೋಗುಳ ಹಾಡುವೇ ನಿನಗೆ ಮನಸೇ, ಗೆಳೆಯನಾಗಿರು ಎನ್ನ ಜೊತೆ, ಪ್ರಪಂಚದ ಅತ್ಯುತ್ತಮ ಮುತ್ತಾಗಿರು. ಜೀವನದ ಪ್ರತಿ ಕ್ಷಣದಲ್ಲೂ ನೀ ಎನ್ನ ಕೈ ಬಿಡದಿರು, ಜೊತೆಯಾಗಿರು ಎಂದಿಗೂ, ನಾ ನಿನ್ನ ಜೊತೆಯಾಗಿರುವೆ.

   "ಭಾರತದ ಅನುರಾಗ " ನೀ ಎನ್ನ ಸಂಪತ್ತು, ಭಾರತದ ಅನುರಾಗ ನೀ ಎನ್ನ ಆಸ್ತಿ, ಭಾರತದ ಅನುರಾಗ ನೀ ನನ್ನ ಕನಸು,  ಭಾರತದ ಅನುರಾಗ ನೀ ಎನ್ನ ಉಸಿರು.

ಸರ್ವೇ ಜನಃ ಸುಖಿನೋ ಭವಂತು

ಬರಹ : ಮಾಧವ. ಕೆ ಅಂಜಾರು.







        

Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ