ಮತ್ತೆ ಹುಟ್ಟಿಬರುವರು (ಕವನ -127)


ಒಬ್ಬನ ಉಳಿವಿಗಾಗಿ
ಇಬ್ಬರು ಸೇರುವವರಿದ್ದರೆ
ಒಬ್ಬನ ಅಳಿವಿಗಾಗಿ
ಹತ್ತುಜನ ಸೇರುವವರಿದ್ದಾರೆ !
ಒಬ್ಬರ  ಉಸಿರಿಗಾಗಿ
ಶ್ರಮಿಸುವವರಿದ್ದರೆ
ಮತ್ತೊಬ್ಬರ ಉಸಿರನಿಲ್ಲಿಸಲು
ಕಾಯುತ್ತಿರುವವರಿದ್ದಾರೆ !
ಉಳಿವಿಗಾಗಿ ಕೂಡುವವರು
ಉಸಿರಿಗಾಗಿ ಸೇರುವವರು
ಜೀವಬಿಟ್ಟರೂ ನಮ್ಮೊಳಗಿರುವರು
ಮತ್ತೆ ಮತ್ತೆ ಹುಟ್ಟಿಬರುವರು !
         ✍️ಮಾಧವ ಅಂಜಾರು🌹
        



Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ