ಫೇಸ್ಬುಕ್ನಲ್ಲಿ(ಕವನ 2)

ವಾಟ್ಸಪ್ಪು ಫೇಸ್ಬುಕ್ನಲ್ಲಿ
ಒಬ್ಬಬರದು ಒಂದೊಂದು ಕಥೆ
ಹಲವರದ್ದು ಪ್ರಸ್ತುತ ಸ್ಥಿತಿ
ಕೆಲವರದ್ದು ಅಧೋಗತಿ!

ಮುಂಜಾನೆಯಿಂದ
ಅರ್ಧ ರಾತ್ರಿಯವೆರೆಗೂ
ಸಾವಿರಾರು ಕಥೆ
ಹಲವಾರು ವ್ಯಥೆ!

ನಗುವಿರದ ಮುಖದಲಿ
ಮಗುವಂತಹ ನಗು
ಚಿಕ್ಕಾಸ್ಸು ಸಂಪಾದಿಸದಿದ್ದರು
ಅದ್ದೂರಿಯ ಹಲವು ಪಟ
ಆಗಿಬಿಟ್ಟಿದೆ ಅದೊಂದು ಚಟ!

ಎನ್ನ ಸ್ಥಿತಿ ನೋಡಿಲ್ಲವೆಂದು
ಹಲವರು ಚಿಂತಿಸಿದರೆ 
ನನ್ನ ಕಥೆ ಯಾರೆಲ್ಲ ನೋಡಿದ್ದಾರೆ
ಅವರೇನು ಹೇಳಿದ್ದಾರೆ
ಎಂಬುವುದು ಕೆಲವರ ಚಿಂತೆ!

ಕವಿಯ ಕವನದ ಕಥೆಯಾದರೆ
ಪ್ರೇಯಸಿಗೆ ಪ್ರಿಯತಮನ ಕಥೆಯ ಚಿಂತೆ
ಹೆಂಡತಿಗೆ, ಗಂಡನ ಸ್ಥಿತಿಯ ಚಿಂತೆ
ಗಂಡನಿಗೆ ಹೆಂಡತಿಯ ಕಥೆಯದ್ದೆ ಚಿಂತೆ!

ಒಂದಂತೂ ನಿಜ ಬಿಡಿ
ಈ ಫೇಸ್ಬುಕ್ ವಾಟ್ಸಪ್ಪು
ಕೆಲವರಿಗೆ ಚಿಂತೆ ಬಿಡಿಸಿದರೆ
ಕೆಲವರನ್ನು ಚಿತೆ ಹತ್ತಿಸುತ್ತದೆ!
 
          ✍️ಮಾಧವ ನಾಯ್ಕ್ ಅಂಜಾರು.
       





















Comments

Popular posts from this blog

( ಲೇಖನ -122) ಭೂ - ಕೈಲಾಸ

ಲೇಖನ -117) ವಿದೇಶದಲ್ಲಿ ಪೊಲೀಸರು ಸಾರ್ವಜನಿಕರಿಗೆ ಹೇಗೆಲ್ಲ ಸಹಾಯ ಮಾಡುತ್ತಾರೆ ನೀವೇ ನೋಡಿ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ