ನನ್ನ ಬಗ್ಗೆ(ಕವನ -136)
ನನ್ನ ಬಗ್ಗೆ
ಹೇಳಬೇಕೆಂದಿದ್ದರೆ
ನಾನಿಮ್ಮ
ಜೊತೆಯಲ್ಲಿರುವಾಗಲೇ
ಹೇಳಿಬಿಡಿ,
ನನ್ನನಿಷ್ಟು
ಬಯ್ಯಬೇಕಿಂದಿದ್ದರೆ
ನಾ ನಿಮ್ಮ
ಬಳಿಯಿರುವಾಗಲೇ
ಬೈದುಬಿಡಿ,
ನನ್ನನೊಂದಷ್ಟು
ಹೊಗಳಬೇಕಿದ್ದರೆ
ನಿಮ್ಮ ಜೊತೆಯಲ್ಲಿರದಂತೆ
ನೋಡಿಕೊಳ್ಳಿ
ನನ್ನನ್ನು ದ್ವೇಷಿಸಬೇಕಿದ್ದರೆ
ನಿಮ್ಮ ಉದ್ದೇಶವೇನೆಂದು
ಅರಿತುಕೊಳ್ಳಿ
✍️ಮಾಧವ ಅಂಜಾರು 🌹
Comments
Post a Comment