(ಲೇಖನ -48)ಯಾರಿಗೆ ಬೇಕು ರಾಜಕೀಯ

ಯಾರಿಗೆ ಬೇಕು ರಾಜಕೀಯ ! ರಾಜಕೀಯ ಪ್ರತಿಯೊಬ್ಬರೂ ಮಾಡುತಿದ್ದಾರೆ ?

ಹೆಚ್ಚಿನ ಜನರಲ್ಲಿ ರಾಜಕೀಯದ ಚಿತ್ರಣವಿರೋದು ಎರಡು ಪಕ್ಷಗಳ ಅಥವಾ ವಿವಿಧ ಪಕ್ಷಗಳ ವಿರುದ್ಧ ಇರುವ ಆರೋಪ,  ಪ್ರತ್ಯಾರೋಪ,  ಗುದ್ದಾಟ,  ಅಥವಾ ವಿರೋಧಪಕ್ಷ, ಆಡಳಿತ ಪಕ್ಷದಲ್ಲಿ ಏನಾದರು ತಪ್ಪನ್ನು ಹುಡುಕಿ ದೊಡ್ಡ ಮಟ್ಟದ ರಾದ್ದಂತ ಮಾಡುವುದು ಎಂದರ್ಥವಾಗಿದೆ.  ಆದ್ದರಿಂದ ದಿನದಿಂದ ದಿನಕ್ಕೆ "ರಾಜಕೀಯ " ಅನ್ನೋ ಪದಕ್ಕೆ ಹೆದರುವಂತಹ ಸ್ಥಿತಿ ಎದುರಾಗಿದೆ. 

ಪ್ರತಿಯೊಂದು ಮನುಷ್ಯನು ಪ್ರಬುದ್ಧನಾದಾಗ  ಯಾವುದೇ  ಕೆಲಸ ಅಥವಾ ದೊಡ್ಡ ಮಟ್ಟದ ಸಂಸ್ಥೆಗಳಲ್ಲಿ ತಮಗೆ ಅರಿವಿಲ್ಲದಂತೆ ರಾಜಕೀಯ ಮಾಡುತ್ತಾರೆ,  ಆದರೆ ಉದ್ದೇಶಗಳು ವಿವಿಧ ರೀತಿಯಲ್ಲಿ ಇರುತ್ತದೆ.  ಕೆಲವರಿಗೆ ತಾನೊಬ್ಬನೇ ಬದುಕಿದರೆ ಸಾಕು,  ಇನ್ನೊಬ್ಬ ನನ್ನಿಂದ ಮೇಲೆ ಬರಬಾರದು,  ಅಥವಾ ಸರ್ವಾಧಿಕಾರಕ್ಕಾಗಿ ಹೋರಾಡುವ ವಿಕೃತರು ಕೂಡ ಇರಬಹುದು ಅದಕ್ಕಾಗಿ ಸಹಕರಿಸುವ ವಿಕೃತರೂ ಸೇರಬಹುದು.  ಇಂದಿನ ದಿನಗಳಲ್ಲಿ ರಾಜಕೀಯದಲ್ಲಿ ಗುಣಮಟ್ಟದ ಕೊರತೆ ಎಲ್ಲೆಂದರಲ್ಲಿ ಇದೆ,  ಗುಣಮಟ್ಟದ ರಾಜಕೀಯ ಮಾಡುವವರು ಅಲ್ಪ ಜನರಿದ್ದರೂ ಅವರ ಗುಣ ಎಲ್ಲರ ಮನವನ್ನು ಗೆಲ್ಲುವಲ್ಲಿ ಸಫಲವಾಗುತ್ತದೆ.  ಸಿದ್ದಾಂತ ಗಳ ಪಾಲನೆ  ಮಾಡುತ್ತಾ ಬರುವ ಅನೇಕ ಪಕ್ಷಗಳು ಸದುದ್ದೇಶದಿಂದ ಕೂಡಿದ್ದರೂ ವಿನಾಕಾರಣ ಕೆಡಿಸುವ ಪ್ರಯತ್ನ ಕೆಲವು ಜನರು ಅಥವಾ ಮುಖಂಡರು ಮಾಡುತ್ತಾರೆ,   ಇದಕ್ಕೆ ಕಾರಣ ಪ್ರಬುದ್ಧ ರಾಜಕಾರಣದ ಕೊರತೆ.  ರಾಜಕೀಯ ದ ಚಿತ್ರಣವನ್ನೇ ಬದಲಾಯಿಸಿ ಸಾಮಾನ್ಯ ಜನರಿಗೆ ರಾಜಕೀಯದ ಬಗ್ಗೆ ಹೆಚ್ಚು ಹೆದರಿಕೆಯನ್ನು ಸೃಷ್ಟಿ ಮಾಡುತ್ತಿದೆ.  ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ವಿಷಯ ರಾಜಕೀಯವೆಂದರೆ ಹೊಡೆದಾಟವಲ್ಲ,  ಊರು,  ರಾಜ್ಯ,  ದೇಶ ಇದರ ಅಭಿವೃದ್ಧಿಗೆ ಸಹಕಾರಿಯಾಗುವ  ಯೋಜನೆಗಳನ್ನು ಒಮ್ಮತದಿಂದ ಒಪ್ಪಿಕೊಂಡು ಪ್ರತಿ ಪ್ರಜೆಯು ತನ್ನ ಊರಿಗೆ, "ದೇಶಕ್ಕೆ ಉಪಯೋಗ ಆಗುವ ಚಿಂತನೆಯನ್ನು ಮಾಡುವುದೇ ರಾಜಕೀಯ". ಹಿಂದಿನ, ಇಂದಿನ ರಾಜಕಾರಣ ಬರೇ ಭಾಷಣ, ಅಥವಾ ತಮ್ಮ ತಮ್ಮ ಅನುಯಾಯಿಗಳನ್ನು ಒಪ್ಪಿಸುವುದು,  ಕಾರ್ಯಕರ್ತರನ್ನು ಶೃಷ್ಟಿಸಿ ಅವರಿಂದ ಕೆಲಸಗಳನ್ನು ಮಾಡಿಸಿ ಪಟ್ಟ ಸಿಕ್ಕಿದಮೇಲೆ ದೇಶದ ಚಿಂತನೆಯು ಮಾಡದೆ ಪ್ರಜೆಗಳನ್ನೇ ಮರೆಯುವುದಾಗಿದೆ.  ಇದರಲ್ಲಿ ತಿಳಿಯಬೇಕು ನಾವು ಆಯ್ಕೆ ಮಾಡುವ ಮುಖಂಡರಲ್ಲಿ ಯಾವ ಯಾವ ಒಳ್ಳೆಯ ಗುಣಗಳಿವೆ, ಇಲ್ಲವೆಂದು. 

ನಿಮಗೆ ಸಾವಿರ ರೂಪಾಯಿ ಕೊಟ್ಟು ವೋಟು ಹಾಕಿಸಿಕೊಳ್ಳುವವರು, ಕಂಠ ಪೂರ್ತಿ ಕುಡಿಯಲು ಕೊಟ್ಟು ಪೆಟ್ರೋಲ್ ಹಾಕಿಸಿ ದಿನಗೂಲಿ ಕೊಡುವವರು,  ಒಂದು ಧರ್ಮ ಅಥವಾ ಜಾತಿಯನ್ನೇ ಬೆಂಬಲಿಸುವವರು ಇಂದಲ್ಲದಿದ್ದರೆ ನಾಳೆ ಕೂಡ ತನ್ನ ಅವಧಿಯಲ್ಲಿ ಬೇಳೆ ಬೇಯಿಸಿಕೊಂಡು ಕೋಟಿಗಟ್ಟಲೆ ಹಣ ಮಾಡಿ ತನ್ನ ಕುಟುಂಬ ಸತ್ತರೂ ಅವರ ಹಣ ಖಾಲಿಯಾಗದಷ್ಟು ಶೇಖರಣೆ ಮಾಡಿ ಸಾಮಾನ್ಯ ಪ್ರಜೆಗಳನ್ನು ದಿನಂಪ್ರತಿ ಅಡ್ಡಾಡುವಂತೆ ಮಾಡುವ ಅದೆಷ್ಟೋ ಘಟನೆಗಳು.  ಸಣ್ಣ ಉದಾಹರಣೆ,  ನಮ್ಮ ಊರಲ್ಲಿ ಪಂಚಾಯತು ವ್ಯವಸ್ಥೆ,  ಸರ್ಕಾರ ಯಾವುದೇ ಇರಲಿ ಸರ್ಕಾರದಿಂದ ಬರುವ ಸವಲತ್ತನ್ನು ಸಾಮಾನ್ಯ ಜನರಿಗೆ ತಲುಪಿಸುವಲ್ಲಿ ಕೂಡ ಬೇಧಭಾವ,  ನನ್ನ ಮನೆಯ ಹತ್ತಿರ ಸುಮಾರು ಒಬ್ಬರ ಮನೆಗೆ ನಳ್ಳಿ ನೀರಿನ ಅವಶ್ಯಕತೆ ಇದ್ದಿತ್ತು, ಅಕ್ಕಪಕ್ಕದ ಮನೆ ಬೇರೆ ಬೇರೆ ಪಕ್ಷಗಳನ್ನು ಬೆಂಬಲಿಸುವವರಾಗಿದ್ದು.  ನಿರ್ದಿಷ್ಟ ಪಕ್ಷದ ನಾಯಕರು,  ಅಥವಾ ಪಂಚಾಯತ್ ಸದಸ್ಯರು ಅಗತ್ಯವಿರುವ ನೀರಿನ ವ್ಯವಸ್ಥೆಯನ್ನು ಮಾಡಲು ಅಡ್ಡಿಪಡಿಸಿ ನಿಮ್ಮ ಮನೆಗೆ ನೀರನ್ನು ಕೊಡಿಸಲು ಸಾಧ್ಯವಿಲ್ಲ ಎಂಬ ಮಾತನ್ನು ಹೇಳಿ ವಿನಾ ಕಾರಣ ತೊಂದರೆ ಮಾಡಿಬಿಟ್ಟರು.  ಇದು ಒಂದು ಸಣ್ಣ ಉದಾಹರಣೆಯಾದರೆ ಅದೆಷ್ಟೋ ಇಂತಹ ಘಟನೆಗಳು ಅಧಿಕಾರ ದರ್ಪದಿಂದ ದುರುಪಯೋಗ ಮಾಡಿಬಿಡುವಂತಹ ಸಂಧರ್ಭಗಳು.  ಯಾಕೆ ಹೀಗೆ?  ಸರ್ಕಾರದ ಸವಲತ್ತು ಕೆಲವೇ ಕೆಲವು ಮನೆಗಳಿಗೆ ನಿರಂತರ ಲಭಿಸುವುದು,  ರಾಜಕೀಯ ಮುಂಖಂಡರ ಜನರಿದ್ದಲ್ಲಿ ಮಾತ್ರ ರಸ್ತೆ ನಿರ್ಮಾಣ.  ಒಂದೊಂದು ಜಾತಿಗಳಿಗೆ, ಒಂದೊಂದು ಧರ್ಮಗಳಿಗೆ ಒಂದೊಂದು ರಾಜಕೀಯ ಪಕ್ಷಗಳ ದೊಂಬರಾಟ.  ನನಗೆ ರಾಜಕೀಯ ಬೇಡವೆಂದು ಕುಳಿತಿರುವವರು ಪಕ್ಷಗಳ ದುಷ್ಟ ಧೋರಣೆಗಳಿಗೆ ಕಣ್ಣುಮುಚ್ಚಿ ಸಹಕರಿಸುವ ಜನರು ಎಲ್ಲಿಯವರೆಗೆ ಇದ್ದಾರೆ ಅಲ್ಲಿಯವರೆಗೆ ಗುಣಮಟ್ಟವಿಲ್ಲದ ರಾಜಕೀಯ ಮುಖಂಡರು ಮತ್ತು  ಗುಣಮಟ್ಟವಿಲ್ಲದ ಜನರು ಮೆರೆಯುತ್ತಾರೆ. 

ರಾಜಕೀಯದಲ್ಲಿ ನಿರ್ದಿಷ್ಟ ಗುಂಪು,  ತನ್ನ ಪಕ್ಷಗಳಿಗೆ ಮುಳುವಾಗಿ ಬೆಳೆಯುತ್ತಾರೆ,  ಏನೊ ಮಾಡೋಕೆ ಹೋಗಿ ಇನ್ನೊಂದು ಮಾಡುತ್ತಾ ಸಮಾಜದ ಮತ್ತು ಸಾಮಾನ್ಯ ಜನರ ಬದುಕು ಕೆಡವಿ ವಿಕೃತ ಮೆರೆಯುವ ಕೆಲಸ ಮಾಡುವಲ್ಲಿ ತಲ್ಲೀನರಾಗುತ್ತಾರೆ ಅದಕ್ಕೆ ಕಾರಣ ಕಣ್ಣು ಮುಚ್ಚಿ,  ಮುಖಂಡರು ಹೇಳುವ ಮಾತನ್ನು ಪಾಲಿಸೋದು.  ಇದು ತಪ್ಪು,  ಪ್ರತಿಯೊಬ್ಬ ಪ್ರಜೆ ತನ್ನದೇ ಸ್ವತಃ ಬುದ್ದಿ ಉಪಯೋಗಿಸಿ ಸತ್ಯ ಅಸತ್ಯದ ಬಗ್ಗೆ ಚಿಂತನೆಯನ್ನು  ಮಾಡದೆ ಕುರುಡನಂತೆ ಮಾಡುವನೋ ಅಲ್ಲಿಯವರೆಗೆ ರಾಜಕೀಯದ ಚಿತ್ರಣ ಬದಲಾಗೋಕೆ ಸಾಧ್ಯವಿಲ್ಲ.  ನಾವೆಲ್ಲರೂ ಭಾರತೀಯರು ನಮ್ಮ ಯೋಚನೆಯ ಗುಣ ನಮ್ಮೆಲ್ಲರ ಉದ್ದಾರಕ್ಕೆ ಮತ್ತು ಅವನತಿಗೆ ಕಾರಣವಾಗಬಹುದು.  ಆದ್ದರಿಂದ ಗುಣಮಟ್ಟದ ಪ್ರಜೆಗಳು ಎಲ್ಲಿಯವರೆಗೆ ಸಿಗೋದಿಲ್ಲವೋ ಅಲ್ಲಿಯವರೆಗೆ ರಾಜಕೀಯದಲ್ಲಿ ಗುದ್ದಾಟ, ಹೊಡೆದಾಟ,  ತೇಜೋವಧೆ,  ಸಮಾಜಘಾತುಕ ಘಟನೆ ನಡೆಯುತ್ತಲೇ ಇರುತ್ತದೆ. 

ವಿದ್ಯೆ ಇಲ್ಲದಿದ್ದರೂ, ಬುದ್ದಿವಂತರಾಗಿ,  ವಿವೇಚನೆ ಶಕ್ತಿಯನ್ನು ಬೆಳೆಸಿಕೊಂಡಲ್ಲಿ ಒಬ್ಬ ಇನ್ನೊಬ್ಬರಿಗೆ ಆದರ್ಶವಾಗಿ ಬೆಳೆದಾಗ ಸಮಾಜದಲ್ಲಿ ಶಾಂತಿಯುತ ರಾಜಕಾರಣ ಮಾಡಬಹುದು ಎಂಬ ಅನಿಸಿಕೆ. 

ಸಾಮಾನ್ಯವಾಗಿ,  ಎಲ್ಲಾ ಸರಕಾರಿ ಅಧಿಕಾರಿಗಳು, ರಾಜಕೀಯ ಮುಖಂಡರು,   ಪಂಚಾಯತ್,  ನಗರಸಭೆ,  ಅಥವಾ ಜಿಲ್ಲಾ, ತಾಲೂಕು ಕಚೇರಿಗಳಲ್ಲಿ ತಮ್ಮ ಪ್ರಾಮಾಣಿಕ ಕೆಲಸಗಳನ್ನು ಮಾಡಿದಲ್ಲಿ ಇದೆಲ್ಲವೂ ಸಾಧ್ಯ.  ಪ್ರತಿಯೊಂದು ನೌಕರ, ಕೆಲಸಗಾರ  ತಮ್ಮಿಂದ ಆಗುವಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದಲ್ಲಿ ಮುಂದಿನ ದಿನಗಳಲ್ಲಿ ಭವ್ಯ ಭಾರತದ ಕನಸನ್ನು ನನಸು ಮಾಡುವ ಕೀರ್ತಿ, ಪುಣ್ಯದ ಕೆಲಸ ನಿಮ್ಮದಾಗಬಹುದು.  ಇದನ್ನೂ ತಪ್ಪಿದಲ್ಲಿ ಕೊರೊನದಂತಹ ಇನ್ನೊಂದು ಮಾರಿಗೆ  ಬಲಿಯಾಗುವ ಸಾಧ್ಯತೆ  ಅಥವಾ ಕೊರೊನದಂತೆ ನೀವೂ ಕೂಡ ಭಾರತಕ್ಕೆ ಒಂದು ಪಿಡುಗು ಅನ್ನೋದನ್ನು ಭಾವಿಸಬೇಕಾಗುತ್ತದೆ. 

ಎಲ್ಲರೂ ಸಮಾನರು,  ಎಲ್ಲರೂ ಒಳಿತಾಗಿ,  ಬಾಂಧವ್ಯದಿಂದ ಬದುಕೋಣ

ಜೈ ಹಿಂದ್,  ಜೈ ಭಾರತ್ 🙏

✍️ಮಾಧವ ನಾಯ್ಕ್ ಅಂಜಾರು 🙏🌹

Comments

Popular posts from this blog

( ಲೇಖನ -122) ಭೂ - ಕೈಲಾಸ

ಲೇಖನ -117) ವಿದೇಶದಲ್ಲಿ ಪೊಲೀಸರು ಸಾರ್ವಜನಿಕರಿಗೆ ಹೇಗೆಲ್ಲ ಸಹಾಯ ಮಾಡುತ್ತಾರೆ ನೀವೇ ನೋಡಿ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ