(ಲೇಖನ -8)ಮೊದಲು ಮಾನವನಾಗು, ಬರೇ ತೋರ್ಪಡಿಕೆಯ ಜೀವನ ಸಲ್ಲದು, ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಆಗಬಾರದು

ಮೊದಲು ಮಾನವನಾಗು, ಬರೇ ತೋರ್ಪಡಿಕೆಯ ಜೀವನ ಸಲ್ಲದು, ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಆಗಬಾರದು, ಸಹಾಯ ಮಾಡುವುದಿದ್ದರೆ ನಿನ್ನ ಆತ್ಮತೃಪ್ತಿಗಾಗಿ ಮಾಡಿಕೊಳ್ಳು, ಈ ಮಾತನ್ನು ಭಾರತದ ಅನುರಾಗ ಗುಂಪಿನ ಸದಸ್ಯರೊಬ್ಬರ ಮಾತು. ನಿನ್ನ ಜೀವನದಲ್ಲಿ ಮಾಡುತ್ತಿರುವ ಚಿಕ್ಕಪುಟ್ಟ ಸಹಾಯಗಳು ದೊಡ್ಡದಾಗುತ್ತಾ ಹೋಗುತ್ತದೆ, ಅದು ಹಣದ ಮೂಲಕವಾಗಲಿ, ವಿವಿಧ ತರದ ಸಹಾಯದ ಮೂಲಕವಾಗಲಿ, ಏನೇ ಇರಲಿ, ನೀನು ಮಾಡುತ್ತಿರುವ ಸತ್ಕರ್ಮಗಳು  ನಿನ್ನ ಮುಂದಿನ ಜೀವನಕ್ಕೆ ಬೆನ್ನೆಲುಬಾಗಿ ನಿನಗೆ ತಿಳಿಯದಂತೆ ಕಾಪಾಡುತ್ತಿರುತ್ತದೆ.



     ಎಲ್ಲರೂ ಜೀವನದಲ್ಲಿ ಸಂಪಾದನೆಯನ್ನು ಮಾಡುತ್ತಾರೆ, ತಾನು ಮಾಡಿದ ಸಂಪಾದನೆಯಲ್ಲಿ  ಒಂದಷ್ಟು ಸಮಾಜಕ್ಕಾಗಿ ಮೀಸಲಿಡುವ ಜನರೂ  ಇದ್ದಾರೆ, ಒಂದಷ್ಟು ಜನರು ಸಮಾಜ ನಮಗೆ ಏನು ಕೊಡುತ್ತದೆ  ಸಮಾಜ ನಮಗೆ ಅಗತ್ಯವಿಲ್ಲ  ಎಂಬಂತೆ ಬದುಕುವವರಿದ್ದಾರೆ, ಧರ್ಮ ಸಂಪ್ರದಾಯ ಎಲ್ಲವೂ ನಮಗೆ ಬೇಕು  ಆದರೆ ಎಲ್ಲವೂ ಇತಿಮಿತಿಯಲ್ಲಿರಬೇಕು. ಯಾವುದೂ ಅತಿರೇಕವಾದರೆ ಸಮಸ್ಯೆಗಳು ತಾನಾಗೆ ಹುಟ್ಟಿಕೊಳ್ಳುತ್ತದೆ. ಸರಾಸರಿ ಶೇಕಡ  20ರಷ್ಟು ಜನಗಳು  ತನ್ನನ್ನು ತಾನು  ಅನ್ಯರ ಸೇವೆಗಾಗಿ  ತೊಡಗಿಸಿಕೊಳ್ಳುತ್ತಾರೆ. ನಿಮ್ಮ ಸುತ್ತಮುತ್ತಲು  ಒಮ್ಮೆ ಕಣ್ಣು ಹಾಯಿಸಿ ನೋಡಿ  ಕೆಲವೇ ಕೆಲವು ಜನರು  ಸದ್ದಿಲ್ಲದೆ, ತನ್ನಿಂದಾಗುವ  ಒಳಿತಿನ ಕೆಲಸವನ್ನು  ಯಾವುದೇ ಅಪೇಕ್ಷೆ ಗಳಿಲ್ಲದೆ ಮಾಡುತ್ತಿರುತ್ತಾರೆ. ಅವರು  ನಿಜವಾದ ಮಾನವಕುಲದ ಆಸ್ತಿಗಳು, ಅಂತವರು  ಅನ್ಯರಿಗೆ ಹಾನಿಯನ್ನುಂಟುಮಾಡುವುದಿಲ್ಲ . ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸುವುದಿಲ್ಲ, ಅನಗತ್ಯ ವಿವಾದಗಳನ್ನು, ಅನಗತ್ಯ ಸವಾಲನ್ನು ಮಾಡುವುದಿಲ್ಲ. ಸರ್ವರಲ್ಲೂ ಬೇರೆತು ತನ್ನ ಜೀವನಕ್ಕೆ ಒಂದು ಆಕೃತಿ ಕೊಟ್ಟು ಅಗಲಿಬಿಡುತ್ತಾರೆ.

        ಇಲ್ಲಿ ಯಾರೂ ಶಾಶ್ವತವಲ್ಲ, ಯಾರೂ ದೊಡ್ಡವರೂ ಅಲ್ಲ, ಯಾರೂ ಚಿಕ್ಕವರೂ ಅಲ್ಲ, ಬದುಕಿನ ಯಾವುದೇ ಕ್ಷಣದಲ್ಲಿ ಏನೂ ಆಗಬಹುದು, ಅಹಂ ಇದ್ದವರ ಜೀವನ ಅದರಲ್ಲಿಯೇ ಮುಳುಗಿ ಹೋಗುತ್ತದೆ. ಉಸಿರು ಕೊಟ್ಟ ದೇವರು, ಯಾವಾಗ ಉಸಿರನ್ನು ನಿಲಿಸುವ ನಮಗೆ ತಿಳಿದಿಲ್ಲ! ಎಲ್ಲವೂ ಅವನ ಇಚ್ಛೆ.

   ಎಷ್ಟೊಂದು ಸುಂದರವಾದ ಮಾತು, ಹೌದು ಮಾತಾನ್ನಾಡಿದರೆ ಇಂತವರಲ್ಲಿ ಮಾತಾಡು, ನಿನ್ನ ಜ್ಞಾನ ಹೆಚ್ಚಿಸು, ಬದುಕಿನಲ್ಲಿ ಬದಲಾವಣೆ ಮಾಡಿಕೊಳ್ಳು. "ಭಾರತದ ಅನುರಾಗ " ನಿಮಗೆಲ್ಲರಿಗೂ ಹಾರೈಸುತ್ತ.

ನಿಮ್ಮ ಹೆಸರಲ್ಲಿ ಈ ಲೇಖನ, ನನ್ನ ಜೀವನದ ಪುಟದಲಿ. ಶ್ರೀ ನವೀನ ಶಕ್ತಿನಗರ,  ನಿಮ್ಮ ಪ್ರೀತಿ ವಾತ್ಸಲ್ಯಕ್ಕೆ ಚಿರಋಣಿ.

ಬರಹ : ಮಾಧವ. ಕೆ ಅಂಜಾರು.


     

 









Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ