(ಲೇಖನ -11)ಕನಸಿನ ದೋಣಿ......

 ಕನಸಿನ ದೋಣಿ....

ಕನಸಿಲ್ಲದ ಬದುಕು ವ್ಯರ್ಥ, ಮನಸಿಲ್ಲದ ಕಾಯಕ ವ್ಯರ್ಥ, ಮನುಜನಾಗಿ ಹುಟ್ಟಿದವನಿಗೆ ಕನಸುಗಳು ಇರಬೇಕು ಮತ್ತು ಅದನ್ನು ಈಡೇರಿಸುವ ಛಲವೂ ಇರಬೇಕು. ಆ ಕನಸು ಈಡೇರಬೇಕಾದರೆ ಹಗಲಿರುಳು ಶ್ರಮ ಇರಲೇಬೇಕು, ಶ್ರಮವಿಲ್ಲದೆ ಸಿಗುವ ಯಾವುದೇ ವಸ್ತುವಿನ ಬೆಲೆ ನಮಗೆ ತಿಳಿದಿರುವುದಿಲ್ಲ. ಮನೆಯಾಗಲಿ, ವಾಹನವಾಗಲಿ, ಐಶ್ವರ್ಯ, ಆಸ್ತಿ, ಗೌರವ, ಸ್ಥಾನ ಮಾನ ಯಾವುದಿದ್ದರೂ ಶ್ರಮಪಡಬೇಕು.





      ಕೆಲವರು ತನ್ನ ಕನಸಿಗಾಗಿ ಸರ್ವಸ್ವವನ್ನು ತ್ಯಾಗ ಮಾಡಿದರೆ, ಕೆಲವರು ಕನಸನ್ನು ಬುದ್ದಿವಂತಿಕೆಯಿಂದ ಸಾಕರಗೋಳಿಸುತ್ತಾರೆ. ಕನಸಿಲ್ಲದ ಜನರು ಜೀವನದಲ್ಲಿ ಸಾಧನೆಯನ್ನು ಮಾಡಲು ಸಾಧ್ಯವಿಲ್ಲ. ನಿಮಗೆ ಏನಾದರು ಮಾಡಬೇಕು ಎಂಬ ಛಲವಿದ್ದರೆ ಅದನ್ನು ಗಳಿಸಲು ಶ್ರಮ ಪಡುತ್ತಲೇ ಇರುತ್ತೀರಿ, ನಿಮಗೆ ತಿಳಿದು ಅಥವಾ ತಿಳಿಯದೆ ಮಾಡುತ್ತ ಇರುತ್ತೀರಿ.

     ಪ್ರಪಂಚದಲ್ಲಿ ವಿವಿಧ ಚಿಂತನೆ, ವಿಚಾರ, ಧ್ಯೇಯ ಮತ್ತು ಕನಸುಗಳನ್ನು ಹೊಂದಿರುವ ಮನುಜರಿರುತ್ತಾರೆ ಕೆಲವರ ಧ್ಯೇಯ, ಉದ್ದೇಶ, ಅನ್ಯರನ್ನು ನಾಶಮಾಡಲು ಉಪಯೋಗಿಸಿದರೆ, ಕೆಲವರು ಸ್ವಾರ್ಥಕ್ಕೆ ಉಪಯೋಗಿಸಿಕೊಳ್ಳುತ್ತಾರೆ. ಕೆಲವರು ಸಮಾಜಕ್ಕಾಗಿ ಉಪಯೋಗಿಸಿಕೊಳ್ಳುತ್ತಾರೆ.  ಏನಿದ್ದರೂ ನಿನ್ನ ಕನಸಿನ ದೋಣಿ ದಡಸೇರಲು ನಿನಗೆ ಹಠ ಇರಲೇಬೇಕು, ಎಲ್ಲರೂ ದಡ ತಲುಪಲು ಸಾಧ್ಯವಿಲ್ಲ, ಬದುಕೆಂಬ ನೌಕೆಗೆ ಆಕಸ್ಮಿಕ ಬಿರುಗಾಳಿ ಸಿಕ್ಕಿ ನಲುಗಿ ದಡ ಸೇರದೆ ಮುಳುಗಲು ಬಹುದು, ಆದರೆ ಛಲವೆಂಬ ಬಾಣವನ್ನು ನಾನು ನೀನು ಉಪಯೋಗಿಸಿ ಗುರಿಯನ್ನು ತಲುಪಲು ಶ್ರಮಪಡು

      ನಿನ್ನ ಛಲ ಭಾರತದ ಗೆಲುವಿಗಾಗಿ ಉಪಯೋಗಿಸು, ಭಾರತ ಮಣ್ಣಿನ ಮೌಲ್ಯದ ಮುತ್ತು ನೀನಾಗು.

ಭಾರತದ ಅನುರಾಗ ನಿನಗೆ ಹಾರೈಸುತ್ತದೆ.

      ಬರಹ : ಮಾಧವ. ಕೆ ಅಂಜಾರು 



 




Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.