ನಾನವನಲ್ಲ (ಕವನ -109)


ಸಾರಾಯಿ ಕುಡಿಯುವವರೆಲ್ಲಾ
ಕೆಟ್ಟವರಂತೂ ಅಲ್ಲ,
ಹಾಲು ಕುಡಿಯುವವರೆಲ್ಲರೂ
ಒಳ್ಳೆಯವರೇನಲ್ಲ !;
ಕದ್ದು ಮುಚ್ಚಿ ಕುಡಿಯುವವರು
ಸಜ್ಜನರಂತೂ ಅಲ್ಲ
ಕುಡಿದು ಓಲಾಡುವವರೆಲ್ಲರೂ
ಅತೀ ಕುಡುಕರಲ್ಲ !;
ಕುಡಿದು ಕುಡಿಯೋದಿಲ್ಲ ಅನ್ನೋರು
ಸತ್ಯವಂತರಲ್ಲ
ಕುಡಿದು ಕುಡಿಸುವವರೆಲ್ಲ
ಹಣವಂತರಲ್ಲ !;
ಕುಡಿದು ಬರುವವರೆಲ್ಲ
ಹೆಜ್ಜೆ ಹಾಕುವರು  ಮೆಲ್ಲ
ಕುಡಿದು ಬಿದ್ದರೂ ಕೂಡ
ಹೇಳುವರು, ನಾನವನಲ್ಲ !;
   ✍️ಮಾಧವ ನಾಯ್ಕ್ ಅಂಜಾರು 🌹

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ