(ಲೇಖನ -12)ಕುರುಡು - ಅನರ್ಥ -ಅನರ್ಹ ಮಾಧ್ಯಮಗಳು, ಸಮಾಜದ ಶಾಂತಿ ಕಾಪಾಡಲು ಸಾಧ್ಯವೇ? ಹೌದು, ತಂತ್ರಜ್ಞಾನ ಮುಂದುವರೆದಂತೆ, ಮಾನವನಿಗೆ ಸಿಗುವ ಸವಲತ್ತುಗಳು ಜಾಸ್ತಿಯಾಗುತ್ತಿದೆ.

ಕುರುಡು - ಅನರ್ಥ -ಅನರ್ಹ ಮಾಧ್ಯಮಗಳು, ಸಮಾಜದ ಶಾಂತಿ ಕಾಪಾಡಲು ಸಾಧ್ಯವೇ? ಹೌದು, ತಂತ್ರಜ್ಞಾನ ಮುಂದುವರೆದಂತೆ, ಮಾನವನಿಗೆ ಸಿಗುವ ಸವಲತ್ತುಗಳು ಜಾಸ್ತಿಯಾಗುತ್ತಿದೆ. ನಿಮಿಷದೊಳಗೆ ಪ್ರಪಂಚದಾದ್ಯಂತ ಸುದ್ದಿಯನ್ನು ಹರಡುವಷ್ಟು ಮಾನವ ನಿರ್ಮಿತ ತಂತ್ರಜ್ಞಾನ ಮುಂದುವರಿದಿದೆ, ನಿಜವಾಗಲೂ ನಮಗೆ ಸಿಗುವ ಎಲ್ಲಾ ಸುದ್ದಿಗಳು ನಿಜಾಂಶ ಹೊಂದಿರುತ್ತದೆಯೇ? ಯಾವ ಸುದ್ದಿ ನಿಜ, ಯಾವುದು ತಪ್ಪು ಅನ್ನುವ ಗೋಜಿಗೆ ಹೋಗದೆ ಮನಸ್ಸಿಗೆ ತೋಚಿದಂತೆ ಹಬ್ಬಿಸುವ ಮಾಧ್ಯಮಗಳು ನಾಯಿ ಕೊಡೆಗಳಂತೆ ಪ್ರಸ್ತುತ ದಿನಗಳಲ್ಲಿ ಜಾಸ್ತಿಯಾಗಿಬಿಟ್ಟಿದೆ. ಹೆಚ್ಚಿನ ಟಿವಿ ಮಾಧ್ಯಮಗಳು ಬಂಡವಾಳ ಶಾಹಿಗಳು ಮತ್ತು ರಾಜಕೀಯ ವ್ಯಕ್ತಿಗಳ ಕಪಿಮುಷ್ಟಿಯಲ್ಲಿದ್ದು, ಕೆಲವರು ತನ್ನತನವನ್ನು ತೋರಿಸಲು ಅವರದ್ದೇ ಆದ ರೀತಿಯಲ್ಲಿ ಸಮಾಜಕ್ಕೆ ತಪ್ಪು ಸಂದೇಶಗಳನ್ನು ರವಾನಿಸಿ ದೇಶ ವಿದೇಶದಲ್ಲಿ ಅಶಾಂತಿಯನ್ನು ಸೃಷ್ಟಿಸಲು ಹವಣಿಸುತಿರುತ್ತಾರೆ, ಇದರಲ್ಲಿ ಸಾಮಾಜಿಕ ಜಾಲತಾಣ ಅತೀ ಮುಖ್ಯವಾಗಿ ಕಾರ್ಯನಿರ್ವಹಿಸುತ್ತಿದ್ದು, ದೇಶದ ಆಂತರಿಕ ವಿಷಯಗಳಲ್ಲೂ ಬೇಕಾಬಿಟ್ಟಿ ಗೀಚುವ ಅದೆಷ್ಟು ಜನರು ಈಗಲೂ ಜೀವಂತವಾಗಿದ್ದಾರೆ.



          ಹೌದು ಪ್ರತಿಯೊಂದು ಸುದ್ದಿಗಳು ಸತ್ಯವನ್ನು ಹೊಂದಿರುವುದಿಲ್ಲ, ಸುದ್ದಿಗಳು ಸುದ್ದಿಯಾಗಿ ಕಳೆದುಹೋಗುತ್ತದೆ, ಸಮಾಜಕ್ಕೊಳಿತು ಮಾಡುವ ಸುದ್ದಿಗಳು ಜನರು ಬೇಗನೆ ಕೇಳುವುದಿಲ್ಲ, ಅದಕ್ಕಾಗಿ ಟಿವಿ ಮಾಧ್ಯಮದ ಕೆಲವು ಜನರು ತನ್ನ ಹೊಟ್ಟೆಪಾಡಿಗಾಗಿ ಸುಳ್ಳು ಸುದ್ದಿಯನ್ನು ಹಬ್ಬಿಸಿ ವೀಕ್ಷಕರನ್ನು ಗಳಿಸಲು ಹೊರಡುತ್ತಾರೆ. ವೀಕ್ಷಕರು ಜಾಸ್ತಿ ಆದಂತೆ ತನ್ನ ಹೊಟ್ಟೆಯನ್ನು ದೊಡ್ಡದಾಗಿ ಬೆಳೆಸಿ, ಇನ್ನಷ್ಟು ಹಣಗಳಿಸುವ ಚಪಲದಿಂದ ವಿವಿಧ ಸುದ್ದಿಗಳನ್ನು ವಾರಗಟ್ಟಲೆ, ತಿಂಗಳುಗಟ್ಟಲೆ, ಪ್ರಸಾರಮಾಡಿ, ಒಂದಷ್ಟು ಸಂಘ ಸಂಘಟನೆಗಳ ಜನರನ್ನು ಕ್ಯಾಮರಾ ಕಣ್ಣಿನ ಮುಂದಿಟ್ಟು ಉರಿಯುವ ಬೆಂಕಿಗೆ ಎಣ್ಣೆ,ತುಪ್ಪ, ಸುರಿದು ಇನ್ನಷ್ಟು ಅಶಾಂತಿ ನಿರ್ಮಿಸಿ ಹಾಯಾಗಿ ಮಲಗಿಬಿಡುತ್ತಾರೆ.

   ಬಂದ ಸುದ್ದಿಗಳನ್ನು ವಿಮರ್ಶೆಮಾಡದೆ, ಗಲೀಜು ಜಾಗಕ್ಕೆ ಸೇರುವ ನೊಣಗಳಂತೆ ಒಂದಷ್ಟು ಜನರು ಆ ಸುದ್ದಿಯನ್ನು ನೋಡಿ, ವಿಕೃತಿ ಮೆರೆಯಲು ಆರಂಭಿಸುತ್ತಾರೆ. ತೃಪ್ತಿ ಪಡದೆ ಮತ್ತಷ್ಟು ಜನರನ್ನು ಒಗ್ಗೂಡಿಸಿ ಹೋರಾಟ ಎಂಬ ಹೆಸರಲ್ಲಿ ಸರಕಾರಿ, ಸಾರ್ವಜನಿಕ ಆಸ್ತಿಗಳನ್ನು ನಾಶಪಡಿಸಿ, ಮಾಡಬಾರದ್ದನ್ನು ಮಾಡಿ ಒಂದಷ್ಟು ಜನ ದಾರಿಲಿ ಹೋಗುವ ಮಾರಿಯನ್ನು ತನ್ನ ಮನೆಯೊಳಗೆ ಸೇರಿಸಿಕೊಂಡು ಕೋರ್ಟು ಕಛೇರಿ ನಲಿಯಲು ಆರಂಭಿಸುತ್ತಾರೆ, ಒಟ್ಟಾರೆ ಸಮಾಜದ ಸ್ವಾಸ್ತ್ಯ ಕೆಡಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ.

     ಮಾಧ್ಯಮಗಳು ಜವಾಬ್ದಾರಿಯುತವಾಗಿ ವರ್ತಿಸಲಿ, ಪ್ರತೀ ಪ್ರಜೆ ತನ್ನ ಸಮಾಜದ ಜವಾಬ್ದಾರಿ ಹೊಂದಿರಲಿ, ಯಾರದ್ದೋ ಮನೆಗೆ ಬೆಂಕಿ ಹಾಕಿ ವಿಕೃತಿ ಮೆರೆಯುವ ಕೆಲಸ ಮಾಡಿ ಖುಷಿಪಡಬೇಡಿ. ಯಾವ ಸುದ್ದಿಗಳು ನಿಮ್ಮನ್ನು ನೆಮ್ಮದಿಯಾಗಿರಲು ಬಿಡುವುದಿಲ್ಲವೋ ಅದನ್ನು ನೋಡುವುದನ್ನು ಬಿಟ್ಟು ಬಿಡಿ, ಇಲ್ಲವಾದಲ್ಲಿ ಹುಚ್ಚರ ಸಂತೆಯಲ್ಲಿ ಹುಚ್ಚರಾಗಿಹೋಗುವ ಸಾಧ್ಯತೆಗಳು ಜಾಸ್ತಿ.

  ಭಾರತದ ಅನುರಾಗ ಉತ್ತಮವಾದ ಸಂದೇಶ ಮತ್ತು ಸಕರಾತ್ಮಕ ಚಿಂತನೆಯ ಹಾದಿಯಲ್ಲಿ ನಿಮ್ಮೆಲ್ಲರ ಸಹಕಾರದೊಂದಿಗೆ.

ಬರಹ : ಮಾಧವ ನಾಯ್ಕ್ ಅಂಜಾರು.

           

       

   

 













Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.