ಬದುಕು ನಶ್ವರ (ಕವನ -112)


ಬದುಕು ನಶ್ವರ
**********
ಅತಿಹೆಚ್ಚು ಮೆಚ್ಚುಗೆ
ಚುಚ್ಚಬಹುದು ಕೊನೆಗೆ
ಅತಿಹೆಚ್ಚು ಬೆಚ್ಚಗೆ
ಬೆವರಿಳಿಸಬಹುದು ಜೋಕೆ
ಮೆಚ್ಚಿಸಲು ಹೋಗಿ
ಜಾರಿ ಬೀಳಬೇಡಿ
ಬಿಸಿಮಾಡಲು ಹೋಗಿ
ಕೈ ಸುಟ್ಟುಕೊಳ್ಳಬೇಡಿ, 
ಬದುಕಿದು ನಶ್ವರ
ನೋಡುತಿಹ ಈಶ್ವರ
ಕೈ ಮುಗಿದು ಹೇಳಿ ಹರ ಹರ
ತಲೆಬಾಗಿ ಬೇಡಿ ವರ
ಬರದಿರಲಿ ಜ್ವರ
ನಾಲ್ಕು ದಿನದ ಬಾಳ್ವೆ
ಸುಖವಾಗಿರಲಿ ಈಶ್ವರ
ನಿನ್ನ ಮಹಿಮೆ ಅಗೋಚರ !
  ✍️ಮಾಧವ ನಾಯ್ಕ್ ಅಂಜಾರು 🌹
        ( ಎಂ. ಎನ್. ಎ )

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ