ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ
ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ ಆರಂಭಕ್ಕೆ ಕಾರಣಕರ್ತರಾಗಿರುವ , ಬಾವಿಕಟ್ಟೆ ಪದ್ಮನಾಭ ನಾಯ್ಕ ಮತ್ತು ಅಂಜಾರು ಮಠದ ದಿ ll ಲಕ್ಷೀ ನಾರಾಯಣ ಭಟ್. ಇಂದಿನ ಪೀಳಿಗೆಗೆ ತಿಳಿಯದೇ ಇರುವ ವಿಷಯ ಮತ್ತು ಸವಿ ನೆನಪುಗಳ ಪುಟಗಳು.
ಸುಮಾರು 45 ವರುಷದ ಹಿಂದೆ ಆರಂಭಗೊಂಡ ಭಜನಾ ಮಂಡಳಿಯ ಮುಖ್ಯ ಕಾರಣಕರ್ತ ಅಂಜಾರು ಬಾವಿಕಟ್ಟೆ ಶ್ರೀ ಪದ್ಮನಾಭ ನಾಯ್ಕ ಯಾನೆ ನಂಗಣ್ಣ, ತಮ್ಮ ಯವ್ವನದ ದಿನಗಳಲ್ಲಿ ಬಹಳಷ್ಟು ಕನಸುಗಳನ್ನು ಕಂಡಿರುವ ಮತ್ತು ಸ್ವ ಉದ್ಯೋಗ ಮಾಡುತ್ತಲೆ ಬಿಡುವಿನ ಸಮಯದಲ್ಲಿ ಶ್ರೀಯುತ ಲಕ್ಷೀ ನಾರಾಯಣ ಭಟ್ ಇವರೊಂದಿಗೆ ಬಹಳಷ್ಟು ಬಾಂಧವ್ಯದಿಂದ ಕೂಡಿ ಬೆಳೆದಿರುವ ಶ್ರೀ ಪದ್ಮನಾಭ ನಾಯ್ಕ ಎಳೆಯ ವಯಸ್ಸಿನಲ್ಲಿ ಹಾಲಿನ ಡೈರಿಯನ್ನು ಮನೆಯಲ್ಲಿಯೇ ಆರಂಭಿಸಿ ಮಣಿಪಾಲದ ವರೆಗೂ ಸೈಕಲನ್ನು ತುಳಿದುಕೊಂಡು ಹೋಗಿ ಬರುತಿದ್ದ ಆ ಕಾಲ. ಬಹಳಷ್ಟು ಕಾಡು ದಾರಿ ಸರಿಯಾದ ರಸ್ತೆ ಸಂಪರ್ಕ ಗಳು ಇಲ್ಲದೇ ಇದ್ದರೂ ಸುಮಾರು 7 -8 ಹಾಲಿನ ಕ್ಯಾನ್ ತುಂಬಿಸ್ಕೊಂಡು ಮಣಿಪಾಲಕ್ಕೆ ಹಾಲು ಸರಬರಾಜು ಮಾಡುತ್ತಾ ಎಲ್ಲರ ಪ್ರೀತಿ ಪಾತ್ರರಾಗಿದ್ದರು ಮತ್ತು ಬಹಳಷ್ಟು ಹೆಸರುವಾಸಿಯಾಗಿದ್ದರು . ಪದ್ಮನಾಭ ಎಂದರೆ ಎಲ್ಲರಿಗೂ ಪರಿಚಯಸ್ತರಾಗಿ ಹಾಲು ಕೊಟ್ಟು ಹಿಂತಿರುಗಿ ಬರುವಾಗ ಭಟ್ಟರು ಮತ್ತು ಪದ್ಮನಾಭ ಇವರ ಸಂಭಾಷಣೆಯಲ್ಲಿ, ಆಗಲೇ ಪದ್ಮನಾಭರು ಯಕ್ಷಗಾನ ಹಾಡುಗಾರಿಕೆ, ಭಜನಾ ಹಾಡುಗಳನ್ನು ಹಾಡುತ್ತ ತನ್ನನ್ನು ತಾನೇ ಮರೆಯುತ್ತಿದ್ದರು. ಭಜನಾ ಹಾಡಿನಲ್ಲಿ ಬಹಳಷ್ಟು ಆಸಕ್ತಿ ಹೊಂದಿದ್ದ ಪದ್ಮನಾಭರವರು ಶ್ರೀಯುತ ಭಟ್ಟರಲ್ಲಿ, ಭಟ್ರೇ ನಮ ಒಂಜಿ ಭಜನೆ ಗುಂಪು ಮಲ್ಪುಗನೇ ಎಂದು ಕೇಳಿದಾಗ, ಆಯ್ತು ಪದ್ಮನಾಭ ನೀನು ಮುನ್ನಡೆ ಎಂದು ಹೇಳಿ ಹರಸಿದ ದಿನದಿಂದಲೇ ಆರಂಭಗೊಂಡ ಭಜನಾ ಮಂದಿರ ಕೇವಲ 4 ಜನರಿಂದ ಕೂಡಿತ್ತು.
ಅಂಜಾರು ಮಠದ ಮನೆಯ ಪ್ರತೀ ಸದಸ್ಯರ ಪ್ರೀತಿ ವಾತ್ಸಲ್ಯ ಮತ್ತು ಶ್ರೀ ದೇವರ ಅನುಗ್ರಹ ಹಾಗೂ ಹಾರೈಕೆಯೊಂದಿಗೆ,
ಮೊದಲನೆಯ ಹಂತದಲ್ಲಿ ಶ್ರೀಯುತ ಪದ್ಮನಾಭ ನಾಯ್ಕ ಮತ್ತು ದಿವಂಗತ ಜಬ್ಬ ಪೂಜಾರಿಯವರು ತಲಾ 50 ರೂಪಾಯಿಯ ದೇಣಿಗೆಯೊಂದಿಗೆ ದಿವಂಗತ ಜೋನ್ ಮೇಸ್ತ್ರಿ ಯವರೊಂದಿಗೆ ಇಂದು ಇರುವ ಅಶ್ವಥ ಮರದ ಕಟ್ಟೆಯನ್ನು ಕಟ್ಟಿ ದೀಪವನ್ನು ಇಟ್ಟು ಭಜನೆಯ ಆರಂಭ.
ಎರಡನೇ ಹಂತದಲ್ಲಿ ಭಜನೆಯನ್ನು ದಿವಂಗತ ವೆಂಕಪ್ಪ ಮಾಸ್ಟರ್, ದಿವಂಗತ ಕರುಣಾಕರ ಶೆಟ್ಟಿ, ದಿವಂಗತ ಕುಟ್ಟಿ ಶೇರಿಗಾರ್. ಯಾದವ ಮತ್ತು ಊರಿನ ಹಲವಾರು ಆಸಕ್ತ ಭಕ್ತರು ಸೇರಿಕೊಂಡು ಭಜನೆಯನ್ನು ಮಾಡಲಾರಂಭಿಸಿದರು. ಬರ ಬರುತ್ತಾ ಅದೇ ಜಾಗದಲ್ಲಿ ಶಕ್ತಿ ತುಂಬಿ ಇಂದು ಅಭಿವೃದ್ಧಿಯ ಹಂತ ತಲುಪಿದೆ. ಶ್ರೀಯುತ ತಂಗಣ್ಣ ಸುಧಾಕರ ಶೆಟ್ಟಿ ಇವರಿಗೆ ಯಕ್ಷಗಾನದ ಅರಿವು ಇದ್ದಿದ್ದರಿಂದ ಭಜನೆ ಮಾಡುವವರಿಗೆ ಹೆಜ್ಜೆಯನ್ನು ಕಲಿಸಿ ಕೊಟ್ಟ ಸಂಧರ್ಭವನ್ನು ಶ್ರೀ ಪದ್ಮನಾಭ ರವರು ನೆನಪಿಸಿಕೊಳ್ಳುತ್ತಾರೆ.
ಸುಮಾರು 25 ನೇ ವರುಷದ ಸಂಭ್ರಮಾಚರಣೆಯ ಸಮಯದಲ್ಲಿ ಉದ್ದೇಶಪೂರ್ವಕವಾಗಿ ಮೇಲಿನ ಜನರನ್ನು ಬದಿಗಿಟ್ಟು ಭಜನಾ ಮಂಗಲೋತ್ಸವ ಮಾಡಿ ವಿಕೃತಿ ಮೆರೆದ ವಿಷಯಗಳು ಕೂಡ ನಡೆದುಹೋಗಿತ್ತು, ಇನ್ನು ಮುಂದಿನ ದಿನಗಳಲ್ಲಿ ಇಂತಹ ಸಂಧರ್ಭಗಳು ನಡೆಯದಂತೆ ನೋಡಿಕೊಳ್ಳುವುದು ಪ್ರತೀ ಸದಸ್ಯರ ಜವಾಬ್ದಾರಿ ಕೂಡ ಆಗಿರುತ್ತದೆ ಮತ್ತು ಸತ್ಯ ಮರೆ ಮಾಚುವ ಜನರ ಬಗ್ಗೆ ಜಾಗ್ರತಗೊಳ್ಳಬೇಕು.
ಸುಮಾರು 20 ವರುಷಗಳ ಹಿಂದೆ, ಮೂರನೇಯ ಹಂತದಲ್ಲಿ ಭಜನಾ ಮಂಡಳಿಯ ಆರ್ಥಿಕ ಸ್ಥಿತಿ ಸರಿಯಾಗಿ ಇಲ್ಲದೇ ಹೋದರೂ ಶ್ರೀ ದುರ್ಗಾ ಪರಮೇಶ್ವರಿ ಹತ್ತರ ಕಟ್ಟೆಯ ಯುವಕರು ಮತ್ತು ಅಪಚರ ಬೆಟ್ಟುವಿನ ಕೆಲವು ಯುವಕರು, ಮುಖ್ಯವಾಗಿ ಶ್ರೀ ಜಗದೀಶ್ ನಾಯ್ಕ, ಶ್ರೀ ದಿನೇಶ ಪೂಜಾರಿ, ಶ್ರೀ ವೆಂಕಟೇಶ್ ನಾಯ್ಕ, ಸುರೇಂದ್ರ ಪೂಜಾರಿ, ಶೈಲೇಶ್, ದೇವೇಂದ್ರ ನಾಯ್ಕ ಇವರೆಲ್ಲರೂ ಮುಂದಾಳತ್ವ ಮಾಡುತ್ತ, ಎಲ್ಲಾ ಭಜನಾ ಕಾರ್ಯಕ್ರಮ ದಲ್ಲಿ ಶ್ರೀ ರಾಘವೇಂದ್ರ ನಾಯ್ಕ ಬಾವಿಕಟ್ಟೆ, ಶ್ರೀ ಮಾಧವ ನಾಯ್ಕ ಬಾವಿಕಟ್ಟೆ ಭಾಗಿಯಾಗುತ್ತ. ಕೋಣಂದೂರು, ಕಾರ್ಕಳ, ಹತ್ತು ಹಲವು ಭಜನಾ ಮಂದಿರಗಳಿಗೆ ತಮ್ಮಿಂದ ಸಾಧ್ಯವಾಗುವಷ್ಟು ದೇಣಿಗೆ ನೀಡುತ್ತಾ ನಡೆದು ಬಂದ ದಾರಿ ಮರೆಯಲಾಗದ್ದು. ಇದರಲ್ಲಿ ದಿನೇಶ ರವರ ಟೆಂಪೋ ಬಹಳಷ್ಟು ಉಪಯೋಗವಾದ ನೆನಪುಗಳು. ಮತ್ತು ಅತೀ ಹೆಚ್ಚು ಪರಿಶ್ರಮ ಪಟ್ಟ ದಿನೇಶ್ ಪೂಜಾರಿ ಮತ್ತು ವೆಂಕಟೇಶ ನಾಯ್ಕ ಇವರನ್ನೂ ಮರೆಯುವಂತಿಲ್ಲ. ಪಾಠಲಿ ಬೆಟ್ಟು ಶ್ಯಾಮಲಾ ಹೋಟೆಲ್ ಮಾಲಕರು, ಹಾಗೂ ಊರಿನ ಪ್ರತೀ ಯೊಬ್ಬರೂ ತನ್ನದೇ ಕೊಡುಗೆಯನ್ನು ಈ ಭಜನಾ ಮಂಡಳಿಗೆ ಕೊಡುತ್ತಲೇ ಬಂದಿರುತ್ತಾರೆ.
ಯಾವುದೇ ಸಂಘ ನಿರಂತರವಾಗಿ ನಡೆಯಬೇಕೆಂದರೆ ಆ ಸಂಘಕ್ಕೆ ಶ್ರಮಿಸುವ ಸಜ್ಜನರ ಅಗತ್ಯ ಬಹಳಷ್ಟು ಇರುತ್ತದೆ. ಸಾಮಾಜಿಕ ಸಂಘ, ಭಜನಾ ಸಂಘ, ಜಾತಿ ಸಂಘಗಳು ಕೆಲವೇ ಕೆಲವು ಜನರ ಹಿಡಿತಕ್ಕೆ ಒಳಗಾದರೆ ಆ ಸಂಘದ ಅಭಿವೃದ್ಧಿಯು ಕುಂಟಿತಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಸಂಘವು ಚೆನ್ನಾಗಿ ಬೆಳೆಯಬೇಕಿದ್ದರೆ ಎಲ್ಲರೂ ಸ್ವಚ್ಛ ಮನಸ್ಸಿನಿಂದ ಸೇರಿದಾಗ ಮಾತ್ರ ಸಾಧ್ಯ. ಅಂಜಾರು ಲಕ್ಷ್ಮಿ ನಾರಾಯಣ ಭಜನ ಮಂಡಳಿ ಶ್ರೀ ದೇವರ ಕೃಪೆಯಿಂದ ಬಹಳಷ್ಟು ಎತ್ತರಕ್ಕೆ ಬೆಳೆದಿದೆ ಇಲ್ಲಿ ನಡೆಯುವ ಸಂಕ್ರಮಣ ಭಜನೆಯು ಪ್ರತಿ ಮನವನ್ನು ಒಟ್ಟುಗೂಡಿಸುತ್ತಿದೆ. ಯುವಕ ಯುವತಿಯರು ಭಜನೆಯಲ್ಲಿ ಪಾಲ್ಗೊಳ್ಳುತ್ತಾ ಭಕ್ತಪರಶರಾಗಿ ಶ್ರೀ ದೇವರಿಂದ ಆಶೀರ್ವಾದ ಪಡೆದುಕೊಳ್ಳುತ್ತಾ ಉನ್ನತಿಯನ್ನು ಹೊಂದಿದ್ದಾರೆ. ಯಾವುದೇ ಕೆಲಸವೂ ಅಪೇಕ್ಷೆಗಳನ್ನು ಇಟ್ಟುಕೊಳ್ಳದೆ ಆರಂಭಿಸಿದ್ದೆ ಎಂದಾದಲ್ಲಿ ಅದರ ಭವಿಷ್ಯವು ಉತ್ತಮವಾಗಿರುತ್ತದೆ ಎನ್ನುವುದಕ್ಕೆ ನಮ್ಮ ಭಜನಾ ಮಂಡಳಿ ಸಾಕ್ಷಿ.
ಈ ಒಂದು ಭಜನೆಯಿಂದ ಅದೆಷ್ಟು ಜನರು ಹೊಸ ಭಜನೆಯನ್ನು ಕಲಿಯುತ್ತಾ ಮುಂಬರುವ ಪೀಳಿಗೆಗೆ ಉತ್ತಮ ಉದಾಹರಣೆಯಾಗಿ ಹೊರಹೊಮ್ಮಿದ್ದಾರೆ. ನಾನು ಚಿಕ್ಕನಗಿರೋ ಕಾಲದಲ್ಲಿ ಬಾರಯ್ಯ ಬಾರೋ , ಅಂಬಿಗ ನಾ ನಿನ್ನ ನಂಬಿದೆ, ಮೆಲ್ಲ ಮೆಲ್ಲನೆ ಬಂದನೆ, ಯಾರಿಗೆ ಯಾರುಂಟು ಎರವಿನ ಸಂಸಾರ, ಇನ್ನಿತರ ಅನೇಕ ಪುರಂದರ ದಾಸರ ಹಾಡುಗಳನ್ನು ಶ್ರದ್ಧಾ ಭಕ್ತಿಯಿಂದ ತಂದೆ ಪದ್ಮನಾಭ ನಾಯಕರು ತನ್ನ ಕಂಠದಿಂದ ಹೇಳುತ್ತಾ ಭಜನೆಯು ರಾಗ ತಾಳದಿಂದ ಮೆರೆದು ಒಂದೊಂದು ಕುಣಿತವು 30 ರಿಂದ 45 ನಿಮಿಷದವರೆಗೂ ನಡೆದ ಉದಾರಣೆಗಳು ಬಹಳಷ್ಟಿದೆ. ಒಂದರ ನಂತರ ಒಂದರಂತೆ ಸುಶ್ರಾವ್ಯ ಕಂಠದಿಂದ ಭಜನೆಯನ್ನು ಹಾಡುತ್ತಾ ಜೈ ವಿಠ್ಠಲ ಹರಿ ವಿಠಲ ಎಂಬುದರೊಂದಿಗೆ ಕೊನೆಗೊಳ್ಳುತ್ತಾ ಎಲ್ಲರೂ ಬಹಳಷ್ಟು ಶ್ರದ್ಧೆಯಿಂದ ಭಜನೆಯನ್ನು ಮಾಡಿ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಯಾಗಿಸಿ ನಡೆಯುತ್ತಿರುವ ನಮ್ಮೆಲ್ಲಾ ಊರಿನ ಹಿರಿಯರು ಕಿರಿಯರು ಮರಿ ಮಕ್ಕಳು.
ಭಜನಾ ಮಂಗಳೋತ್ಸವ ಕಾರ್ಯಕ್ರಮದಲ್ಲಿ ಊರಿನ ಹಿರಿಯರು ಕಿರಿಯರು ಪಾಲ್ಗೊಳ್ಳುತ್ತಾ ಹಬ್ಬವನ್ನೇ ಆಚರಿಸಿದಂತೆ ಮತ್ತು ಊರೆಲ್ಲಾ ಕೇಳುವ ಶಬ್ದ ಉಪಕರಣಗಳನ್ನು ಅಳವಡಿಸಿ ಮನೆ ಮನೆಯಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸುತ್ತದೆ. ಭಜನೆ ಮನಗಳನ್ನು ಮನೆಗಳನ್ನು ಒಂದುಗೂಡಿಸುತ್ತದೆ . ಮನಸ್ಸಿನ ಕಲ್ಮಶವನ್ನು ದೂರ ಮಾಡುತ್ತದೆ. ಭಜನೆ ಮಾನಸಿಕ ನೆಮ್ಮದಿಯನ್ನು ನೀಡುತ್ತದೆ. ಭಜನೆ ಬಾಂಧವ್ಯವನ್ನು ಭಾಗ್ಯವನ್ನು ನೀಡುತ್ತದೆ. ಈ ಭಜನಾ ಮಂಡಳಿಯಲ್ಲಿ ಸತ್ಯಕ್ಕೆ ನ್ಯಾಯಕ್ಕೆ ಬೆಲೆ ಇದೆ ಅನ್ಯಾಯಮಾರ್ಗದಲ್ಲಿ ನಡೆದವರಿಗೆ ಶಿಕ್ಷೆಯು ನಿಶ್ಚಿತ ಅನ್ನೋದಕ್ಕೆ ಹಲವು ಉದಾರಣೆಗಳನ್ನು ನಾವು ನೋಡಿರುತ್ತೇವೆ. ಕೆಲವೊಮ್ಮೆ ಸತ್ಯವನ್ನು ಮುಚ್ಚಿ ಹಾಕಲು ಪ್ರಯತ್ನಪಟ್ಟಿದ್ದರೂ ಜಾಗದ ಶಕ್ತಿಯಿಂದ ಪ್ರಯತ್ನವು ಸಫಲಗೊಳ್ಳದೆ ಪೆಟ್ಟು ತಿಂದ ಉದಾರಣೆಗಳು ನಡೆದು ಹೋಗಿರುತ್ತದೆ.
ಈಗ ಪದ್ಮನಾಭನಾಯಕರಿಗೆ ಸುಮಾರು 75 ವರುಷ ತನ್ನ ಜೀವನದಲ್ಲಿ ತನ್ನ ಸಂತೋಷಗಳನ್ನು ಬದಿಗಿಟ್ಟು ಉತ್ತಮ ವ್ಯಕ್ತಿಯಾಗಿ ಬೆಳೆಯಬೇಕೆಂಬ ಹಠಕ್ಕೆ ಒಂದಷ್ಟು ಅಡೆತಡೆಗಳು ಬಂದಿದ್ದರೂ ಸತ್ಯಮಾರ್ಗದಲ್ಲಿ ನಡೆದ ಕೆಲಸಕ್ಕೆ ದೇವನು ಜಯವನ್ನು ಕೊಟ್ಟಿರುತ್ತಾನೆ. ವರ್ಷಂ ಪ್ರತಿ ನಡೆಯುವ ಭಜನಾ ಕಾರ್ಯಕ್ರಮಕ್ಕೆ ಪರವೂರಿನ ಜನರೆಲ್ಲರೂ ಊರಿಗೆ ಆಗಮಿಸಿ ಭಜನಾ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಿಕೊಟ್ಟ ಅದೆಷ್ಟು ಉದಾಹರಣೆಗಳು. ಭಜನೆಯಲ್ಲಿ ಯುವಕರು ಅತಿ ಹೆಚ್ಚು ಆಸಕ್ತಿಯನ್ನು ನೀಡುತ್ತಾ ಮಂಡಳಿಯು ಮುಂದುವರೆಯಲು ಬಹಳಷ್ಟು ದೊಡ್ಡ ಕೊಡುಗೆಯನ್ನು ಕೊಟ್ಟಿರುತ್ತಾರೆ.
ನನಗೆ ತಿಳಿದಂತೆ ಶ್ರೀ ರಾಜರಾಜೇಶ್ವರಿ ಅಮ್ಮನವರ ಸೇವೆಯನ್ನು ಮಾಡುವ ಕಮಲಕ್ಕ ಎಂದೇ ಪ್ರಸಿದ್ಧರಾಗಿದ್ದ ದೇವ ಸ್ವರೂಪಿ ಮತ್ತು ಅವರ ಮಕ್ಕಳಾದ ಶ್ರೀಯುತ ಶಶಿ, ಶ್ರೀ ಕಿರಣ ಮತ್ತು ಮನೆಯವರು ಅಂಜಾರು ಬಾವಿಕಟ್ಟೆಯ ಮನೆಗೂ ಅನಾದಿಕಾಲದಿಂದಲೂ ಎಲ್ಲಿಲ್ಲದ ನಂಟು ಬಾವಿಕಟ್ಟೆಯ ಕಮಲಾ ಬಾಯಿ ಶ್ರೀ ರಾಜರಾಜೇಶ್ವರಿ ಅಮ್ಮನವರ ಆಶೀರ್ವಾದವನ್ನು ಪಡೆದು ಊರಿನ ಧೈರ್ಯವಂತೆ ಮಹಿಳೆಯಾಗಿ ಜೀವಿಸಿದ್ದರು. ಸದಾ ಒಳಿತನ್ನು ಬಯಸುತ್ತಿದ್ದ ಬಾವಿಕಟ್ಟೆ ಮನೆಯ ಇತಿಹಾಸ ಇಂದಿಗೂ ಸತ್ಯದಿಂದ ಕೂಡಿರುತ್ತದೆ. ಕಮಲಾ ಬಾಯಿಯ ಗಂಡ ದಿವಂಗತ ಸುಕ್ಕುಡು ನಾಯಕ ಒಬ್ಬರೇ ಕೆರೆಯನ್ನು ತೋಡಿ ತೋಟಕ್ಕೆ ಬೇಕಾಗುವ ನೀರನ್ನು ದೈವದ ಮೊರೆ ಹೋಗಿ ತೋಡಿದ್ದು ಇಂದಿಗೂ ಬತ್ತದೆ ತುಂಬಿ ಹರಿಯುತ್ತಿದೆ. ಈ ಕೆರೆಯಲ್ಲಿ ನಾಗದೇವರುಗಳ ವಾಸಸ್ಥಾನ ಮತ್ತು ಬ್ರಹ್ಮ ಸ್ಥಾನಗಳ ದೇವಸ್ಥಾನಕ್ಕೆ ನೇರವಾಗಿ ಸಂಬಂಧವಿದ್ದು ಅಲ್ಲಿ ಬಟ್ಟೆ ಬರೆಗಳನ್ನು ಒಗೆದು ಮಲಿನ ಮಾಡುವವರ ಮನೆಯ ಸ್ಥಿತಿಗಳು ಅದೋಗತಿಗೆ ಹೋದ ಉದಾರಣೆಗಳು ನಡೆದುಬಿಟ್ಟಿದೆ.
ಶ್ರೀ ಪದ್ಮನಾಭ, ಶ್ರೀಯುತ ಬಚ್ಚ ಶೆಟ್ಟಿ ಅಂಜಾರು ಇವರ ಬೆಂಬಲ , ವೆಂಕಪ್ಪ ಮಾಸ್ಟರ್, ದಿವಂಗತ ಜಬ್ಬ ಪೂಜಾರಿ, ದಿ.ಜೋನ್ ಮೇಸ್ತ್ರಿ ಇವರೆಲ್ಲರ ಒಂದುಗೂಡುವಿಕೆ ಅಂಜಾರು ಭಜನಾ ಮಂಡಳಿಯು ಮೂಡಿ ಬರಲು ಕಾರಣವಾಯ್ತು. ಪ್ರತೀ ವರುಷದ ಭಜನಾ ಮಂಗಳದ ಸಮಯದಲ್ಲಿ ದಿ. ಸತ್ಯಾನಂದ ಭಟ್ ಮತ್ತು ಶ್ರೀಯುತ ಸೀತಾರಾಮ್ ಭಟ್ ರವರು ಈ ಹಿರಿಯರನ್ನು ನೆನಪಿಸುತ್ತ ಭಜನಾ ಪ್ರಸಾದವನ್ನು ನೀಡುತ್ತಾ ಇದ್ದಿರುವ ವಿಷಯ ಸ್ಮರಣಿಯ. ಮೊದಲ ಭಜನೆಗೆ 50 ರೂಪಾಯಿ ಯ ಕೊಡುಗೆಯಾಗಿ ನೀಡಿರುವ ನೆನಪು ಈಗಲೂ ಸ್ಮರಿಸುತ್ತಾರೆ.
ಸುಮಾರು 20 ವರುಷಗಳಿಂದ ಇತ್ತೀಚೆಗೆ ಹೊಸ ಮುಖ, ಪ್ರತೀ ವರುಷ ಬದಲಾಗುವ ಆಡಳಿತ ಮಂಡಳಿ ತಮ್ಮ ಹಿರಿಯರನ್ನು ನೆನಪಿಸುವ ಕೆಲಸವನ್ನು ಮುಂದಿನ ದಿನಗಳಲ್ಲಿ ಮಾಡಬೇಕು, ಮತ್ತು ಎಲ್ಲಾ ಹಿರಿಯರನ್ನು ಗೌರವಿಸುವ ಕೆಲಸವನ್ನು ಮಾಡಬೇಕು. ಕೆಲವೇ ಕೆಲವು ಜನರು ಮಾಡುವ ಅವಿವೇಕ ವರ್ತನೆ ಮೂಲ ಸಂಗತಿಯನ್ನು ಮುಚ್ಚಿಸಲು ಪ್ರಯತ್ನ ಮಾಡುವ ಸಂಧರ್ಭಗಳಿಗೆ ಅವಕಾಶ ಕೊಡ ಬಾರದು.
ದಿ. ತೊಮ ಪೂಜಾರಿ ಮತ್ತು ಮಕ್ಕಳು, ಶ್ರೀ ಶಶಿಧರ ಜತ್ತನ, ಹಾಗೂ ಸುಧಾಕರ ನಾಯ್ಕ, ವಸಂತ ಶೆಟ್ಟಿ ಬೊಂಬಾಯಿ, ಶಿವರಾಮ ಶೆಟ್ಟಿ ಬೊಂಬಾಯಿ, ಶ್ರೀ ದಿನೇಶ್ ಪೂಜಾರಿ , ಆಳುಗ್ಗೆಲ್ ಮೇಘ ರಾಘವೇಂದ್ರ, ಶ್ರೀ ವಿಶ್ವನಾಥ ನಾಯ್ಕ ನೀರ ಪಲ್ಕೆ, ಆನಂದ ನಾಯ್ಕ ಆಳುಗ್ಗೆಲ್, ರಾಘವೇಂದ್ರ ಬಾವಿಕಟ್ಟೆ, ಯಾದವ, ಸುರೇಂದ್ರ ನಾಯ್ಕ , ಶ್ರೀಯುತ ಸುಧಾಕರ ಶೆಟ್ಟಿ, ಶ್ರೀ ನಿಖಿಲ್ ಶೆಟ್ಟಿ, ಮಡಿವಾಳ ಬೆಟ್ಟುವಿನ ಯುವಕರು, ಪ್ರದೀಪ್ ನಾಯ್ಕ, ಪ್ರೇಮಾನಂದ, ಹಲವಾರು ಯುವಕರು ಭಜನಾ ಮಂದಿರದ ಅಭಿವೃದ್ಧಿಗೆ ತಮ್ಮ ಕಿರು ಕಾಣಿಕೆಯನ್ನು ಕೊಡುತ್ತ ಬಂದಿರುತ್ತಾರೆ. ಪ್ರಸ್ತುತ ಸದಸ್ಯರು ಮತ್ತು ಆಡಳಿತ ಮಂಡಳಿಯ ಪ್ರತೀ ಯುವಕರ ಕೊಡುಗೆಯಿಂದ ಭಜನಾ ಮಂಡಳಿ ಇನ್ನಷ್ಟು ಅಭಿವೃದ್ಧಿಯನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಭಜನಾ ಮಂಡಳಿಯ ಪ್ರತೀ ಸದಸ್ಯರು ಉತ್ತರೋತ್ತರ ಅಭಿವೃದ್ಧಿ ಆಗಲಿ, ಶ್ರೀ ಲಕ್ಷೀ ನಾರಾಯಣ ದೇವರು ಮತ್ತು ಹಿರಿಯರೆಲ್ಲರ ಆಶೀರ್ವಾದ ನಿಮ್ಮ ಮೇಲಿರಲಿ.
ಭಜನಾ ಮಂದಿರಕ್ಕೆ ದಿನಾಲೂ ದೀಪವನ್ನು ಇಟ್ಟು ಶ್ರೀ ದೇವರನ್ನು ಸ್ಮರಿಸುತ್ತ ಆಶೀರ್ವಾದ ಪಡೆಯುತ್ತಿರುವ ನಮ್ಮ ಸೀತಕ್ಕ. ಇವರನ್ನೂ ಪಡೆದ ನಾವೆಲ್ಲರೂ ಧನ್ಯರು. ಹಲವು ಹಿರಿಯರ ಆಶೀರ್ವಾದದ ಭಕ್ತಿಯ ಸ್ಥಳವಾಗಿ ಮಾರ್ಪಟ್ಟ ಭಜನಾ ಮಂಡಳಿ ನಮ್ಮ ಊರಿಗೆ ಕೀರ್ತಿಯನ್ನು ತಂದುಬಿಟ್ಟಿದೆ.
ಒಟ್ಟಾರೆ ಎಲ್ಲಾ ಸಮುದಾಯದ ಜನರನ್ನು ಒಂದು ಸ್ಥಳದಲ್ಲಿ ಸೇರಿಸಿದ ಕೀರ್ತಿ ಈ ಭಜನಾ ಮಂಡಳಿಗೆ ಸಲ್ಲುತ್ತದೆ. ಜಾತಿ ಬೇಧ ಗಳಿಲ್ಲದೆ ಒಂದಾಗಿ ಸೇರಿ ದೇವರನ್ನು ಭಜಿಸುವ ಸ್ಥಳವೇ ಭಜನಾ ಮಂದಿರ. ಪ್ರಸ್ತುತ ಸದಸ್ಯರು ಮತ್ತು ಆಡಳಿತ ಮಂಡಳಿಗೆ ಶುಭವಾಗಲಿ, ಇನ್ನಷ್ಟು ಉನ್ನತಿಯಾಗಲಿ.
ಈ ಮಾಹಿತಿಯನ್ನು ಕೊಡುವ ಉದ್ದೇಶ ಬೇರೇನಿಲ್ಲ, ಇಂದು ನಾವು ಮಾಡುತ್ತಿರುವ ಭಜನೆ ಮುಂದಿನ ಪೀಳಿಗೆಗೂ ನಡೆಯುತ್ತಿರಲಿ ಭಜನಾ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಲಿ, ಭಯ ಭಕ್ತಿಯಿಂದ ಕೂಡಿರಲಿ, ಶುದ್ಧ ಮನಸ್ಸಿನಿಂದ, ಸತ್ಯದಿಂದ , ಧರ್ಮದಿಂದ ನಡೆಯುತ್ತಿರಲಿ. ಅಧರ್ಮದಾರಿಯಲ್ಲಿ ನಡೆಯುವ ಯಾರೇ ಆಗಿರಲಿ ಈ ಪುಣ್ಯ ಸ್ಥಳದಲ್ಲಿ ಮುನ್ನಡೆಯದಂತೆ ಆಗಲಿ ಶ್ರೀ ಲಕ್ಷ್ಮಿನಾರಾಯಣನ ದೇವರು ಸರ್ವರಿಗೂ ರಕ್ಷಣೆ ಮಾಡುತ್ತಿರಲಿ.
ಇಲ್ಲಿ ಸರ್ವ ಸದಸ್ಯರೂ ಮತ್ತು ಊರಿನ ಎಲ್ಲರೂ ತಮ್ಮೆಲ್ಲರ ತನು ಮನ ಧನ ಸಹಾಯ ಮಾಡುತ್ತ ಭಜನಾ ಮಂದಿರವನ್ನು ಬೆಳೆಸಿ ಉಳಿಸಿಕೊಂಡು ಬಂದಿರುತ್ತಿರಿ, ಹೆಸರುಗಳು ತಪ್ಪಿ ಹೋಗಿದ್ದಲ್ಲಿ ಕ್ಷಮೆ ಇರಲಿ,
ಯಾವಾಗಲೂ ಸತ್ಯಮಾರ್ಗದಿಂದ ನಡೆ, ಸತ್ಯವನ್ನು ಬಿಟ್ಟು, ಅಧರ್ಮ ಮಾಡಬೇಡ, ಗುರು ಹಿರಿಯರನ್ನು ತೆಗಳಿದರೆ ಯಾವತ್ತೂ ಒಳಿತಾಗದು ಅನ್ನುವ ಮಾತನ್ನು ಗಟ್ಟಿಯಾಗಿ ಹೇಳಿ ನೆನಪಿಸುತ್ತಿರುವ ತಂದೆಯನ್ನು ಪಡೆದ ನಾವು ಪುಣ್ಯವಂತರು.
ಸರ್ವರಿಗೂ ಶುಭವಾಗಲಿ.
✍️ಮಾಧವ. ಕೆ. ಅಂಜಾರು.
Comments
Post a Comment