ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ
ಭಾರತೀಯ ರಾಯಭಾರಿ ಕುವೈಟ್ ನಲ್ಲಿ, ಹುಲಿಕುಣಿತ ತುಳು ಸಂಸ್ಕೃತಿಯ ಭಾಗವಾಗಿರುವ ಹುಲಿಕುಣಿತ ವಿದೇಶದಲ್ಲಿ ರಾರಾಜಿಸುತ್ತ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ, ತುಳುವರು ಪ್ರಪಂಚದ ಯಾವ ಮೂಲೆಯಲ್ಲಿದ್ದರೂ ತಮ್ಮ ಸಂಪ್ರದಾಯವನ್ನು ಬಿಟ್ಟು ಕೊಡುವುದಿಲ್ಲ, ನಮಸ್ಕಾರ ಊರುಡು ಒಲ್ಪ ದಿಂದ ಆರಂಭ ಆಗುವ ಸಂಭಾಷಣೆ, ಹುಲಿ ಕುಣಿತದಂತಹ ಅನೇಕ ಸಂಪ್ರದಾಯವನ್ನು ಬಹಳಷ್ಟು ಶೃದ್ದೆಯಿಂದ ಮತ್ತು ಶಿಸ್ತಿನಿಂದ ಮಾಡಿ ತುಳುವರ ಸಂಸ್ಕೃತಿಗೆ ಇನ್ನಷ್ಟು ಮೆರುಗು ಕೊಡುವ ತುಳು ಬಿಲ್ಲವ ಸಂಘದ ಸದಸ್ಯರ ತಂಡ ಅನೇಕ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಡಿರುತ್ತಾರೆ, ಒಟ್ಟಾರೆ ಹೆಚ್ಚಿನ ಕಲಾವಿದರು ಕುವೈಟ್ನಲ್ಲಿ ವಾಸವಾಗಿದ್ದಾರೆ ಹೇಳಬಹುದು.
ನೃತ್ಯ, ನಾಟಕ, ಪ್ರಹಸನ, ಹುಲಿವೇಷ, ಕರ್ನಾಟ/ ಭಾರತದ ಅನೇಕ ಇತಿಹಾಸದ ಸನ್ನಿವೇಶವನ್ನು ವೇದಿಕೆಯಲ್ಲಿ ನೋಡುವ ಅವಕಾಶವನ್ನು ಅನೇಕ ಸಂಘ ಸಂಸ್ಥೆಗಳು ನಿರಂತರ ಮಾಡುತ್ತಿರುವುದು ನಮಗೆಲ್ಲರಿಗೂ ಸಂತೋಷವನ್ನೂ ತಂದು ಕೊಡುತ್ತಲಿದೆ. ನಾವು ಚಿಕ್ಕವರಿದ್ದಾಗ ನಡೆಯುತ್ತಿದ ಹುಲಿ ಕುಣಿತಕ್ಕೊ, ಇಂದಿನ ದಿನದಲ್ಲಿ ನಡೆಯುವ ಕುಣಿತಕ್ಕೂ ಬಹಳಷ್ಟು ಬದಲಾವಣೆ ಕಂಡಿರುತ್ತೇನೆ.
ವೇಷಭೂಷಣೆ ಅತ್ಯಂತ ಸುಂದರ, ಹಾಕುವ ಹೆಜ್ಜೆ, ಎಲ್ಲವೂ ಬಹಳಷ್ಟು ಚೆನ್ನಾಗಿ ಮೂಡಿ ಬರುತ್ತದೆ. ಎಲ್ಲಾ ಕಲಾವಿದರಿಗೂ ಇನ್ನಷ್ಟು ಹೆಚ್ಚಿನ ಯಶಸ್ಸು ಮತ್ತು ಆಶೀರ್ವಾದ ಸಿಗುತ್ತಿರಲಿ, ನಮ್ಮ ಸಂಸ್ಕೃತಿ ಇನ್ನಷ್ಟು ಬೆಳಗಲಿ.
ನನ್ನೆಲ್ಲ ಆತ್ಮೀಯ ಕಲಾವಿದರಿಗೆ ಶ್ರೀ ದೇವರುಗಳು ಸದಾ ಕಾಪಾಡಲಿ.
✍️ಮಾಧವ. ಕೆ. ಅಂಜಾರು
Comments
Post a Comment