( ಲೇಖನ -122) ಭೂ - ಕೈಲಾಸ

(ಲೇಖನ -122) ಭೂ - ಕೈಲಾಸ, ಕಲಾ ವೈಭವ - ಕುವೈತ್ ಕನ್ನಡ ಕೂಟದಿಂದ ಆಯೋಜಿಸಲ್ಪಟ್ಟ  ದಾಸೋತ್ಸವ ಶೇಕಡಾ ನೂರರಷ್ಟು ಮನ ತಣಿಸಿತು, ಕಲಾ ಮಾತೆಯರು , ಕಲಾಗಾರರು ರೋಮಾಂಚನಗೊಳಿಸಿದ ದೃಶ್ಯಗಳ ಹಿಂದೆ ಸದ್ದಿಲ್ಲದೇ ಶ್ರಮವಹಿಸಿದ "ಶ್ರೀ ಸತೀಶ್ ಆಚಾರ್ಯ "ಇವರ ನಿರ್ದೇಶನ ಪ್ರೇಕ್ಷಕವರ್ಗದ ಹುಬ್ಬೆರಿಸಿತ್ತು,  ಭೂ ಕೈಲಾಸದ ಪ್ರತಿಯೊಂದು ಭಾಗ ಚಪ್ಪಾಳೆಯೊಂದಿಗೆ ಮುಂದುವರಿಯುತಿತ್ತು. ಆರಂಭದಿಂದ ಕೊನೆಯವರೆಗೂ ಅಚ್ಚುಕಟ್ಟಾಗಿ ನಡೆದ ಕಾರ್ಯಕ್ರಮ ಚಿಣ್ಣರಿಂದ ಹಿರಿಯರವರೆಗೂ ಬಹಳಷ್ಟು ಸ್ಪಷ್ಟ ಮತ್ತು ಸಂತಸದ ವಾತಾವರಣದಿಂದ ಕೂಡಿತ್ತು.



       ರಾಮಾಯಣ, ಮಹಾಭಾರತದ ತುಣುಕುಗಳೊಂದಿಗೆ,ಭಕ್ತಿ ಮತ್ತು ರಸದೌತಣದ ಹಬ್ಬ ಕುವೈಟ್ ಕನ್ನಡ ಕೂಟದ ಮೆರುಗನ್ನು ಇನ್ನಷ್ಟು ಹೆಚ್ಚುಗೊಳಿಸಿತ್ತು. ಬಣ್ಣ ಬಣ್ಣದ ಉಡುಗೆ ತೊಡುಗೆ, ಪರಸ್ಪರರ ನಗು ಮುಖದ ಸಂಧರ್ಭಗಳೊಂದಿಗೆ ಕಾರ್ಯಕ್ರಮ ತೆರೆಕಂಡಿತು. ಇಲ್ಲಿ ಆಡಳಿತ ಮಂಡಳಿ, ಸರ್ವ ಸದಸ್ಯರ ನಿಸ್ವಾರ್ಥ ಸೇವೆ ಕನ್ನಡ ಕೂಟದ ಗೌರವ ದ್ವಿಗುಣಗೊಳಿಸುತ್ತಲೇ ಇದೆ. ಪ್ರತಿಯೊಬ್ಬರಲ್ಲೂ ಕಲೆಎಂಬುದಿದೆ ಹಾಗಾಗಿ ಪ್ರತೀ ಸದಸ್ಯರು ಮತ್ತು ಅವರ ಮಕ್ಕಳೂ ಒಂದಲ್ಲ ಒಂದು ರೀತಿಯಲ್ಲಿ ಭಾಗವಹಿಸಿ ಕಲೆಯನ್ನು ಉಳಿಸಿ ಬೆಳೆಸಲು ಸಹಾಯವಾಗುತ್ತಿದ್ದಾರೆ. ಭಜನೆ, ನಿರೂಪಣೆ, ಸಾತ್ವಿಕ ಆಹಾರ ಎಲ್ಲವೂ ಅಚ್ಚುಕಟ್ಟಾಗಿ ನಡೆದು ಕೂಟದ ಶಿಸ್ತನ್ನು ತೋರಿಸುತಿತ್ತು.



        ಬಾಲ್ಯದ ಸಮಯದಲ್ಲಿ ಕೇಳುತಿದ್ದ ಹರಿಕಥೆಯನ್ನು ವಿಶೇಷ ರೀತಿಯಲ್ಲಿ ಪ್ರಸ್ತುತ ಪಡಿಸಿ, ಹರಿಕಥೆಯನ್ನು ಕಣ್ಣೆದುರಿಗೆ ತಂದು ತೋರಿಸಿದ ಅದ್ಭುತ ಕ್ಷಣಗಳು ಇವಾಗಲೂ ಕಣ್ಮುಂದೆ ಇದೆ, ಮತ್ತು ಮರೆಯಲಾಗದ ಸಂಧರ್ಭ ಕೂಡ. ಒಬ್ಬ ನಿರ್ದೇಶಕನ ಆಲೋಚನೆ, ಅದಕ್ಕೆ ಬೇಕಾಗುವ ಪರಿಕಲ್ಪನೆ, ಸಮಯ, ಶ್ರಮ ಎಲ್ಲವನ್ನೂ ನಿಯತ್ತಿನಿಂದ ಮಾಡಿದ ಪ್ರತಿಫಲ ಪ್ರೇಕ್ಷಕರನ್ನು ಎದ್ದು ನಿಲ್ಲುವಂತೆ ಮಾಡಿತು. ಭಾಗವಹಿಸಿದ ಪ್ರತೀ ಸದಸ್ಯರು ತಮ್ಮ ಸಂಪೂರ್ಣ ಶಕ್ತಿಯನ್ನು ಉಪಯೋಗಿಸಿ ಕಾರ್ಯಕ್ರಮವನ್ನು ಜಯವಾಗಿಸಿದ್ದಾರೆ. 



       ರಕ್ತೇಶ್ವರಿ ಯ ನರ್ತನ, ಶಿವ ಪಾರ್ವತಿ, ಮಂಡೋಧರಿ ರಾವಣ ರ ಮುಖ್ಯ ಪಾತ್ರ, ನಾರದ ಮುನಿಯ ನಡೆ, ಮಾಯೆಯ ಚಾಣಕ್ಷತೆ ಭೂ ಕೈಲಾಸವನ್ನು ಶೃಷ್ಟಿಸಿದ ರೀತಿ ಇದೆಲ್ಲವೂ ಪ್ರತೀ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದಂತೆ ಮಾಡಿತು. ಗೋಕರ್ಣ ಕ್ಷೇತ್ರದ ಶಿವ ಲಿಂಗ ಸಾಕ್ಷಾತ್ ಶಿವ ದೇವರ ನೆಲೆಎಂಬುದನ್ನು ಇನ್ನಷ್ಟು ಮನವರಿಕೆ ಮಾಡಿಸಿದ ಎಲ್ಲಾ ಕಲಾಗಾರರಿಗೆ ಮತ್ತು ನಿರ್ದೇಶಕರಿಗೆ ಮತ್ತೊಮ್ಮೆ ಅಭಿನಂದನೆಗಳು. 



      ಭಕ್ತಿ ಪರವಶನಾಗಿಸಿದ ಭಜನಾ ಕಾರ್ಯಕ್ರಮ, ಸುಮಧುರ ಕಂಠದ ಪ್ರತೀ ಗಾಯಕರು ಹಾಗೂ ಹೊಸ ಭಜನೆಗೆ ಸಾಹಿತ್ಯ ನೀಡಿದ ಶ್ರೀ ತಾರೇಂದ್ರ ಶೆಟ್ಟಿಗಾರ್, ಹಾರ್ಮೋನಿಯಂ ಮತ್ತು ಉತ್ತಮ ನಿರ್ದೇಶಕ ಶ್ರೀ ಸುರೇಶ ಸಾಲ್ಯಾನ್ ಇವರ ಸಹಾಯದೊಂದಿಗೆ ಪ್ರದರ್ಶನಗೊಂಡಿತು.




          ಕನ್ನಡ ಮಣ್ಣಿನ ಕಂಪನು ಸೂಸುವ ಕುವೈಟ್ ಕನ್ನಡ ಕೂಟ, ಕನ್ನಡಾಂಬೆಯ ಆಶೀರ್ವಾದವನ್ನು ಇನ್ನಷ್ಟು ಪಡೆಯಲಿ. ಎಲ್ಲಾದರೂ ಇರು ಎಂತಾದರು ಇರು ಎಂದೆದಿಗೂ ನೀ ಕನ್ನಡವಾಗಿರು, ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎಂಬಂತೆ ನಡೆಯುತ್ತಿರುವ, ಕುವೈಟ್ ಕನ್ನಡ ಕೂಟಕ್ಕೆ ಜಯವಾಗುತ್ತಲೆ ಇರಲಿ.

          ✍🏿ಮಾಧವ. ಕೆ. ಅಂಜಾರು 

        

          

Comments

Post a Comment

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ