(ಲೇಖನ -52)ಅಪ್ಪಾ...... ನೀನು ಹಾಕಿರುವ ಬಟ್ಟೆ ನನ್ನ ಗೌರವಕ್ಕೆ ಧಕ್ಕೆ ತರುತ್ತದೆ, ನೀನು ನನ್ನ ಜೊತೆಯಲ್ಲಿರಬೇಡ, ನಿನಗಾಗಿ ಅನಾಥಶ್ರಮವಿದೆ
ಅಪ್ಪಾ...... ನೀನು ಹಾಕಿರುವ ಬಟ್ಟೆ ನನ್ನ ಗೌರವಕ್ಕೆ ಧಕ್ಕೆ ತರುತ್ತದೆ, ನೀನು ನನ್ನ ಜೊತೆಯಲ್ಲಿರಬೇಡ, ನಿನಗಾಗಿ ಅನಾಥಶ್ರಮವಿದೆ.ಹೌದು ಈ ಮಾತು ಕೇಳಿದಾಗ ಹೃದಯ ದಂಗಾಗುತ್ತದೆ, ಮನಸು ಕುಗ್ಗಿಬಿಡುತ್ತದೆ, ಮಕ್ಕಳೇ ಬೇಡವೆನಿಸುತ್ತದೆ. ಈ ಲೋಕದಲ್ಲಿ ಇಂತಹ ಘಟನೆಗಳನ್ನು ಅದೆಷ್ಟು ತಂದೆಯಂದಿರು ಅನುಭವಿಸುತ್ತಿದ್ದಾರೆ ಅಲ್ಲವೇ! ತನ್ನ ಮಕ್ಕಳಿಗಾಗಿ ಸರ್ವಸ್ವವನ್ನೇ ತ್ಯಾಗ ಮಾಡಿ, ತಾನು ತಿನ್ನದೆ ತನ್ನ ಮಕ್ಕಳಿಗಾಗಿ, ಸಂಸಾರಕ್ಕಾಗಿ ಜೀವನ ಮಾಡುವ ಜೀವ ಎಂದರೆ ಅಪ್ಪ, ಅಪ್ಪನೆಂದರೆ ಶಕ್ತಿ, ಅಪ್ಪನೆಂದರೆ ಹುಮ್ಮಸ್ಸು, ಅಪ್ಪನೆಂದರೆ ಧೈರ್ಯ, ಅಪ್ಪನೆಂದರೆ ಮೌಲ್ಯ, ಅಪ್ಪನೆಂದರೆ ಪ್ರಪಂಚ, ಅಪ್ಪನೆಂದರೆ ಸರ್ವಸ್ವ. ಹುಟ್ಟಿರುವ ಮಕ್ಕಳಿಗೆ ಅಪ್ಪನಿಲ್ಲದೇ ಇದ್ದರೆ ಅವರ ಜೀವನ ಒಂದಲ್ಲ ಒಂದು ರೀತಿಯಲ್ಲಿ ಬಹಳಷ್ಟು ಕಷ್ಟಪಟ್ಟು ಬದುಕಿರುತ್ತಾರೆ. ಅಪ್ಪನಿದ್ದರೆ ಏನೆಲ್ಲಾ ಮಾಡುತಿದ್ದೆ ಎಂಬ ಕನಸನ್ನು ಕಾಣುತ್ತ ತನ್ನ ಕಣ್ಣಲ್ಲಿ ನೀರು ಸುರಿಸುವ ಮಕ್ಕಳನ್ನು ನಾವುಗಳು ನೋಡಿರಬಹುದು. ಹಾಗೆಯೇ ಮಕ್ಕಳು ದೊಡ್ಡವರಾದ ಮೇಲೆ ಅಪ್ಪನ ಮೇಲೆ ಎಗರಾಡಿ ಅಪ್ಪನ ಕಣ್ಣಲ್ಲಿ ನೀರು ಬರುವಂತೆ ಮಾಡುವ ಮಕ್ಕಳು. ಅಪ್ಪಾಜಿ ನನಗೆ, ಸೈಕಲ್ ಬೇಕು, ಅಪ್ಪಾಜಿ ನನಗೆ ಕಾರು ಬೇಕು, ನನಗೆ ಆಟವಾಡುವ ವಸ್ತುಗಳು ಬೇಕು, ನನಗೆ ಹೊರಗಡೆ ಸುತ್ತಾಡಲು ಕರೆದುಕೊಂಡು ಹೋಗು, ಹೆಗಲ ಮೇಲೆ ಕುಳ್ಳಿರಿಸು, ಅಪ್ಪ ನ...