Posts

Showing posts from 2018

ನಿಮ್ಮ ಸಿಟ್ಟು

ನಿಮ್ಮ ಸಿಟ್ಟು ಮೂಗಿನ ತುದಿಯಲ್ಲಿದ್ದರೂ ಸಂತೋಷದ ಕ್ಷಣದಲ್ಲಿ ವ್ಯಕ್ತಪಡಿಸಬೇಡಿ ...! ನಿಮ್ಮ ಸಂಬಂಧಿ ನಿಮಗೆ ಗೌರವಿಸದಿದ್ದರೂ ಸಂಬಂಧವೇ ಬೇಡವೆಂದು ದೂರ ಸರಿಯಬೇಡಿ ...! ನಿಮ್ಮ ಮನಸ್ಸು ತುಂಬಾ ನೊಂದಿದ್ದರೂ ಮತ್ತೊಬ್ಬರ ಎದುರು ಕಣ್ಣೀರು ಹರಿಸಲೇ ಬೇಡಿ ...! ಸಂತೋಷ , ಸಂಬಂಧ ಮನಸ್ಸು , ಪ್ರೀತಿ ನಿಮ್ಮಲ್ಲಿ ಭದ್ರವಾಗಿರಿಸಿ ಜೀವನವೆಂಬುದೇ , ಹಾಗೇ ..!               -ಮಾಧವ ಅಂಜಾರು

ತುತ್ತು ಅನ್ನದ ಬೆಲೆ

ತುತ್ತು ಅನ್ನದ ಬೆಲೆ ಬಡವನಿಗೆ ಗೊತ್ತು , ಅನ್ನದಾತನಿಗೆ, ಬರದಿರಲಿ ಆಪತ್ತು  ಅದೆಷ್ಟೋ ಜನರಿಗೆ ದಿನಕ್ಕಿಲ್ಲ ಒಂದು ತುತ್ತು , ಆಹಾರವನ್ನು ಚೆಲ್ಲಿ ತಂದುಕೊಳ್ಳಬೇಡಿ ಕುತ್ತು ... ?                         

ಹಲೋ ಚೆನ್ನಾಗಿದ್ದೀರಾ

ಹಲೋ ಚೆನ್ನಾಗಿದ್ದೀರಾ ಅಂತ ಕೇಳ್ದೆ ನಗ್ತಾನೇ ಹೌದು ಚೆನ್ನಾಗೇ ಇದ್ದೀನಿ ಅಂತ ಹೇಳಿದ್ಲು ನಗ್ತಾನೇ ನೀವು ಚೆಲುವಾಗಿದ್ದೀರಾ ಅಂತ ಹೇಳ್ದೆ ಮೆಲ್ಲನೇ ನಾನೇ ತ್ರಿಪುರ ಸುಂದರಿ  ಅಂತಾ ... ಹೇಳಿ ಬಿಟ್ಟಳು ತಟ್ಟನೆ ..! ನಾನ್ಯಾಕೆ ಸುಮ್ಮನಿರಬೇಕು - ನೀನು ಸುಂದರಿಯಂತು ಸರಿ ನಿನ್ನ ಆತ್ಮ ಸೌಂದರ್ಯ ಇದ್ದರೆ ಬಾಹ್ಯ ಸೌಂದರ್ಯಕ್ಕೆ ಬೆಲೆ ಮರಿ , (ತೆಪ್ಪಗಾದಳು) -                       -ಮಾಧವಂಜಾರ್                    

ವ್ಯಾಪಾರ

ವ್ಯಾಪಾರ ಸಂತೆಯಾಗಿದೆ..? ಶಿಕ್ಷಣ ಸಂಸ್ಥೆಗಳು , ದುಷ್ಟರ ಗೂಡಾಗುತ್ತಿದೆ..? ಆರಕ್ಷಕರ ಠಾಣೆಗಳು, ಅನ್ಯಾಯದ ಮನೆಯಾಗಿದೆ ..? ನ್ಯಾಯದ ವ್ಯವಸ್ಥೆಗಳು ಲೂಟಿಕೋರರರ ಅಡ್ಡೆಯಾಗಿದೆ ...? ಭಕ್ತಿ ಮಾಡುವ ಸ್ಥಳಗಳು .. ಯಮಧೂತರ ಜಾಗವಾಗಿದೆ..? ಆಸ್ಪತ್ರೆ , ಅರೋಗ್ಯ ಕೇಂದ್ರಗಳು ಧರ್ಮಕ್ಕೆ ಸೀಮಿತವಾಗಿದೆ ..? ರಾಜಕೀಯ ಪಕ್ಷಗಳು .. ಬದಲಾಗಲಿ , ಒಳಿತಾಗಲಿ ನಮ್ಮೆಲ್ಲಾ ವ್ಯವಸ್ಥೆಗಳು ಪ್ರತಿಯೊಬ್ಬರೂ ಶ್ರಮಿಸಿ ಬರದಿರಲಿ ಅವಸ್ಥೆಗಳು ..            -ಮಾಧವ ಅಂಜಾರು  

ನನಗೆ ಅದು ಗೊತ್ತು,ಇದು ಗೊತ್ತು

ನನಗೆ ಅದು ಗೊತ್ತು,ಇದು ಗೊತ್ತು ಹೇಳುತ್ತಾ, ಮಾಡಿಕೊಳ್ಳೋರು ಸೊತ್ತು ಕೊನೆಗೆ ಜೀವನಕ್ಕೇ ತಂದುಕೊಳ್ಳೋರು ಆಪತ್ತು ಆದರೂ ಬಿಡೋದಿಲ್ಲ ಪೊಳ್ಳು ಗತ್ತು , ಎಲ್ಲಾ ಗೊತ್ತು ಅನ್ನೋರ ಎದುರಿಗೆ, ಹೇಳಬೇಡಿ ನನಗೂ ಗೊತ್ತು ಗೊತ್ತುಮಾಡಿಕೊಳ್ಳಿ ಅವರ ಕಸರತ್ತು ಇಲ್ಲವಾದರೆ ಹಿಡಿಯುವರು ನಿಮ್ಮ ಕತ್ತು ,                      -ಮಾಧವ ಅಂಜಾರು

ತೆರಿಗೆಯ ಹಣ

ಹೆದ್ದಾರಿಯಲ್ಲಿ ಅಲ್ಲಲ್ಲಿ  ಟೋಲು ತೆರಿಗೆಯ ಹಣ ಆಗುತಿಹದೇ ಪೋಲು ಸಾಮಾನ್ಯ ಜನರ ಮೇಲೂ ಪ್ರಾಧಿಕಾರದ ಸವಾಲು ಕೂಡಿದ ಹಣವೆಲ್ಲಾ ಭುಜಬಲಿಗಳ ಪಾಲು ..? ಹೆದ್ದಾರಿಯ ಅಲ್ಲಲ್ಲಿ ತೋಳು ಉಪಯೋಗಿಸಿದ ಮಾಲು ವರುಷದೊಳಗೆ ಹಾಳು ಪ್ರಾಧಿಕಾರಕ್ಕೆ ಸವಾಲು ಕೊಟ್ಟ ಹಣವೆಲ್ಲಾ ಯಾರಿಗೆಲ್ಲಾ ಪಾಲು ?              -ಮಾಧವ ಅಂಜಾರು  

ಇಂಗ್ಲೀಸು ಮಾತಾಡೋ ಕಾಲ

ಇಂಗ್ಲೀಸು ಮಾತಾಡೋ ಕಾಲ ಕನ್ನಡದ ಶಾಲೆ ಎಲ್ಲಿ ? ಮಮ್ಮಿ ದಾಡಿ ಅನ್ನೋ ಕಾಲ ಅಪ್ಪ ಅಮ್ಮನಿಗೆ ಗೌರವ ಎಲ್ಲಿ ? ಇಂಗ್ಲಿಸೆ ಕಲಿಯೋರೆ ಎಲ್ಲಾ ಕನ್ನಡ ಓದೋರು ಎಲ್ಲಿ ? ಕನ್ನಡವೇ ಗೊತ್ತಿಲ್ಲ ಅನ್ನೋ ಕಾಲ ಕನ್ನಡದ ಕಂಪೆಲ್ಲಿ ? ಕನ್ನಡಕ್ಕೆ ಬೆಳಕು ಚೆಲ್ಲಿ ಇಂಗ್ಲೀಸನ್ನು ಸರಿಸಿ ನಿಲ್ಲಿ ಕನ್ನಡವೇ ಬೇಕೆನ್ನೋ ಕಾಲ ಎಲ್ಲರೂ ಒಗ್ಗೂಡಿ ನಿಲ್ಲಿ .. !                -ಮಾಧವ ಅಂಜಾರು

ಬದುಕು ಕಟ್ಟಿಕೊಳ್ಳಲು -

ಬದುಕು ಕಟ್ಟಿಕೊಳ್ಳಲು - ಆಸೆಗಳ ಹಿಂದೆ ಓಡಾಟ , ಆದರೇನು ಹೇಳಲಿ ? ಬದುಕೇ ತಿಳಿಯದವರ ಒಂದಷ್ಟು ಒದ್ದಾಟ .! ಬದುಕನ್ನೇ ಕೆಡವಲು ದಿನವೆಲ್ಲಾ ಕಾಟ ..! ನನಗಾಸೆ, ನಗುತ್ತಾ ಇರಬೇಕು ಮಗುವಂತೆ ಬದುಕಬೇಕು , ಆದರೇನು ಹೇಳಲಿ ..! ನಗುವೇ ತಿಳಿಯದವರು ಹೇಳುವರು ಪಾಠ ನಕ್ಕು ನಲಿ ಜೀವನದಲಿ ತಿಳಿಯದಿದ್ದರೆ ನೋಡಿ ಕಲಿ ...!                -ಮಾಧವ ಅಂಜಾರು

ಬಡವನಿಗೆ -

ಬಡವನಿಗೆ - ಹೊಟ್ಟೆ ತುಂಬಲು ಅನ್ನ ಸಾರು ನೆಮ್ಮದಿಯ ನಿದ್ರೆಗೆ ಬೇಕೊಂದು ಸೂರು ಬಡವನಲ್ಲದವನಿಗೆ - ಹೊಟ್ಟೆ ತುಂಬಲು ಬೇಕು ವಿವಿಧ  ಸಾರು ತಿಂದು ಮಲಗಲು ಅಂತಸ್ತಿನ ಸೂರು , ಸಿರಿವಂತನಿಗೆ ಹೊಟ್ಟೆ ತುಂಬಲು ಹೋಗಬೇಕು ಬಾರು ಓಡಾಡಲು ಬೇಕು ಕಾರು ನಿದ್ದೆಗೆ ಬೇಕಾಗಿಲ್ಲ ಸ್ವಂತ ಸೂರು ...              - ಮಾಧವ ಅಂಜಾರು  

ವಾಟ್ಸಪ್ಪ್ ಡಿಪಿ ಚೆನ್ನಾಗಿದ್ದರೆ

ವಾಟ್ಸಪ್ಪ್ ಡಿಪಿ ಚೆನ್ನಾಗಿದ್ದರೆ ಹೆಂಡತಿಗೆ ಚಿಂತೆ ಹಾಗಂತ , ನನ್ನ ಡಿಪಿ ಯಲ್ಲಿ ಸುಂದರಿಯು ಸೇರಿಕೊಂಡರೆ ಬೈಗುಳದ ಸಂತೆ .. ಪ್ರಿಯಕರನು  ಡಿಪಿ ಬದಲಾಯಿಸುತಿದ್ದರೆ ಪ್ರೇಯಸಿಗೆ ನಿದ್ದೆಯಲೂ ಚಿಂತೆ ಹಾಗಂತ , ಅವನ ಡಿಪಿ ಯಲ್ಲಿ ಪ್ರೇಯಸಿ ಕಾಣಿಸಿಕೊಂಡರೆ ಮೆಸಜುಗಳ ಸಂತೆ ...! ಗೆಳೆಯನು ಡಿಪಿ ಬದಲಾಯಿಸುತಿದ್ದರೆ ಎನಗಿಲ್ಲ ಚಿಂತೆ ಹಾಗಂತ , ಅವನು ಡಿಪಿಯಲ್ಲಿ ಎಷ್ಟು ಬದಲಾವಣೆ ಮಾಡಿದರೂ ಪ್ರಯೋಜನ ಇಲ್ಲವಂತೆ ...!              -ಮಾಧವ ಅಂಜಾರು

ನಾಸ್ತಿಕನೊಂದಿಗೆ

ನಾಸ್ತಿಕನೊಂದಿಗೆ ಆಚಾರಗಳನ್ನ ವಿವರಿಸಿದರೆ ಆಸ್ತಿಗೆ ಕನ್ನ ಹೊರತು ನಿಮ್ಮ ನಂಬಿಕೆಗೆ ಬೆಲೆ ಬರುವುದೇ ? ನಾಸ್ತಿಕನಲ್ಲದವನೊಂದಿಗೆ ನಾ ನಾಸ್ತಿಕ ಅಂದುಬಿಟ್ಟರೆ ವ್ಯರ್ಥವೇ ಹೊರತು ನಿಮ್ಮ ನಾಸ್ತಿಕತೆಗೆ ಜಾಗ ಸಿಗುವುದೇ ? ನಾಸ್ತಿಕನಾದರೂ ಅನಾಸ್ತಿಕನಾದರೂ  ಆಸ್ತಿಕನಾದರೂ , ಪಾಸ್ತಿಕನಾದರೂ ಮನುಷ್ಯತ್ವವವೇ  ಇರದಿದ್ದರೆ , ನಿನಗೆ ಬೆಲೆ ಇರುವುದೇ ?                       -ಮಾಧವ ಅಂಜಾರು

ಪ್ರೀತಿ ಅನ್ನೋದು

ಪ್ರೀತಿ ಅನ್ನೋದು ಪ್ರತೀ ಜೀವಿಗಳಲ್ಲೂ ಇದೆ ದ್ವೇಷ ಅನ್ನೋದು ಪ್ರತೀ ಜೀವಿಯಲ್ಲೂ ಇದೆ ಪ್ರೀತಿಯೂ ,ದ್ವೇಷವೂ ಅತಿಯಾಗಿ ಮನುಜರಲ್ಲೇ ಇದೆ ಅತಿ ಪ್ರೀತಿ ,ಅತೀ ದ್ವೇಷ ತೋರಿದ ಮನುಷ್ಯನ ಅಂತ್ಯ ನರಕವಾದದ್ದೂ  ಇದೆ ...!                     ಮಾಧವ ಅಂಜಾರು  

ನನ್ನದು.

ನನ್ನದು. ವಾರಕ್ಕೊಂದು ಕವನ ತಿಂಗಳಿಗೊಂದು ಕವನ ಮನದಾಳದ  ನೋವ ದೂರ ಮಾಡಲು ..! ಕೆಲವರದು ... ವಾರಕ್ಕೊಂದು ಹೋಮ ತಿಂಗಳ ಹೋಮ ಹವನ ಗ್ರಹಚಾರವನ್ನೇ ... ದೂರ ಮಾಡಲು . ನೋವ ಕವನ ಹೋಮ ಹವನ ಎಂದಿಗಾದರೂ ಮನ ತಣಿಸಲಿ ಅವರವರ ಜೀವನ ಸರಿಯಾಗಿ ನಡೆಸಲು ..             -ಮಾಧವ ಅಂಜಾರು

ಮಾತಿಗೆ ಬೆಲೆ

ಮಾತಿಗೆ ಬೆಲೆ ಕೊಡದವರಲ್ಲಿ ನೀತಿ ಮಾತನಾಡಿ ನಮ್ಮ ರೀತಿ ಕೆಡಿಸಿಕೊಳ್ಳೋ ಬದಲು ಮಾತು ಬರದಂತೆ ಇದ್ದು ಭೂಪನಂತೆ ನಟಿಸಿ ಜೋತು ಬಿದ್ದ ಗೂಡಂತೆ ಇರುವುದೇ ಲೇಸು           -ಮಾಧವ ಅಂಜಾರು

ನಿಮ್ಮ ನಗು ಬಯಸುವವರು

ನಿಮ್ಮ ನಗು ಬಯಸುವವರು ಇರುವರು ಕೆಲವೇ ಕೆಲವರು ,,,, ನಿಮ್ಮ ಅಳು ಬಯಸುವವರು ಇರಬಹುದು ಹಲವರು, ನೀವು ನಕ್ಕಾಗ ನಗುವವರು ಅತ್ತಾಗ  ಆಳುವವರು ನಿಮ್ಮೊಂದಿಗೇ ಇರುವರು ಎಂದಿಗೂ ನಗುವಲ್ಲೂ ಅಳುವಲ್ಲೂ ಸಂಶಯವಿರದಾಗ ,                         -ಮಾಧವ ಅಂಜಾರು

ಮಳೆ ಬಂದು

ಮಳೆ ಬಂದು, ಕೆರೆತುಂಬಿ ಹರಿದಾಗಲೇ ಹೊಳೆ ಮೈದುಂಬಿ  ಹರಿಯೋದು ಹೊಳೆಯ ಸೊಗಸೇರುವುದು , ಸಾಗರದ ಮತ್ತೇರುವುದು , ತೆರೆಯ ವೇಗ ಕೂಡುವುದು , ಬಿತ್ತನೆಯು ಸರಿಯಾದಾಗಲೇ ಬೀಜ ಮೊಳಕೆಯೊಡೆಯೋದು ಗಿಡ ಆರೈಕೆ ಚೆನ್ನಾಗಿದ್ದರೇನೇ ಫಸಲು ಸರಿಯಾಗಿರೋದು ಶ್ರಮ ಕ್ರಮವಾಗಿರೋದು ,

ನಾನು ನಕ್ಕರೆ ನನಗೂ ಸಂತೋಷ

ನಾನು ನಕ್ಕರೆ ನನಗೂ  ಸಂತೋಷ ನಾನು ನಕ್ಕರೆ ನಿಮಗೂ ಸಂತೋಷ ನನ್ನ ನಗುವಲ್ಲಿ ಕಲ್ಮಶವಿರದಿದ್ದರೆ ನನ್ನ ನಗುವಲ್ಲಿ ಬೇಸರವಿರದಿದ್ದರೆ , ನಾನು ನಕ್ಕರೆ, ಬರುವುದು ಅಕ್ಕರೆ ನಿಮ್ಮ ಅಕ್ಕರೆ, ಕೊಡುವುದು ಸಕ್ಕರೆ ನಗು ನಗುತಾ ಬದುಕೋಕೆ ಈ ಕರೆ ಪೊಳ್ಳು ನಗು ಬೀರಿದರೆ ಅದೊಂದು ಬರೆ , ಅದೆಷ್ಟು ಚಿಂತೆಯಿರಲಿ,ನಗುವನ್ನು ಮರೆಯಬೇಡಿ, ನೀವು ಬಿದ್ದಾಗ ನಕ್ಕವರ, ಹತ್ತಿರ ಸುಳಿಯಬೇಡಿ, ನಿಮ್ಮ ನಗು ತಿಳಿಸುತ್ತದೆ ಮನಸಿನ ಸೊಬಗು ನಿಮ್ಮ ನಗು ನಿಮ್ಮದೇ ಮಗು, ನಗೋದಾದರೆ ಮಗುವಂತೆ ನಗು ...                          -ಮಾಧವ ಅಂಜಾರು

ತುಳುನಾಡ ಐಸಿರಿ

ತುಳುನಾಡ ಐಸಿರಿನ್ ನೆಂತೂದಿಪ್ಪುಲೆ ತುಳುಭಾಷೆದ  ಪೊರ್ಲುನು  ಒರಿಪುಗ ನಮ ಬಲೇ ಕಾರ್ಣಿಕೊದ ಮಣ್ಡ್ ಬುಲೆದಿನಕುಲುಯೇ ತುಳುವಪ್ಪೆನ್ ಮೋಕೆಡ್ ತೂಯಿನಕುಲುಯೇ ..೨ ಸತ್ಯೊದ ಸಾದಿಡ್ ನಡಪುನ ನಮ ಧರ್ಮ ನಿತ್ಯೊಲ ತುಳುದೀಪೋಗ್ ಕೈ ಮುಗಿಲೆಯೇ .. ೧ ತುಳುನಾಡ ಐಸಿರಿನ್ ನೆಂತೂದಿಪ್ಪುಲೆ ತುಳುಭಾಷೆದ  ಪೊರ್ಲುನು  ಒರಿಪುಗ ನಮ ಬಲೇ ಈ ಏಳ್ ಜನ್ಮೊದ ಪುಣ್ಯ ನಮ್ಮವೇ ಜಾತಿ ಧರ್ಮ ಬೇಧ ದಾಂತೆ ಬದುಕೊಂದುಲ್ಲಯೇ -೨ ಕಡಲ ಬರಿತ ಪೊರ್ಲುದ ಈ ನಮ್ಮ ಊರು ಸುಖ ಶಾಂತಿನ್ ಬಯಕುನ ಈ ನಮ್ಮ ನಾಡ್ -೧ ತುಳುನಾಡ ಐಸಿರಿನ್ ನೆಂತೂದಿಪ್ಪುಲೆ ತುಳುಭಾಷೆದ  ಪೊರ್ಲುನು  ಒರಿಪುಗ ನಮ ಬಲೇ ಪರಶುರಾಮ ದೇವೆರೆ ಈ ಜಾಗೊಯೇ ಪ್ರತಿಧರ್ಮದ ಜನಕುಲೆನ ಈ ಭೂಮಿಯೇ -೨ ಮಾತೆರ್ಲ ಒಂಜಾದ್ ಮೋಕೆಡ್ ನಮ ಪನ್ಪ  ... ತುಳು ಸಂಸ್ಕ್ರಿತಿ  ಏಪೋಗ್ಲಾ ಒರಿಪಾದ್ ಕೊರುವ -೧ ತುಳುನಾಡ ಐಸಿರಿನ್ ನೆಂತೂದಿಪ್ಪುಲೆ ತುಳುಭಾಷೆದ  ಪೊರ್ಲುನು  ಒರಿಪುಗ ನಮ ಬಲೇ                            - ಮಾಧವ ನಾಯ್ಕ್ ಅಂಜಾರು

ಐಟಿಯ ಚಾಟಿ

ಐಟಿಯ ಚಾಟಿಗೆ ಬಿತ್ತು ಸಾವಿರ ಕೋಟಿ ಅದೆಲ್ಲವೂ ಗಳಿಸಿರಬಹುದು ಜನಸಾಮನ್ಯರ ಮಾಡಿ  ಲೂಟಿ ... ? ಕೋಟಿ ಕೋಟಿಗಾಗಿ ಅಧಿಕಾರಿಗಳ ಭೇಟಿ ಅದು ತಪ್ಪೆಂದು ಹೇಳೋರ ಬಳಿ ಇರಬಹುದು ಕೋಟಿ ಕೋಟಿ ...! ಜನಸೇವೆ ಹೆಸರಲಿ, ನಮ್ಮೆಲ್ಲರ ಲೂಟಿ ಕೊನೆಗೆ ಬೀಸದೆ ಇರಬಹುದೇ ಬಡವನ ಬೆನ್ನಿಗೆ ಚಾಟಿ ..!     - ಮಾಧವ ನಾಯ್ಕ ಅಂಜಾರು

ನಿನ್ನ ಹೃದಯ

ನಿನ್ನ ಹೃದಯ ಕದ್ದೆ ಬರಲಿಲ್ಲ ನನಗೆ ನಿದ್ದೆ ಕನಸಲಿ ಎದ್ದು ಬಿದ್ದೆ ಮತ್ತೆ ಮಾಡಿಲ್ಲ ನಿದ್ದೆ , ನಿನ ಸ್ಪರ್ಶ ಮಾಡಿದ್ದೆ ಆ ನೆನಪಲ್ಲೇ ಎದ್ದೆ ಅವಸರದಲಿ  ಓಡುತ ಮಳೆನೀರಲಿ ಒದ್ದೆ , ಅಂತೂ ಇಂತೂ ನಾ ಮಾಡುತ್ತಿಲ್ಲ ನಿದ್ದೆ ನನಗಂತೂ ಗೊತ್ತಿಲ್ಲ ನೀ ಮಾಡುತಿದ್ದೀಯಾ ನಿದ್ದೆ ..!           -ಮಾಧವ ನಾಯ್ಕ್ ಅಂಜಾರು

ಮೂಜಿ ಪೊರ್ತುದ

ಮೂಜಿ ಪೊರ್ತುದ ನುಪ್ಪುದಾಸೆಗ್  ಏಳ್ ಕಡಲ್ ಕಡತೆ  ಕಡಲ ಕಡತಿನ ಪೊರ್ತುಡೇನ್ನಿಯೆ  ಎನ ಬಡವು ಬಂಜಿ ದಿಂಜಾಯೇ  ಪಣವು ಮಲ್ಪುನ ಕನೊನು ಕಟ್ಟೊಂಡೆ  ಎನ ಮನಸ್ ಮಲ್ಲ ಮಲ್ತೆ  ಒಣಸ್ ಪಾಡುನ ಕಾಲ ಬರಡ್  ,ಪಂದ್  ಪೊಟ್ಟಿ ಕಟ್ ದ್ ನಡತೆ  ಅಪ್ಪ ಅಮ್ಮನ ಕಾರ್ ಬೂರುದು  ಕಣ್ಣ ನೀರ್ ನ್  ದಿಂಗ್ ಯೇ ನನ ದುಂಬು  ನಂಕ್ ಬಂಗ ಬರಂದ್  ಪಂದ್  ತಂಗಡಿನ ಕಣ್ಣ್ ಒರೆಸಿಯೆ ... " ಬೆಚ್ಚ ಭೂಮಿಡ್ ಪಜ್ಜೆ ದೀಯೇನೆ  ನನ ಹೆಚ್ಚ ಪಣೊನು ಕೂಡೆರೆ,  ಸೂತ ಗಾಳಿನ್ ಉಡಲ್ ದೆತೊಂದೇ ಒಂಜಿ ಪೊರ್ತುದ ಗಂಜಿ ನೆಂತೆ,  ಎನ ನಂಬಿ ಸಂಸಾರೊಗ್ ತೆಲಿತೊಂದೆ  ಪಂಡೆ , ಎಂಕಿಜ್ಜಿ ದಾಲ ತೊಂದರೆ  ಮನಸ್ ಬಾಡುಂಡ್  ರೋಗ ಸೇರುಂಡ್  ಅವೆನ್ ಗುಟ್ಟು ಮಲ್ತೆ    ತೆರಿಪಾವೊಡಿಂದು ಮನಸ್ ಪಾತೆರೆಂಡ್  ರಾತ್ರಿ ನಿದ್ರೆ ಬುಡಿಯೆ  ಒಂಜಿ ಪೊರ್ತುದ ಗಂಜಿ ನೆನೆತ್  ಅವೆನ್ ಪನಂದೆ ಬುಲಿತೆ ....  ದೈವ ದೇವೆರೆನ್ ದಿನೊಲ ಸುಗಿತೊಂದು  ಪಿದಾಡುವೆ,  ಪುಲ್ಯಕಾಂಡೆ  ಮದಿಮೆ ,ಜಾತ್ರೆ ಮಾತ ಪರ್ಬೊಲೆನ್ ನೆಂತೊಂದೇ..  ದಿನ ದೆತ್ತೆ   ರಜೆತ ದಿನೊನು ನಿಗಂಟ್ ಮಲ್ತ್  ಅಯ್ತ ಕನೊಟೇ ನಲಿತೆ  ಪುಂಡಿ ತಿಂಡಿನ್ ಕಟ್ಟುದು ಕೊನೆಯೆರೆ  ಬೇಲೆ ಮಲ್ತ್ದ್  ಬಲಿತೆ ಮೂಜಿ ಪೊರ್ತುದ ನುಪ್ಪು ಉನಿಯೆರೆ  ಎನ ಪಾಡ್ ನೆನೆತೊಂದೆ ಬುಲಿತೆ                   -ಮಾಧವ ನಾಯ್ಕ್ ಅಂಜಾರು

ಕೆಳೆದೋಯ್ತು ಎಪ್ಪತ್ತು

ಕೆಳೆದೋಯ್ತು ಎಪ್ಪತ್ತು ವರುಷ ಸ್ವಾತಂತ್ರ್ಯ ಗಳಿಸಿ  ದೇಶಕ್ಕೆ ಕಳೆದೋಯ್ತು ಮೂವತ್ತೈದು ವರ್ಷ ಮೂಳೆಮಾಂಸದ  ಜೀವಕ್ಕೆ ಅದೆಷ್ಟು ಕಸರತ್ತು ಅದೆಷ್ಟು ಆಪತ್ತು ಆದರಿನ್ನೂ ಮುಗಿಯಲಿಲ್ಲ ಬೆವರಿಳಿಸೋ ಸುತ್ತು , ಭರವಸೆಯ ಜೀವನ ಯಾವತ್ತೂ ಕೊಂಡು ಬರಬಹುದೇ ಆಪತ್ತು ? ಇಲ್ಲ ಸಾಧ್ಯವಿಲ್ಲ ಎಂದು ಕುಳಿತರೆ ..! ಮುಗಿಯುವುದೇ ? ನನ್ನ ಸುತ್ತು ? ಬರಲಿ ಬರಲಿ ಅದೆಷ್ಟೋ ಇರಲಿ ನನಗಿರೋ ಧೈರ್ಯವೇ ಸಂಪತ್ತು ..! ಕುಗ್ಗಬೇಡ ಎಂದಿಗೂ ನೀ...  ಸುತ್ತು ..! ಬಗ್ಗಬೇಡ ಯಾರಿಗೂ ಮಾಡಿದರೆ ಕುತ್ತು  ..! ತಗ್ಗಿ ಬಗ್ಗಿ ನಡೆದರೆ ತಪ್ಪಲ್ಲ ಇನಿತು ನಿನಗೆ ನೀನೆ ತಂದುಕೊಳ್ಳುವೆ ಆಪತ್ತು, ವಂಚಿಸುವವರನು  ಬಿಡಬೇಡ ಯಾವತ್ತೂ ..! ಅಪ್ಪಿ ಪ್ರೀತಿಸು ಎಲ್ಲರನೂ ಸತ್ಯ ವಿದ್ದರೆ ಯಾವತ್ತೂ ..!                    -ಮಾಧವ ನಾಯ್ಕ್ ಅಂಜಾರು

ಅಮ್ಮನೆಂದಳು

ಅಮ್ಮನೆಂದಳು ಅಂದು ಅಲ್ಲಿ ಗುಮ್ಮನಿರುವನೆಂದು ನಾ ತಮ್ಮನ ಕರೆದು ಹೇಳಿದೆ ಅಲ್ಲಿರುವನು  ಗುಮ್ಮನೆಂದು , ತಂಗಿ ಹಠಮಾಡಿದಳಂದು ನನಗೆ ಗೊಂಬೆ ಬೇಕೆಂದು ತಮ್ಮ ಕೈ ತೋರಿಸಿದನಲ್ಲಿ ಓ ಅಲ್ಲಿ ನೋಡು ಗುಮ್ಮಾ...ನೆಂದು , ಅಮ್ಮನಿಗೂ ಅರಿಯದ ಗುಮ್ಮ ನಮಗೂ ಸಿಗದ ಗುಮ್ಮ ಇಂದು ಮಗನಿಗೆ ಕೈ ತೋರಿಸಿ ಹೇಳಿದೆ ಓ ಅಲ್ಲಿರುವ ಗುಮ್ಮಾ ... ಸುಮ್ಮನಿರೆಂದು ..!!!೧              - ಮಾಧವ ನಾಯ್ಕ್ ಅಂಜಾರು

ರವಿಯಂತೆ ನೀ ಬೆಳಗು

ರವಿಯಂತೆ ನೀ ಬೆಳಗು ನನ್ನೊಳಗೆ ನೀನಾಗು  ಸವಿಜೇನಿನಂತೆ  ಮಳೆಹನಿಯ ನೀರಾಗು , ಕಡುಗತ್ತಲೆ ರಾತ್ರಿಗೆ  ಚೆಂದಿರನ ಬೆಳಕಾಗು  ಆ ಬೆಳಕಿನಂದಕೆ   ಮಿನುಗು ನಕ್ಷತ್ರವಾಗು , ನನ್ನೆದೆಯ ಗೂಡಲಿ  ಕುಣಿಯುವ ಹೃದಯಕೆ  ಕೈ ಹಿಡಿದು ನಲಿಯುವ  ನರ್ತಕಿಯು ನೀನಾಗು  ಮುಂಜಾನೆಯ ಬೆಳಕಲ್ಲಿ  ಚಿಗುರುವ ಹೂವಾಗು  ಮೊಗ್ಗಂತೆ ನೀನಿದ್ದು  ಪ್ರೀತಿಯ ಹೂವಾಗು ,            -ಮಾಧವ ನಾಯ್ಕ್ ಅಂಜಾರು 

ಕಣ್ಣಂಚಲಿ

ಕಣ್ಣಂಚಲಿ ಬಿಳೋ ಕಣ್ಣೀರ ಹನಿಗೆ ಅರಿವಿರದೇ ಇರುವುದೇ ಇಳಿವಾಗ ಧರೆಗೆ , ಕಣ್ಣ ತುಂಬಾ ಕಣ್ಣೀರು ಇದ್ದರೇ ಮಿಟುಕಿಸದಿರುವುದೇ ಕಣ್ಣ ರೆಪ್ಪೆ ಕೊನೆಗೆ , ಹೃದಯದ ಹಗುರಕೆ ಅದೇ ದಾರಿಯು ಕೊನೆಗೆ ಕಣ್ಣಂಚನ್ನುಜ್ಜಲು ಕೈ ಮಾತ್ರ ಕೊನೆಗೆ, ಹೃದಯದ ಅಳುವಿಗೆ ಕಣ್ಣಿನ ಸಹಾಯ ಕಣ್ಣೀರ ರಭಸಕೆ ಕೈ ಮಾಡೋದು ಸಹಾಯ , ಸೋಲದಿರು ಎಂದಿಗೂ ಓ ನನ್ನ ಮನವೇ ಹೃದಯವ ಭದ್ರಗೊಳಿಸಿ ನಿನ್ನೊಂದಿಗೆ ಇರುವೆ ,    - ಮಾಧವ ನಾಯ್ಕ್ ಅಂಜಾರು

ಕನವೊಂಜಿ

ಕನವೊಂಜಿ ನಿನ್ನವೇ ಪೊಣ್ಣೆ ಎನ ನಿದ್ರೆಡ್ ಲಕ್ಕಂಡತ್ತಾ .... ನಿನ ಪೊರ್ಲ ಮೋನೆದ ತೆಲಿಕೆ .. ಎನ ಮರ್ಲ್  ಮಲ್ತ್ ತಾಂಡತ... ಮಾಜಿಂಡಾ ಆ ನೆಂಪುಲಾ , ತಾಮರೆದ ಕೆದು ಬರಿಟ್ ಲಾ ಕಾತೊಂದೆ ಬೊಲ್ಪಾಯಿನ ಪುಣ್ಣಮೆದ ಆ ರಾತ್ರಿಲಾ .... ಕನವೊಂಜಿ ನಿನ್ನವೇ ಪೊಣ್ಣೆ ಎನ ನಿದ್ರೆಡ್ ಲಕ್ಕಂಡತ್ತಾ .... ನಿನ ಪೊರ್ಲ ಮೋನೆದ ತೆಲಿಕೆ .. ಎನ ಮರ್ಲ್  ಮಲ್ತ್ ತಾಂಡತ... ಮರತನಾ ಆ ಬಾಸೆನೇ ಉಡಲೆನ್ನ ಈ ಕೆರಿಯನೇ ನಿನ ನೆನೆತ್ ಈ ಜೀವೊಲಾ ಬಲದಾಂತಿ ಬೂಡಾಂಡತ್ತಾ ಕನವೊಂಜಿ ನಿನ್ನವೇ ಪೊಣ್ಣೆ ಎನ ನಿದ್ರೆಡ್ ಲಕ್ಕಂಡತ್ತಾ .... ನಿನ ಪೊರ್ಲ ಮೋನೆದ ತೆಲಿಕೆ .. ಎನ ಮರ್ಲ್  ಮಲ್ತ್ ತಾಂಡತ...               -  ಮಾಧವ ನಾಯ್ಕ್ ಅಂಜಾರು

ನಾಳೆ ಸಾವು ಗ್ಯಾರಂಟಿ

ನಾಳೆ ಸಾವು ಗ್ಯಾರಂಟಿ  ನಾಳೆ ಸಾವು ಗ್ಯಾರಂಟಿ ಎಷ್ಟು ಉಳಿಸಿದರೂ ಎಷ್ಟು ಗಳಿಸಿದರೂ , ನಾಳೆ ಸಾವು ಗ್ಯಾರಂಟಿ ಬಲಶಾಲಿಯಾದರೂ ದುರ್ಬಲನಾದರೂ ಕೆಟ್ಟವರಾಗಿ ಬಾಳಿದರೆ ಉಳಿಸಿದ್ದು ಗಳಿಸಿದ್ದು , ಹೋಗೋದು ಗ್ಯಾರಂಟಿ ಒಳ್ಳೆಯವರಾಗಿ ಬಾಳಿದರೆ ಸಂತೋಷ ಗ್ಯಾರಂಟಿ ಆದರೆ ಯಾರಿಗೂ ಇಲ್ಲ ವಾರಂಟಿ ...!             -ಮಾಧವ ಅಂಜಾರು

ದರೋಡೆಕೋರರಿದ್ದಾರೆ ಎಚ್ಚರಿಕೆ

ದರೋಡೆಕೋರರಿದ್ದಾರೆ ಎಚ್ಚರಿಕೆ ಮಾತು ಬರದೆ ಸರಿದು ನಿಂತಿದ್ದ ವನ ಕಿಸೆ ದೋಚೋ ಪಾಪಿಗಳಿದ್ದಾರೆ ಎಚ್ಚರಿಕೆ ತಪ್ಪು ಮಾಡದಿದ್ದರೂ ನೀನು ತಪ್ಪಿತಸ್ಥನೆಂದು ವಾದಿಸೋ ನೀತಿ ಇಲ್ಲದ ದುಷ್ಟರಿದ್ದಾರೆ ಎಚ್ಚರಿಕೆ ಕಾಸಿಗಾಗಿ ದಿನವಿಡಿ ಬಣಗುಟ್ಟುತ್ತ, ಆಚಿಚೆ ಎಗ್ಗಿಲ್ಲದೆ ಸುಳಿದಾಡುತ್ತಾರೆ ನೀವಿರಿ ಸದಾ ಎಚ್ಚರಿಕೆ , ಕೂಸನ್ನು ಶಾಲೆಗೆ ಸೇರಿಸಲು ಹೋಗುವವರ ತಲೆ ಬೋಳಿಸಿ ಲೂಟಿ ಮಾಡುವರು ಎಚ್ಚರಿಕೆ ರಕ್ಷಣೆಗೆಂದು ಸಹಾಯ ಬಯಸಿ  ನಡೆದರೂ ಭಕ್ಷಕರಿರಬಹುದು ಎಚ್ಚರಿಕೆ ಸೋತು ಸೋತು ಬಸವಳಿದು ನಿಂತಾಗ ನಿಮ್ಮ ಕತ್ತು ಹಿಸುಕೋ ದ್ರೋಹಿಗಳಿದ್ದಾರೆ ಎಚ್ಚರಿಕೆ ಬೆಣ್ಣೆಯಂತೆ ಮಾತನ್ನಾಡುತ್ತಾ ಹಾಲಿನಂತೆ ಬಿಳಿ  ಹೇಳುತಾ ನಿಮ್ಮನ್ನ ನುಂಗಿಬಿಡೋ ರಾಕ್ಷಸರಿದ್ದಾರೆ ಎಚ್ಚರಿಕೆ        -ಮಾಧವ ಅಂಜಾರು

ಭೂಮಿಡ್ತ್ ಬಾನೊಗ್

ಹೊ... ಹೊ.....  ಹೊಹೊಹೊ .... ಹೊಹೊ ಹೊ ಹೊ ......೧ ಭೂಮಿಡ್ತ್ ಬಾನೊಗ್ ಲೆಂಚಿ ದೀಪಿನೆಂಚ  ದೇವೆರೆ  ದಾಯೆಗ್ ಇಂಚ ಉಡಲ್ದ  ಬೆನೇನ್ ಪನ್ಪಿನೆ ಎಂಚ ಕನೋತ ದಿನನೇ ಇಂಚ.... ಅಪ್ಪನ್  ಅಮ್ಮನ್  ನೆಂತೊಂದೆ ಮೂಲು ಪರ್ಬದ ದಿನೊಲ ಬೆನಿಯರೇ ಸಾಲ್ ಕಜ್ಜಗು ಜಾತ್ರೆಗ್ ಯಾನಿಜ್ಜಿ ಅವುಲು ಅವೇನ್  ಪನ್ಪಿನ ಎಂಚ .. ಮುಚ್ಚಿದ್ ದೀಪಿನಿ ಎಂಚ ....! (ಪನಂದೆ ಕುಲ್ಲುನೆ ಎಂಚ ) ಸಂಸಾರದ ಮೊನೆಡು ಇಪ್ಪೊಡು ತೆಲಿಕೆ ನಮ್ಮಕ್ಲೆ  ಬದುಕುಡು  ಇಪ್ಪೊಡು ನಲಿಕೆ ಪರವೂರ ಜೀವನ ತೂವೆರೆ ಪೊರ್ಲು ಊರುದ ನೆಂಪುಡೆ ದಿನದೆಪ್ಪೊಡು  ಮೂಲು ಅವೆನ್ ಪನ್ಪಿನಿ ಎಂಚ ... ಲೋಕದ ಕತೇನೇ ಇಂಚ .. ೨                    -ಮಾಧವ ಅಂಜಾರು p0[l9I

ಸಂಗವೆಂದರೆ ತೊಂದರೆ

ಸಂಗವೆಂದರೆ ತೊಂದರೆ ಸಜ್ಜನರ ಸಂಗ ದುರ್ಜನರಿಗೆ ದುರ್ಜನರ ಸಂಗ ಸಜ್ಜನರಿಗೆ , ಇದ್ದರೆ ಇನ್ನಷ್ಟು ತೊಂದರೆ ಸಜ್ಜನರು ಹೆದರಬೇಡಿ ದುರ್ಜನರು ಹಾರಾಡಬೇಡಿ ದುರ್ಜನರು ಸಜ್ಜನರಾಗಿ ಎಲ್ಲರೂ ಬಾಳೋದು ಅಲ್ಪ ಕಾಲ ಸಜ್ಜನರಾಗಲು ಬೇಕು ಸಮಯ ದುರ್ಜನರಾಗಲು ಬೇಡ ಸಮಯ ಎಲ್ಲದಕ್ಕೂ ಬೇಕು ವಿಷಯ ಸತ್ಯವಿದ್ದರೆ ಇಲ್ಲವಂತೆ ಭಯ ...              -ಮಾಧವ ಅಂಜಾರು

ಒಂದಿಷ್ಟು ನಿಮಿಷ ದೇಶ ಸೇವೆಗೆ

ಒಂದಿಷ್ಟು ನಿಮಿಷ ದೇಶ ಸೇವೆಗೆ ಒಂದಷ್ಟು ನಿಮಿಷ ಈಶ ಸೇವೆಗೆ ಮೀಸಲಿಡಿ  ನಿಮಿಷ, ಜನ ಸೇವೆಗೆ ನಿಮಗಾಗೋದು ಹರುಷ, ಎಲ್ಲಾ ಸೇವೆಗೆ ... ಒಂದಿಷ್ಟು ಕರುಣೆ, ಇರಲಿ ನಿಮಗೆ ಒಂದಷ್ಟು ಮನ್ನಣೆ, ಸಿಗಲಿ ನಿಮಗೆ ಒಳಿತು ಮಾಡಿ, ಬರದು ನಿಮಗೆ ಗರಬಡಿದ ಬದುಕು ಇರದು ಕೊನೆಗೆ ... ಇಂದು ಮಾಡಿದ ಒಳಿತಿಗೆ ಅಂದು  ಮಾಡಿದ ಕೆಡುಕಿಗೆ ದೇವರ ಶಿಕ್ಷೆ ಸಿಗೋ ಬದಲು ಬದಲಾಗಬೇಕು ನಾವು ಸಾಯೋ ಮೊದಲು                   -ಮಾಧವ ಅಂಜಾರು

ಕವಿ ಬಯ್ದರೂ ,

ಕವಿ ಬಯ್ದರೂ  , ಕವನದಲ್ಲಿಯೇ ಬಯ್ಯಬಹುದು ಎಂದು ಹೇಳುತ್ತಾ ... ಕವಿಯ ಕಿವಿ ತಿವಿದರು ..! ಕವಿಯಲ್ಲದ ಕವಿಗೆ ಕವಿಯೆಂದು ಹೇಳಿದೊಡನೆ . ಕವಿಯಾಗೋ ಆಸೆ ಚಿಗುರಿಸಿ ಬಿಟ್ಟರು ..! ಸ್ವಾಮಿ ನಾ ಈಗವಂತೂ ಕವಿಯಲ್ಲ , ಅನುಭವವು ಇಲ್ಲಾ ... ಹೇಳುತ್ತಿದ್ದಂತೆ ...! ನುಡಿಮುತ್ತು ಹೇಳಿಯೇಬಿಟ್ಟರು ..! ಮಾವಿನ ಮರದಲ್ಲಿ .. ಒಂದು ಮಾವು ಹಣ್ಣಾಗಿದ್ದರೂ ಮಾವಿನ ಹಣ್ಣೇ ಆಗಿರುತ್ತದೆ ..! ಹಾಗಾಗಿ ನೀವು ಕವಿ ಅಂದುಬಿಟ್ಟರು ..! (ಈ ಕವನ ನನ್ನ ಪ್ರೀತಿಯ ಗೆಳೆಯ ಶ್ರೀ ಸೀತಾರಾಮ ಕೆ ಗೌಡ ಅವರ ಮಾತುಕತೆಯಲ್ಲಿ ಮೂಡಿಬಂದಿದ್ದು )

ಗೊಂಬೆಯಾಗು ನೀ

ಗೊಂಬೆಯಾಗು ನೀ ಕೈಗೊಂಬೆಯಾಗಬೇಡ ರಂಬೆಯಾಗು ನೀ ಶೂರ್ಪನಖಿಯಾಗಬೇಡ ಚಂದಿರನಾಗು ನೀ ತೊಂದರೆಯ ಗೂಡಾಗಬೇಡ ರಾಮನಾಗು ನೀ ರಾವಣನಾಗಬೇಡ ಕರ್ಣನಾಗು ನೀ ಶಕುನಿಯಾಗಬೇಡ ಮನುಜನೇ ಆಗಿರು ನೀ ರಾಕ್ಷಸ ವಂಶಕ್ಕೆ ಸೇರಬೇಡ       -ಮಾಧವ ಅಂಜಾರು

ಅಳೆಯುತ್ತಾರೆ ನಿಮ್ಮನ್ನು

ಅಳೆಯುತ್ತಾರೆ ನಿಮ್ಮನ್ನು ಅವಕಾಶ ಕೊಟ್ಟರೆ ತೊಳೆಯುತ್ತಾರೆ ನಿಮ್ಮನ್ನು ಉಪಯೋಗವಿದ್ದರೆ ತೆಗಳುತ್ತಾರೆ ನಿಮ್ಮನ್ನು ತಲೆ ತಗ್ಗಿಸಿ  ನಿಂತರೆ ಹೊಗಳುತ್ತಾರೆ ನಿಮ್ಮನ್ನು ತಲೆಯೆತ್ತಿ ನಡೆದರೆ ತೂಗುತ್ತಾರೆ ನಿಮ್ಮನ್ನು ಅಪ್ಪಿ ತಪ್ಪಿ ಬಿದ್ದರೆ ಜರೆಯಬಹುದು  ನಿಮ್ಮನ್ನು ನಿಮ್ಮ ಸ್ಥಿತಿ ಕೆಟ್ಟು ಹೋಗಿದ್ದರೆ      -ಮಾಧವ ಅಂಜಾರು

ಗಿಪುವರೇ ತುಳುಗಾನ

ಹಾ ಹಾಹಾ   ಹಾಹಾ ಆಹ ಹಾಹಾ ಆಹ ಆಹಾ ಆಹಾ ಅಹಹಾ ಸುಗಿಪುವರೇ  ತುಳುಗಾನ ನಿಜ ಉಡಲೇ ಪನ್ಪಿನ ಗಾನ ಕೇನ್ಲೆ.... ಸುಗಿಪುವರೇ  ತುಳುಗಾನ ನಿಜ ಉಡಲೇ ಪನ್ಪಿನ ಗಾನ ಮನದಾಸೆ, ಕೂಡುದಿ ಬಯಕೆ ನನಸಾದ್ ಬರಡ್ ಮೋಕೆ  ---೨ ತುಳುಗೀತೆಗೆ ... ತುಳುಜೋಕೆಗೆ ಒಂಜಾತ್ ಸೇರಡ್ ಅಂಕೆ .... ಸುಗಿಪುವರೇ  ತುಳುಗಾನ ನಿಜ ಉಡಲೇ ಪನ್ಪಿನ ಗಾನ ತುಳುವೆರೆ ದಿಂಜಿದಿ ಉಡಲ್ ಕಡಲಾದುಪ್ಪಡ್ ಸುಖೋಲು --೨ ಮರ್ಯಾದೆದ ... ಸಂಪತ್ತದ ಊರುಡೇ ಉಪ್ಪೊಡು ನಿಕುಲು ಸುಗಿಪುವರೇ  ತುಳುಗಾನ ನಿಜ ಉಡಲೇ ಪನ್ಪಿನ ಗಾನ ಈ ಎನ್ನುಡಲ್ದ ದುನಿಪು ತುಳುವಪ್ಪೆನ ಸೇವೆಗ್ ಒರಿಪು -೨ ನಮ ಸೇರುನ ,ಸುಗಿಪುನ ಮಾನಾದಿಗೆದ ಈ ಗಾನ ಸುಗಿಪುವರೇ  ತುಳುಗಾನ ನಿಜ ಉಡಲೇ ಪನ್ಪಿನ ಗಾನ --------------------------------- ಮಾಧವ ಅಂಜಾರು

ಈ ನಮ್ಮ ತುಳುನಾಡ್ ದಾ ,

ಈ ನಮ್ಮ ತುಳುನಾಡ್ ದಾ--... ೨ ಕಾರ್ಣಿಕನೇ, ಈ ನಮ್ಮ ತುಳುನಾಡ್ ದಾ , ಈ ನಮ್ಮ ತುಳುನಾಡ್ ದಾ-- ಕಾರ್ಣಿಕನೇ, ಈ ನಮ್ಮ ತುಳುನಾಡ್ ದಾ ,.... ಕಡಲಬರಿ ತಂಪಾಯಿ ಮೂಡುಬದಿ ಕೆಂಪಾಯಿ ಸತ್ಯೋಲೆನ ನಾಡಾಯಿ,  ನಮಮಾತಾ ...ಸುಗಿಪುನ  ಈ ನಮ್ಮ ತುಳುನಾಡ್ ದಾ ಕಾರ್ಣಿಕನೇ, ಈ ನಮ್ಮ ತುಳುನಾಡ್ ದಾ, ಧರ್ಮೊಲು ಒಂಜಾದ್,  ಮತ ಜಾತಿ ದೂರ ಮಲ್ತ್ ....... ಪ್ರತಿಕ್ಷಣಲಾ ನಂಕಾದ್ , ಸರ್ವೆರೆನ್ ಎದ್ಕೊಂದು ...... ೨ ದಯೆ ಕರುಣೆ , ಎಂಕ್ಲೆನಾ , ಪ್ರತಿಪೊರ್ತು ತುಳುವೆರ್ನ ಈ ನಮ್ಮ ತುಳುನಾಡ್ ದಾ ಕಾರ್ಣಿಕನೇ, ಈ ನಮ್ಮ ತುಳುನಾಡ್ ದಾ ,   ದೇವೆರೆನ ಸೃಸ್ಟಿಡಾಯಿ ,ಕಜೊಲೆನ ಊರಾಯಿ .... ತುಳುವಪ್ಪೆಗ್ ಕೈಮುಗಿಲೇ ,ಏಪೊಗ್ಲಾ ಮೋಕೆದೀಲೆ..... ೨ ದಯದೀದ್ ಒಂಜಾಲೆ ಸಂಸ್ಕ್ರಿತಿನ್ ಒರಿಪಾಲೆ ಈ ನಮ್ಮ ತುಳುನಾಡ್ ದಾ , ಕಾರ್ಣಿಕನೇ , ಈ ನಮ್ಮ ತುಳುನಾಡ್ ದಾ , ಕಡಲಬರಿ ತಂಪಾಯಿ ಮೂಡುಬದಿ ಕೆಂಪಾಯಿ ಈ ನಮ್ಮ ತುಳುನಾಡ್ ದಾ ಈ ನಮ್ಮ ತುಳುನಾಡ್ ದಾ ಈ ನಮ್ಮ ತುಳುನಾಡ್ ದಾ          -ಮಾಧವ ಅಂಜಾರು

ಹೆಂಡತಿಗೆ, ರಾತ್ರಿ

ಹೆಂಡತಿಗೆ, ರಾತ್ರಿ ಗಂಡ, ಕನಸಲ್ಲಿ ಬರಲಾರ ಗಂಡನಿಗೆ,ರಾತ್ರಿ  ಹೆಂಡತಿ, ಕನಸಲೂ ದೂರ ಅವಳಿಗೆ ಕನಸಲಿ ಬಂದರೂ ಗಂಡ ಬಹಳ ವಿಕಾರ ಇವ ಕನಸು ಕಂಡರೂ ಹೆಂಡತಿ ಬಲು ತೋರ .. ಈ ಗಂಡ ಹೆಂಡತಿ ನಡೆಸುವರು ಸಂಸಾರ ಜೀವನ ಪೂರ್ತಿ ಹೇಳುವರು ಯಾಕೆ ಹಾಕಿದೆ ಹಾರ ...!             -ಮಾಧವ ಅಂಜಾರು

ಮಾನಾದಿಗೆ ಕೊರೊಡು

ಮಾನಾದಿಗೆ ಕೊರೊಡು ಒರಿತೋನಕ್ಲೆಗ್ ಮಣ್ಣ್ ಮುಕ್ಕಾವೋಡು ರಾಪುನಕ್ಲೆಗ್ ಅಯ್ಯೋ ಸ್ವಾಮಿ ಪಾತೆರ ಕೇಂಡಿಜಿಡ ಅಕಲ್ ರಟ್ಟಾವೊಡು ... ಅತ್ರಾಣದಕ್ಲೆಗ್       -ಮಾಧವ ಅಂಜಾರು

ಮುತ್ತು ಕೊಟ್ಟು

ಮುತ್ತು ಕೊಟ್ಟು ಸ್ವತ್ತೂ ಕೊಟ್ಟ ಮುತ್ತು ಕೊಡುತ್ತಲೇ ಪೂರ್ಣ ಕೆಟ್ಟ ಮುತ್ತಿಗೆ ಬೆಲೆ ತಿಳಿಯದವ ಮುತ್ತಿಗಾಗಿ ಹತ್ತಿದ ಬೆಟ್ಟ ಮುತ್ತು ಮತ್ತನ್ನು ತಂದಿತ್ತು ಸ್ವತ್ತೂ, ಮತ್ತನ್ನು ಒಯ್ದಿತ್ತು ಇವೆರಡರ ಅಹಂಕಾರದಲ್ಲಿ ತುತ್ತು ಕೂಡ ಸಿಗದೇ ಸತ್ತ                 -ಮಾಧವ ಅಂಜಾರು

ಎಲ್ಲರಂತೆ ಮದ್ವೆಯಾದ

ಎಲ್ಲರಂತೆ ಮದ್ವೆಯಾದ ಸ್ವಲ್ಪ ದಿನ ಚಂದಿರನಾದ ಅಮಾವಾಸ್ಯ ಬರುತ್ತಿದ್ದಂತೆ ಚಂದಿರನೇ ಮಾಯವಾದ ನೀನೇ  ನನ್ನ ಬಾಳು ಅಂದ ನಿನ್ನನೆಂದೂ  ಬಿಡೆನು ಅಂದ ಭೂಮಿಯಲ್ಲೂ  ಆಕಾಶದಲ್ಲೂ ನಿನಗಿಂತ ಸುಂದರಿ ಇಲ್ಲವೆಂದ ಸ್ವಲ್ಪ ವರುಷ ಕಳೆದು ಹೇಳಿದ ಮದ್ವೆ ಯಾಕೆ ಬೇಕಿತೆಂದ ನಿನಗೆ ಮದುವೆ ಬೇಡ ಅಂದ ಆರಂಭ ಮಾತ್ರ ಚೆಂದ ವೆಂದ ಒಂದೊಂದೇ ಆರಂಭಿಸಿದ ನಾನು ರಾಜನಂತಿದ್ದೆ ಅಂದ ನಿನ್ನ ವರಿಸಿ ಬೆವರು ಸುರಿಸಿ ಪ್ರಯೋಜನವೇ ಇಲ್ಲವೆಂದ ತಂದೆ ತಾಯಿಯ ಕಡೆಗೆ ಬಂದ ಹೆಂಡತಿಯೆನಗೆ ಬೇಡವೆಂದ ತಾಯಿ ಮಮತೆ ತೋರಿದರು ತಂದೆ, ಕೆನ್ನೆಗೆ ಕೊಡುವೆನೆಂದ ಚಿನ್ನಾ ನಿನ್ನ ಬಿಡೆನು ಅಂದ ನೀನೇ ಮುದ್ದು ಕಂದಾ ಅಂದ ನೀನಿಲ್ಲದಿದ್ದರೆ, ನಾನೆ ಇಲ್ಲವೆಂದ ಇಂದಿನಿಂದ ಇರಲಿ ಬಂಧವೆಂದ              -ಮಾಧವ ಅಂಜಾರು

ಮದುವೆಯಾಗಿ

ಮದುವೆಯಾಗಿ ಮೂರು ತಿಂಗಳು ಪತಿಯನ್ನು ಪೂಜಿಸಿದಳು ನಾಲ್ಕನೇ ತಿಂಗಳು ಆರಂಭದಲ್ಲೇ ಅತ್ತೆ ಮಾವನ ದೂಷಿಸಿದಳು ಕಳೆದು ಹೋಯ್ತು ಆರು ತಿಂಗಳು ಸ್ವಂತ ಮನೆ ಬೇಕೆಂದಳು ಆ ಕಳೆದ ಎಂಟು ತಿಂಗಳು ಗಂಡನ ದಿನಾ  ಕಾಡಿದಳು ಮದ್ವೆಯಾಗಿ ಹನ್ನೆಡರು ತಿಂಗಳು ಈಗ ಮಗು ಬೇಡವೆಂದಳು ಹದಿಮೂರನೇ ತಿಂಗಳು ನಾದಿನಿಯ ಬೈಯೋಕೆ ನಿಂತಳು ಹದಿನಾಲ್ಕನೇ  ತಿಂಗಳು ಕಾದಳು ಬಟ್ಟೆ ಬರೆ ಕಟ್ಟಿದಳು ನಾನು ಇನ್ನು ಬರಲ್ಲ ...ಅಂತಾನೆ ತಾಯಿ ಮನೆಗೆ ಹೋದಳು ಮಗಳ ಪೆಟ್ಟಿಗೆ ನೋಡಿಯೇ ತಾಯಿ ಕರಗಿ ಹೋದಳು ತಂದೆ ಸ್ವಲ್ಪ ಗಟ್ಟಿಯಾಗಿ ನೀ ನಮ್ಮ ಮಗಳಾಗಿದ್ದರೂ ಗಂಡನೇ ನಿನಗೆ ಕಾವಲು ಆತುರ ಬೇಡ ಸುಮ್ಮನೆ ತಿರುಗಿ ಹೋಗು ಹೇಳಿದರು ಹೋದವಳಿಗೇನೋ ಕಸಿವಿಸಿ ತಲೆಯಾಯ್ತು ಬಿಸಿ ಬಿಸಿ ಅಪ್ಪ ಅಮ್ಮ ಬೇಕು ನನಗೆ ಗಂಡನಂತೂ ಬೇಕೇ ಎನಗೆ ಇನ್ನು ಸುಮ್ಮನಾದರೆ ಬಹಳ ಕಷ್ಟ ಇನ್ನೂ ಕೊನೆಗೆ ಪತಿ ಪತ್ನಿಯ ಮುಗುಳು ನಗೆ ಸಿಹಿ ಕಹಿಯಂತೆ ಬಗೆ ಬಗೆ .            - ಮಾಧವ ಅಂಜಾರು  

ಹೆಣ್ಣು ಸಂಸಾರದ ಕಣ್ಣು

ಹೆಣ್ಣು ಸಂಸಾರದ ಕಣ್ಣು ಹೆಣ್ಣಂತೆ ಬದುಕಿದರೆ,   ಗಂಡು ಸಂಸಾರದ ಹೊನ್ನು ಗಂಡಂತೆ ಇದ್ದರೆ, ಕಣ್ಣು ಹೊನ್ನನ್ನು ಬಯಸಿ ಪ್ರೀತಿಯಿಂದ  ಬಾಳಿದರೆ ಸುಖಮಯ ಸಂಸಾರ ... ! ಹೆಣ್ಣೊಂದು ಗಂಡಂತೆ ಗಂಡೊಂದು ಹೆಣ್ಣಂತೆ ಬಾಳನ್ನು ನಡೆಸಿದರೆ ... ಕಣ್ಣೂ ಹೊನ್ನೂ ಬೇಗ ಮಣ್ಣು ಪ್ರತಿದಿನವೂ ಕೆಂಗಣ್ಣು....  ದ್ವೇಷವೆ ಬದುಕಾದರೆ ಸುಖವಿರುವುದೇ ಸಂಸಾರ ...!       -ಮಾಧವ ಅಂಜಾರು

ಕಳ್ಳ ವ್ಯಾಪಾರಿಗೆ

ಕಳ್ಳ ವ್ಯಾಪಾರಿಗೆ ಅದೇನೋ ಸಂತೋಷ ಮೂವತ್ತರ ಕುಂಬಳಕಾಯಿ ಅರುವತ್ತಕೆ ಮಾರಿದೆ ಗ್ರಾಹಕನಿಂದ ಇನ್ನಷ್ಟು ಗಳಿಸಿದೆನೆಂದು ಸ್ವಲ್ಪ ದಿನಗಳಲ್ಲೇ ... ವ್ಯಾಪಾರ ಕಡಿಮೆಯಾಗುತ್ತಿದ್ದಂತೆ ಅದೇನೋ ತಳಮಳ ಮೂವತ್ತರ ಕುಂಬಳಕಾಯಿ ಹತ್ತರಲ್ಲೂ ಮಾರಿದರೆ ಸಾಕು ಗ್ರಾಹಕನಿದ್ದರೆ ನಾ ಬದುಕುವೆನೆಂದು ....             - ಮಾಧವ ಅಂಜಾರು

ನಮಗೇನು ಪ್ರಯೋಜನ ಹೇಳಿ

ನಮಗೇನು ಪ್ರಯೋಜನ ಹೇಳಿ ಅವರಲ್ಲಿ ಇದ್ದರೆ ಅವರಿಗಾಯ್ತು ಅನ್ನೋ ಅತಿಬುದ್ದಿವಂತ ...! ತನ್ನಿಂದ ಮತ್ತವರಿಗೇನು ಪ್ರಯೋಜನ ಅನ್ನೋದನ್ನ ಒಂದುಬಾರಿಯೂ  ಯೋಚಿಸಿರಲಿಕ್ಕಿಲ್ಲ ...! ಅವರಲ್ಲಿತ್ತು, ಲೋಕವೆಲ್ಲ ಸುತ್ತಾಡಿದರು ಅವರಿಗೇನು ಕಮ್ಮಿ ಅನ್ನೋ ಮಿತ ಬುದ್ದಿವಂತ ...! ಮತ್ತವರ ಸುಖ ನೋಡುತ್ತಲೇ ಹಲ್ಲುಕಡಿದುಕೊಂಡು ಸರಿ ನಿದ್ದೆಯೂ ಮಾಡಿರಲಿಕ್ಕಿಲ್ಲ ...!          -ಮಾಧವ ಅಂಜಾರು  

ಗಂಡನಿಂದ ತೃಪ್ತಿ

ಗಂಡನಿಂದ ತೃಪ್ತಿ ಇಲ್ಲವೆಂದು ನಡು ದಾರಿಯಲ್ಲೇ ಬಿಟ್ಟು ಇನೊಬ್ಬ ಗಂಡನ ಹುಡುಕಾಟಕ್ಕೆ ತಡಕಾಡಿದ ಹೆಣ್ಣು ಹೆಂಡತಿಯು ಸುಂದರಿಯಲ್ಲವೆಂದು ತಾಳಿಯನು ಕಿತ್ತುಕೊಂಡು ಮತ್ತೊಂದು  ಮದುವೆಗೆ ತಯಾರಾದ ಗಂಡು ಇಬ್ಬರಲೂ ತೃಪ್ತಿಗೆ ಮಾತ್ರ ಕೊರತೆ ಅತೃಪ್ತಿಗೆ ಮಾತ್ರ ಮಹತ್ವ ತೃಪ್ತಿಯನ್ನು ಬಯಸಿ ನಡೆದ ಇಬ್ಬರಲು  ಮತ್ತದೇ ತೃಪ್ತಿಯ ಕೊರತೆ ಜೀವನದ ದಾರಿಯುದ್ದಕ್ಕೂ ತೃಪ್ತಿಯೇ ಲಬಿಸೋಲ್ಲವೆಂದು  ಗೊತ್ತಾಗೋ ಸಮಯಕ್ಕೆ ಮುಗಿದೋಯ್ತು ಅವರ ಮಹತ್ವವುಳ್ಳ  ಸಮಯ ಸತ್ತು .                    -ಮಾಧವ ಅಂಜಾರು .                

ತಂಗಡಿ ಬುಲಿತುದು

ಹೊ... ಹೊ.....  ಹೊಹೊಹೊ .... ಹೊಹೊ ಹೊ ಹೊ ......೧ ತಂಗಡಿ  ಬುಲಿತುದು ಪನೀಯೊಲು  ಇಂಚ ಪರಯೆ ದಾಯೆಗ್ ಇಂಚ ಉಡಲ್ದ  ಬೆನೇನ್ ಪನ್ಪಿನೆ ಎಂಚ ಕನೋತ ದಿನನೇ ಇಂಚ.... ಅಪ್ಪನ್  ಅಮ್ಮನ್  ನೆಂತೊಂದೆ ಮೂಲು ಪರ್ಬದ ದಿನೊಲ ಬೆನಿಯರೇ ಸಾಲ್ ತಂಗಡಿನ  ಮದಿಮೆಗೆ ಯಾನಿಜ್ಜಿ ಅವುಲು ಅವೇನ್  ಪನ್ಪಿನ ಎಂಚ .. ಮುಚ್ಚಿದ್ ದೀಪಿನಿ ಎಂಚ ....! (ಪನಂದೆ ಕುಲ್ಲುನೆ ಎಂಚ ) ಸಂಸಾರದ ಮೊನೆಡು ಇಪ್ಪೊಡು ತೆಲಿಕೆ ತಂಗಡಿ ಬದುಕುಡು ಇಪ್ಪೊಡು ನಲಿಕೆ ಪರವೂರ ಜೀವನ ತೂವೆರೆ ಪೊರ್ಲು ಊರುದ ನೆಂಪುಡೆ ದಿನಕಳೆವೊಡು  ಮೂಲು ಅವೆನ್ ಪನ್ಪಿನಿ ಎಂಚ ... ಲೋಕದ ಕತೇನೇ ಇಂಚ .. ೨                    -ಮಾಧವ ಅಂಜಾರು

ಹಾವಿಗೆ ಹಾಲೆರೆದರೇ

ಹಾವಿಗೆ ಹಾಲೆರೆದರೇ ಅದರ ವಿಷ ಕಮ್ಮಿಯಾಗೋದೇ ? ಮೂರ್ಖನ ಸಹವಾಸದಲಿ ನಮ್ಮ ಬುದ್ಧಿ ವೃದ್ದಿಯಾಗೋದೇ ? ಮೂರ್ಖನು , ಹಾವೂ ಸಮಯ ಸಿಕ್ಕಾಗ ವಿಷ ಹೊರ ಹಾಕೋದು ಖಚಿತ ಹಾಗೆಂದು , ಹಾವಿನ   ಭಯ ಬೇಡ ಮೂರ್ಖನ ಹೆದರಿಕೆ ಬೇಡ ಹಾವಿಗೆ ಹಾವಾಡಿಗನಾಗು ..! ಮೂರ್ಖನ ಬಿಟ್ಟು ಹೋಗು ಹಾಗಿದ್ದರೆ , ನಮಗೆ ನಮ್ಮ ಸಂತೋಷ ಖಚಿತ ..!    -ಮಾಧವ ಅಂಜಾರು

sahaja

ಸಹಜ ಎಲ್ಲಾ ದಂಪತಿಗಳಲ್ಲಿ ಇಂತಹದೊಂದು ವಾದ ಒಂದು ದಿನ ಬಂದಿರಬಹುದು ಸ್ವಲ್ಪ ನೋಡಿ ಅವರೆಷ್ಟು ಒಳ್ಳೆಯವರು ...! ಅವನು ಹೆಂಡತಿಯನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುವನು ...! ಅವಳು ಗಂಡನನ್ನು ... ಎಷ್ಟು ಮುದ್ದಾಗಿ ನೋಡಿಕೊಳ್ಳುವನು ...! ಪಾಪ ನೋಡಿದವರಿಗೇನು ಗೊತ್ತು ಕ್ಷಣಕಾಲ ನೋಡಿದ ಸಂತೋಷ ಸ್ವಲ್ಪ ಸಮಯದಲ್ಲೇ ಮುರಿದು ಬಿತ್ತು ಅವರವರ ಗುಟ್ಟು ಅವರಿಗೇ ಗೊತ್ತು ಮತ್ತವರನು ನೋಡುವುದು ಬಿಟ್ಟು ನಡೆಯಿರಿ ಸರಿಯಾಗಿ ಇನ್ನೊಬ್ಬರು ಮಾಡದಿರಲಿ ನಿಮಗೆ ಬೊಟ್ಟು .. !                       -ಮಾಧವ ಅಂಜಾರು

ಸಂಸ್ಕಾರ ಇರದವರಿಗೆ ...!

ಸಂಸ್ಕಾರ  ಇರದವರಿಗೆ ...! ಸಂಸ್ಕಾರ  ಇರದವರಿಗೆ ...! ಸಂಸಾರದ ಹೊಣೆ, ಭಾರ ಹೆಂಡತಿಗೆ ಗಂಡ ಭಾರ ಗಂಡನಿಗೆ ಹೆಂಡತಿ ಭಾರ ಒಟ್ಟಾರೆ ಸಂಸಾರವಿರೋದಿಲ್ಲ ನೇರ .. ! ಸಂಸಾರದಲ್ಲಿ, ಒಬ್ಬರಿಗೆ ಮಾತ್ರ ಸಂಸ್ಕಾರ ಇದ್ದರೆ ... ಸಂಸಾರ ನಡೆಸುವುದೂ ಅತಿಯಾದ ಭಾರ ಸಂಸಾರ  ನಡೆಸುವವನೂ ಆಗುವನು ಭಾರ ...! ಸಂಸ್ಕಾರ ಮತ್ತು ಸಂಸಾರ ಇದ್ದರೆ ನೇರ ...! ಸಂಸಾರ ಸುಖ ಸಾಗರ .. ತಪ್ಪಿದರೆ ಸಂಸಾರವಾಗೋದು ಸದಾ ಭೋರ್ಗರೆಯುವ ಸಾಗರ ..!                 -   ಮಾಧವ ಅಂಜಾರು  

ಅದೆಷ್ಟು ಕ್ರೂರತೆ

ಅದೆಷ್ಟು ಕ್ರೂರತೆ ಅದೆಷ್ಟು ಅರಾಜಕತೆ ಅದೆಷ್ಟು ದುರ್ನಡತೆ ಅದೆಷ್ಟು ರೌದ್ರತೆ ಇಂದಿನ ದಿನಗಳಲ್ಲಾ ಅಹಂಕಾರಿಗಳಿಗೆ ಮೀಸಲು ಕೊಲೆಗಾರರಿಗೆ ಮೀಸಲು ದುಷ್ಟರಿಗೆ ಮೀಸಲು ಅಧರ್ಮಿಯರಿಗೆ ಮೀಸಲು .. ! ಆಸ್ತಿಗಾಗಿ ಕೊಲೆ ಪ್ರೀತಿಗಾಗಿ ಆತ್ಮ ಹತ್ಯೆ ಪ್ರೇಮಿಗಳಾಗಿ ವಂಚನೆ ಧರ್ಮಕ್ಕಾಗಿ ಹೊಡೆದಾಟ ಪ್ರಚಾರಕ್ಕೆ ಹಾರಾಟ ರಾಜಕೀಯಕ್ಕೆ ನಾಟಕ .. ಇದೆಲ್ಲವ ನೋಡುತ್ತಿದ್ದರೆ ಭೂಮಿಯಲ್ಲಿ ಮನುಷ್ಯ ಹುಟ್ಟಿದ್ದೇ ತಪ್ಪಾಗಿ , ದೇವರೊಬ್ಬನಿದ್ದರೆ  ? ಯಾಕೆ  ಇದಕ್ಕೆಲ್ಲಾ ಸಂಪೂರ್ಣ  ವಿರಾಮ ಹಾಕೋದರಲ್ಲಿ ತಡ ...!          -ಮಾಧವ ಅಂಜಾರು  

ಭಕುತರೆಲ್ಲರೂ

ಭಕುತರೆಲ್ಲರೂ ಶಕ್ತಿ ಮೀರಿ ಭಕ್ತಿ ಮಾಡಬೇಕೇ ಹೊರತು ,  ಅರ್ಚನೆಗೆ ಗಂಧ ಪುಷ್ಪ ಶೃಂಗಾರ ಮಾಡಲಾಗದಿದ್ದರೆ ಸಾಲ ಮಾಡಿ ಆಡಂಭರ ತೋರಿಸಿದರೆ ಯಾವ ಧರ್ಮದ ದೇವರೂ ಒಲಿಯೋದಿಲ್ಲ ಖಂಡಿತ , ಎಲ್ಲಾ ಧರ್ಮಗಳ ಭೋದನೆಯೊಂದೇ ಶಾಂತಿ ಶಾಂತಿ ಶಾಂತಿ ಸಹಬಾಳ್ವೆಯೇ ನಮ್ಮೆಲ್ಲರ ಧರ್ಮ , ಕ್ರಮ ಆದರೆ , ಮಾಡುವದು ಕಂಡರೆ ಅಧರ್ಮ , ತಿಳಿಯೋದು ಅದರಲ್ಲೇ ಯಾರಿಗೂ ಗೊತ್ತಿಲ್ಲ ಧರ್ಮ ಹಿಂದೂ ಗಳ ಯಾತ್ರೆ ಮುಸ್ಲಿಮರ ಯಾತ್ರೆ ಕ್ರಿಶ್ಚಿಯನ್ನರ ಯಾತ್ರೆ ಮತ್ತೆಲ್ಲರ ಯಾತ್ರೆ ... ಮನ ಶಾಂತಿಗೆ, ಬೇಡಿಕೆ ಈಡೇರಿಕೆಗೆ ... ! ನಾವೆಲ್ಲಾ ಮನುಶ್ಯರು ಮನುಜರಾಗಿ ಬಾಳೋಣ ಬೆರೆತು ಜೀವನ ಮಾಡೋಣ ..           -ಮಾಧವ ಅಂಜಾರು

ನ್ಯಾಯಾಲಯ

 ನ್ಯಾಯಾಲಯ ನ್ಯಾಯಾಲಯ ಒಂದು ದೇವಾಲಯದಂತೆ ನ್ಯಾಯಾಧೀಶರು ದೇವರಿದ್ದಂತೆ ನ್ಯಾಯವಾದಿಗಳು ಅರ್ಚಕರಂತೆ ಜನ ಸಾಮಾನ್ಯರು ಭಕುತರಂತೆ .... ದೇವರು ಇರೋ ಜಾಗದಲ್ಲಿ ಅರ್ಚಕರ ಉದ್ಯೋಗವಷ್ಟೇ ಭಕುತರ ಬೇಡಿಕೆಯಷ್ಟೇ ದೇವರು ಒಲಿಯೋದು ಬಹಳ ವಿರಳ ಯಾಕೆಂದರೆ ? ಇದು ಕಲಿಯುಗವಂತೆ...! ಅರ್ಚಕರೆಲ್ಲರೂ  , ಭಕ್ತರ ಬೇಡಿಕೆಯನ್ನು ದೇವರ ಮುಂದೆ ಸ್ಪಟಿಸೋದು ಮಾತ್ರ ದೇವರೆಲ್ಲರೂ  ಕಣ್ಣು ಮುಚ್ಚಿ ಆಲಿಸೋದು ಮಾತ್ರ ಯಾಕೆಂದರೆ ? ಇದು ಅಂತ್ಯ ಯುಗವಂತೆ .. ! ನ್ಯಾಯ ಅನ್ಯಾಯ ದೇವರೂ ಮಾಡಿದ್ದಾರಂತೆ ಅರ್ಚಕರೂ ಮಾಡುತ್ತಾರಂತೆ ಭಕ್ತನಿಗೆ ಮಾತ್ರ ಅರಿವೇ ಆಗೋದಿಲ್ಲ .. ದೇವರ ಮುಂದೆ ಏನೆಲ್ಲಾ ಸಂತೆ .. ಯಾಕೆಂದರೆ ,,,,? ಇದು ಬಲಿಯುಗವಂತೆ ....                   -ಮಾಧವ ಅಂಜಾರು