ಅದೆಷ್ಟು ಕ್ರೂರತೆ

ಅದೆಷ್ಟು ಕ್ರೂರತೆ
ಅದೆಷ್ಟು ಅರಾಜಕತೆ
ಅದೆಷ್ಟು ದುರ್ನಡತೆ
ಅದೆಷ್ಟು ರೌದ್ರತೆ
ಇಂದಿನ ದಿನಗಳಲ್ಲಾ
ಅಹಂಕಾರಿಗಳಿಗೆ ಮೀಸಲು
ಕೊಲೆಗಾರರಿಗೆ ಮೀಸಲು
ದುಷ್ಟರಿಗೆ ಮೀಸಲು
ಅಧರ್ಮಿಯರಿಗೆ ಮೀಸಲು .. !

ಆಸ್ತಿಗಾಗಿ ಕೊಲೆ
ಪ್ರೀತಿಗಾಗಿ ಆತ್ಮ ಹತ್ಯೆ
ಪ್ರೇಮಿಗಳಾಗಿ ವಂಚನೆ
ಧರ್ಮಕ್ಕಾಗಿ ಹೊಡೆದಾಟ
ಪ್ರಚಾರಕ್ಕೆ ಹಾರಾಟ
ರಾಜಕೀಯಕ್ಕೆ ನಾಟಕ ..

ಇದೆಲ್ಲವ ನೋಡುತ್ತಿದ್ದರೆ
ಭೂಮಿಯಲ್ಲಿ ಮನುಷ್ಯ ಹುಟ್ಟಿದ್ದೇ
ತಪ್ಪಾಗಿ ,
ದೇವರೊಬ್ಬನಿದ್ದರೆ  ?
ಯಾಕೆ  ಇದಕ್ಕೆಲ್ಲಾ ಸಂಪೂರ್ಣ  ವಿರಾಮ
ಹಾಕೋದರಲ್ಲಿ ತಡ ...!
         -ಮಾಧವ ಅಂಜಾರು

 

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ