sahaja

ಸಹಜ

ಎಲ್ಲಾ ದಂಪತಿಗಳಲ್ಲಿ
ಇಂತಹದೊಂದು ವಾದ
ಒಂದು ದಿನ ಬಂದಿರಬಹುದು
ಸ್ವಲ್ಪ ನೋಡಿ ಅವರೆಷ್ಟು ಒಳ್ಳೆಯವರು ...!
ಅವನು ಹೆಂಡತಿಯನ್ನು
ತುಂಬಾ ಚೆನ್ನಾಗಿ ನೋಡಿಕೊಳ್ಳುವನು ...!
ಅವಳು ಗಂಡನನ್ನು ...
ಎಷ್ಟು ಮುದ್ದಾಗಿ ನೋಡಿಕೊಳ್ಳುವನು ...!

ಪಾಪ ನೋಡಿದವರಿಗೇನು ಗೊತ್ತು
ಕ್ಷಣಕಾಲ ನೋಡಿದ ಸಂತೋಷ
ಸ್ವಲ್ಪ ಸಮಯದಲ್ಲೇ ಮುರಿದು ಬಿತ್ತು
ಅವರವರ ಗುಟ್ಟು ಅವರಿಗೇ ಗೊತ್ತು
ಮತ್ತವರನು ನೋಡುವುದು ಬಿಟ್ಟು
ನಡೆಯಿರಿ ಸರಿಯಾಗಿ
ಇನ್ನೊಬ್ಬರು ಮಾಡದಿರಲಿ ನಿಮಗೆ ಬೊಟ್ಟು .. !
                      -ಮಾಧವ ಅಂಜಾರು


Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ