ಒಂದಿಷ್ಟು ನಿಮಿಷ ದೇಶ ಸೇವೆಗೆ

ಒಂದಿಷ್ಟು ನಿಮಿಷ ದೇಶ ಸೇವೆಗೆ
ಒಂದಷ್ಟು ನಿಮಿಷ ಈಶ ಸೇವೆಗೆ
ಮೀಸಲಿಡಿ  ನಿಮಿಷ, ಜನ ಸೇವೆಗೆ
ನಿಮಗಾಗೋದು ಹರುಷ, ಎಲ್ಲಾ ಸೇವೆಗೆ ...

ಒಂದಿಷ್ಟು ಕರುಣೆ, ಇರಲಿ ನಿಮಗೆ
ಒಂದಷ್ಟು ಮನ್ನಣೆ, ಸಿಗಲಿ ನಿಮಗೆ
ಒಳಿತು ಮಾಡಿ, ಬರದು ನಿಮಗೆ
ಗರಬಡಿದ ಬದುಕು ಇರದು ಕೊನೆಗೆ ...

ಇಂದು ಮಾಡಿದ ಒಳಿತಿಗೆ
ಅಂದು  ಮಾಡಿದ ಕೆಡುಕಿಗೆ
ದೇವರ ಶಿಕ್ಷೆ ಸಿಗೋ ಬದಲು
ಬದಲಾಗಬೇಕು ನಾವು ಸಾಯೋ ಮೊದಲು

                  -ಮಾಧವ ಅಂಜಾರು




Comments