ಹೆಣ್ಣು ಸಂಸಾರದ ಕಣ್ಣು

ಹೆಣ್ಣು ಸಂಸಾರದ ಕಣ್ಣು
ಹೆಣ್ಣಂತೆ ಬದುಕಿದರೆ,  
ಗಂಡು ಸಂಸಾರದ ಹೊನ್ನು
ಗಂಡಂತೆ ಇದ್ದರೆ,
ಕಣ್ಣು ಹೊನ್ನನ್ನು ಬಯಸಿ
ಪ್ರೀತಿಯಿಂದ  ಬಾಳಿದರೆ
ಸುಖಮಯ ಸಂಸಾರ ... !

ಹೆಣ್ಣೊಂದು ಗಂಡಂತೆ
ಗಂಡೊಂದು ಹೆಣ್ಣಂತೆ
ಬಾಳನ್ನು ನಡೆಸಿದರೆ ...
ಕಣ್ಣೂ ಹೊನ್ನೂ ಬೇಗ ಮಣ್ಣು
ಪ್ರತಿದಿನವೂ ಕೆಂಗಣ್ಣು.... 
ದ್ವೇಷವೆ ಬದುಕಾದರೆ
ಸುಖವಿರುವುದೇ ಸಂಸಾರ ...!
      -ಮಾಧವ ಅಂಜಾರು






Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ