ಅಮ್ಮನೆಂದಳು

ಅಮ್ಮನೆಂದಳು ಅಂದು
ಅಲ್ಲಿ ಗುಮ್ಮನಿರುವನೆಂದು
ನಾ ತಮ್ಮನ ಕರೆದು ಹೇಳಿದೆ
ಅಲ್ಲಿರುವನು  ಗುಮ್ಮನೆಂದು ,

ತಂಗಿ ಹಠಮಾಡಿದಳಂದು
ನನಗೆ ಗೊಂಬೆ ಬೇಕೆಂದು
ತಮ್ಮ ಕೈ ತೋರಿಸಿದನಲ್ಲಿ
ಓ ಅಲ್ಲಿ ನೋಡು ಗುಮ್ಮಾ...ನೆಂದು ,

ಅಮ್ಮನಿಗೂ ಅರಿಯದ ಗುಮ್ಮ
ನಮಗೂ ಸಿಗದ ಗುಮ್ಮ
ಇಂದು ಮಗನಿಗೆ ಕೈ ತೋರಿಸಿ ಹೇಳಿದೆ
ಓ ಅಲ್ಲಿರುವ ಗುಮ್ಮಾ ... ಸುಮ್ಮನಿರೆಂದು ..!!!೧
             - ಮಾಧವ ನಾಯ್ಕ್ ಅಂಜಾರು


Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ