ಇಂಗ್ಲೀಸು ಮಾತಾಡೋ ಕಾಲ

ಇಂಗ್ಲೀಸು ಮಾತಾಡೋ ಕಾಲ
ಕನ್ನಡದ ಶಾಲೆ ಎಲ್ಲಿ ?
ಮಮ್ಮಿ ದಾಡಿ ಅನ್ನೋ ಕಾಲ
ಅಪ್ಪ ಅಮ್ಮನಿಗೆ ಗೌರವ ಎಲ್ಲಿ ?

ಇಂಗ್ಲಿಸೆ ಕಲಿಯೋರೆ ಎಲ್ಲಾ
ಕನ್ನಡ ಓದೋರು ಎಲ್ಲಿ ?
ಕನ್ನಡವೇ ಗೊತ್ತಿಲ್ಲ ಅನ್ನೋ ಕಾಲ
ಕನ್ನಡದ ಕಂಪೆಲ್ಲಿ ?

ಕನ್ನಡಕ್ಕೆ ಬೆಳಕು ಚೆಲ್ಲಿ
ಇಂಗ್ಲೀಸನ್ನು ಸರಿಸಿ ನಿಲ್ಲಿ
ಕನ್ನಡವೇ ಬೇಕೆನ್ನೋ ಕಾಲ
ಎಲ್ಲರೂ ಒಗ್ಗೂಡಿ ನಿಲ್ಲಿ .. !
               -ಮಾಧವ ಅಂಜಾರು

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ