ದರೋಡೆಕೋರರಿದ್ದಾರೆ ಎಚ್ಚರಿಕೆ

ದರೋಡೆಕೋರರಿದ್ದಾರೆ ಎಚ್ಚರಿಕೆ
ಮಾತು ಬರದೆ
ಸರಿದು ನಿಂತಿದ್ದ ವನ
ಕಿಸೆ ದೋಚೋ
ಪಾಪಿಗಳಿದ್ದಾರೆ ಎಚ್ಚರಿಕೆ

ತಪ್ಪು ಮಾಡದಿದ್ದರೂ
ನೀನು ತಪ್ಪಿತಸ್ಥನೆಂದು ವಾದಿಸೋ
ನೀತಿ ಇಲ್ಲದ
ದುಷ್ಟರಿದ್ದಾರೆ ಎಚ್ಚರಿಕೆ

ಕಾಸಿಗಾಗಿ ದಿನವಿಡಿ
ಬಣಗುಟ್ಟುತ್ತ, ಆಚಿಚೆ
ಎಗ್ಗಿಲ್ಲದೆ ಸುಳಿದಾಡುತ್ತಾರೆ
ನೀವಿರಿ ಸದಾ ಎಚ್ಚರಿಕೆ ,

ಕೂಸನ್ನು ಶಾಲೆಗೆ
ಸೇರಿಸಲು ಹೋಗುವವರ
ತಲೆ ಬೋಳಿಸಿ
ಲೂಟಿ ಮಾಡುವರು ಎಚ್ಚರಿಕೆ

ರಕ್ಷಣೆಗೆಂದು ಸಹಾಯ
ಬಯಸಿ  ನಡೆದರೂ
ಭಕ್ಷಕರಿರಬಹುದು
ಎಚ್ಚರಿಕೆ

ಸೋತು ಸೋತು
ಬಸವಳಿದು ನಿಂತಾಗ
ನಿಮ್ಮ ಕತ್ತು ಹಿಸುಕೋ
ದ್ರೋಹಿಗಳಿದ್ದಾರೆ ಎಚ್ಚರಿಕೆ

ಬೆಣ್ಣೆಯಂತೆ ಮಾತನ್ನಾಡುತ್ತಾ
ಹಾಲಿನಂತೆ ಬಿಳಿ  ಹೇಳುತಾ
ನಿಮ್ಮನ್ನ ನುಂಗಿಬಿಡೋ
ರಾಕ್ಷಸರಿದ್ದಾರೆ ಎಚ್ಚರಿಕೆ
       -ಮಾಧವ ಅಂಜಾರು








Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ

(ಲೇಖನ -129) ನ್ಯಾಯ ಮತ್ತು ಅನ್ಯಾಯದ ಹೋರಾಟ