ರವಿಯಂತೆ ನೀ ಬೆಳಗು

ರವಿಯಂತೆ ನೀ ಬೆಳಗು
ನನ್ನೊಳಗೆ ನೀನಾಗು 
ಸವಿಜೇನಿನಂತೆ 
ಮಳೆಹನಿಯ ನೀರಾಗು ,

ಕಡುಗತ್ತಲೆ ರಾತ್ರಿಗೆ 
ಚೆಂದಿರನ ಬೆಳಕಾಗು 
ಆ ಬೆಳಕಿನಂದಕೆ  
ಮಿನುಗು ನಕ್ಷತ್ರವಾಗು ,

ನನ್ನೆದೆಯ ಗೂಡಲಿ 
ಕುಣಿಯುವ ಹೃದಯಕೆ 
ಕೈ ಹಿಡಿದು ನಲಿಯುವ 
ನರ್ತಕಿಯು ನೀನಾಗು 

ಮುಂಜಾನೆಯ ಬೆಳಕಲ್ಲಿ 
ಚಿಗುರುವ ಹೂವಾಗು 
ಮೊಗ್ಗಂತೆ ನೀನಿದ್ದು 
ಪ್ರೀತಿಯ ಹೂವಾಗು , 
          -ಮಾಧವ ನಾಯ್ಕ್ ಅಂಜಾರು 












Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ