ಭಕುತರೆಲ್ಲರೂ

ಭಕುತರೆಲ್ಲರೂ
ಶಕ್ತಿ ಮೀರಿ ಭಕ್ತಿ ಮಾಡಬೇಕೇ
ಹೊರತು , 
ಅರ್ಚನೆಗೆ ಗಂಧ ಪುಷ್ಪ
ಶೃಂಗಾರ ಮಾಡಲಾಗದಿದ್ದರೆ
ಸಾಲ ಮಾಡಿ
ಆಡಂಭರ ತೋರಿಸಿದರೆ
ಯಾವ ಧರ್ಮದ ದೇವರೂ
ಒಲಿಯೋದಿಲ್ಲ ಖಂಡಿತ ,

ಎಲ್ಲಾ ಧರ್ಮಗಳ
ಭೋದನೆಯೊಂದೇ
ಶಾಂತಿ ಶಾಂತಿ ಶಾಂತಿ
ಸಹಬಾಳ್ವೆಯೇ ನಮ್ಮೆಲ್ಲರ
ಧರ್ಮ , ಕ್ರಮ
ಆದರೆ , ಮಾಡುವದು ಕಂಡರೆ
ಅಧರ್ಮ , ತಿಳಿಯೋದು ಅದರಲ್ಲೇ
ಯಾರಿಗೂ ಗೊತ್ತಿಲ್ಲ ಧರ್ಮ

ಹಿಂದೂ ಗಳ ಯಾತ್ರೆ
ಮುಸ್ಲಿಮರ ಯಾತ್ರೆ
ಕ್ರಿಶ್ಚಿಯನ್ನರ ಯಾತ್ರೆ
ಮತ್ತೆಲ್ಲರ ಯಾತ್ರೆ ...
ಮನ ಶಾಂತಿಗೆ, ಬೇಡಿಕೆ ಈಡೇರಿಕೆಗೆ ... !
ನಾವೆಲ್ಲಾ ಮನುಶ್ಯರು
ಮನುಜರಾಗಿ ಬಾಳೋಣ
ಬೆರೆತು ಜೀವನ ಮಾಡೋಣ ..
          -ಮಾಧವ ಅಂಜಾರು



Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ