ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ ಆರಂಭಕ್ಕೆ ಕಾರಣಕರ್ತರಾಗಿರುವ , ಬಾವಿಕಟ್ಟೆ ಪದ್ಮನಾಭ ನಾಯ್ಕ ಮತ್ತು ಅಂಜಾರು ಮಠದ ದಿ ll ಲಕ್ಷೀ ನಾರಾಯಣ ಭಟ್. ಇಂದಿನ ಪೀಳಿಗೆಗೆ ತಿಳಿಯದೇ ಇರುವ ವಿಷಯ ಮತ್ತು ಸವಿ ನೆನಪುಗಳ ಪುಟಗಳು. ಸುಮಾರು 45 ವರುಷದ ಹಿಂದೆ ಆರಂಭಗೊಂಡ ಭಜನಾ ಮಂಡಳಿಯ ಮುಖ್ಯ ಕಾರಣಕರ್ತ ಅಂಜಾರು ಬಾವಿಕಟ್ಟೆ ಶ್ರೀ ಪದ್ಮನಾಭ ನಾಯ್ಕ ಯಾನೆ ನಂಗಣ್ಣ, ತಮ್ಮ ಯವ್ವನದ ದಿನಗಳಲ್ಲಿ ಬಹಳಷ್ಟು ಕನಸುಗಳನ್ನು ಕಂಡಿರುವ ಮತ್ತು ಸ್ವ ಉದ್ಯೋಗ ಮಾಡುತ್ತಲೆ ಬಿಡುವಿನ ಸಮಯದಲ್ಲಿ ಶ್ರೀಯುತ ಲಕ್ಷೀ ನಾರಾಯಣ ಭಟ್ ಇವರೊಂದಿಗೆ ಬಹಳಷ್ಟು ಬಾಂಧವ್ಯದಿಂದ ಕೂಡಿ ಬೆಳೆದಿರುವ ಶ್ರೀ ಪದ್ಮನಾಭ ನಾಯ್ಕ ಎಳೆಯ ವಯಸ್ಸಿನಲ್ಲಿ ಹಾಲಿನ ಡೈರಿಯನ್ನು ಮನೆಯಲ್ಲಿಯೇ ಆರಂಭಿಸಿ ಮಣಿಪಾಲದ ವರೆಗೂ ಸೈಕಲನ್ನು ತುಳಿದುಕೊಂಡು ಹೋಗಿ ಬರುತಿದ್ದ ಆ ಕಾಲ. ಬಹಳಷ್ಟು ಕಾಡು ದಾರಿ ಸರಿಯಾದ ರಸ್ತೆ ಸಂಪರ್ಕ ಗಳು ಇಲ್ಲದೇ ಇದ್ದರೂ ಸುಮಾರು 7 -8 ಹಾಲಿನ ಕ್ಯಾನ್ ತುಂಬಿಸ್ಕೊಂಡು ಮಣಿಪಾಲಕ್ಕೆ ಹಾಲು ಸರಬರಾಜು ಮಾಡುತ್ತಾ ಎಲ್ಲರ ಪ್ರೀತಿ ಪಾತ್ರರಾಗಿದ್ದರು ಮತ್ತು ಬಹಳಷ್ಟು ಹೆಸರುವಾಸಿಯಾಗಿದ್ದರು . ಪದ್ಮನಾಭ ಎಂದರೆ ಎಲ್ಲರಿಗೂ ಪರಿಚಯಸ್ತರಾಗಿ ಹಾಲು ಕೊಟ್ಟು ಹಿಂತಿರುಗಿ ಬರುವಾಗ ಭಟ್ಟರು ಮತ್ತು ಪದ್ಮನಾಭ ಇವರ ಸಂಭಾಷಣೆಯಲ್ಲಿ, ಆಗಲೇ ಪದ್ಮನಾಭರು ಯಕ್ಷಗಾನ ಹಾಡುಗಾರಿಕೆ, ಭಜನಾ ಹಾಡುಗಳನ್ನು ಹಾಡುತ್ತ ತನ್ನನ್ನು ತಾನೇ ಮರೆಯುತ್ತಿದ್ದರು. ಭಜನಾ ಹಾಡಿನಲ್ಲಿ ಬಹಳಷ್...
ಭಾರತೀಯ ರಾಯಭಾರಿ ಕುವೈಟ್ ನಲ್ಲಿ, ಹುಲಿಕುಣಿತ ತುಳು ಸಂಸ್ಕೃತಿಯ ಭಾಗವಾಗಿರುವ ಹುಲಿಕುಣಿತ ವಿದೇಶದಲ್ಲಿ ರಾರಾಜಿಸುತ್ತ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ, ತುಳುವರು ಪ್ರಪಂಚದ ಯಾವ ಮೂಲೆಯಲ್ಲಿದ್ದರೂ ತಮ್ಮ ಸಂಪ್ರದಾಯವನ್ನು ಬಿಟ್ಟು ಕೊಡುವುದಿಲ್ಲ, ನಮಸ್ಕಾರ ಊರುಡು ಒಲ್ಪ ದಿಂದ ಆರಂಭ ಆಗುವ ಸಂಭಾಷಣೆ, ಹುಲಿ ಕುಣಿತದಂತಹ ಅನೇಕ ಸಂಪ್ರದಾಯವನ್ನು ಬಹಳಷ್ಟು ಶೃದ್ದೆಯಿಂದ ಮತ್ತು ಶಿಸ್ತಿನಿಂದ ಮಾಡಿ ತುಳುವರ ಸಂಸ್ಕೃತಿಗೆ ಇನ್ನಷ್ಟು ಮೆರುಗು ಕೊಡುವ ತುಳು ಬಿಲ್ಲವ ಸಂಘದ ಸದಸ್ಯರ ತಂಡ ಅನೇಕ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಡಿರುತ್ತಾರೆ, ಒಟ್ಟಾರೆ ಹೆಚ್ಚಿನ ಕಲಾವಿದರು ಕುವೈಟ್ನಲ್ಲಿ ವಾಸವಾಗಿದ್ದಾರೆ ಹೇಳಬಹುದು. ನೃತ್ಯ, ನಾಟಕ, ಪ್ರಹಸನ, ಹುಲಿವೇಷ, ಕರ್ನಾಟ/ ಭಾರತದ ಅನೇಕ ಇತಿಹಾಸದ ಸನ್ನಿವೇಶವನ್ನು ವೇದಿಕೆಯಲ್ಲಿ ನೋಡುವ ಅವಕಾಶವನ್ನು ಅನೇಕ ಸಂಘ ಸಂಸ್ಥೆಗಳು ನಿರಂತರ ಮಾಡುತ್ತಿರುವುದು ನಮಗೆಲ್ಲರಿಗೂ ಸಂತೋಷವನ್ನೂ ತಂದು ಕೊಡುತ್ತಲಿದೆ. ನಾವು ಚಿಕ್ಕವರಿದ್ದಾಗ ನಡೆಯುತ್ತಿದ ಹುಲಿ ಕುಣಿತಕ್ಕೊ, ಇಂದಿನ ದಿನದಲ್ಲಿ ನಡೆಯುವ ಕುಣಿತಕ್ಕೂ ಬಹಳಷ್ಟು ಬದಲಾವಣೆ ಕಂಡಿರುತ್ತೇನೆ. ವೇಷಭೂಷಣೆ ಅತ್ಯಂತ ಸುಂದರ, ಹಾಕುವ ಹೆಜ್ಜೆ, ಎಲ್ಲವೂ ಬಹಳಷ್ಟು ಚೆನ್ನಾಗಿ ಮೂಡಿ ಬರುತ್ತದೆ. ಎಲ್ಲಾ ಕಲಾವಿದರಿಗೂ ಇನ್ನಷ್ಟು ಹೆಚ್ಚಿನ ಯಶಸ್ಸು ಮತ್ತು ಆಶೀರ್ವಾದ ಸ...
ಬದುಕೊಂದು ಹೋರಾಟವೇ ಆದರೆ ಇದರ ನಡುವೆ ನಮ್ಮ ಜೀವನದಲ್ಲಿ ಹಲವು ಸಂಧರ್ಭಗಳು ನ್ಯಾಯಕ್ಕಾಗಿ ಹೋರಾಟ, ಜೀವನಕ್ಕಾಗಿ ಹೋರಾಟ, ಯಶಸ್ಸಿಗಾಗಿ ಹೋರಾಟ ಮತ್ತು ಕೆಲವರು ಹೋರಾಡುವವರನ್ನು ಧಮನಿಸಲು ಮಾಡುವ ಕಪಟ ಹೋರಾಟಗಳು ನಡೆಯುತ್ತಿರುತ್ತವೆ. ಬ್ರಿಟಿಷರು ನಮ್ಮ ದೇಶವನ್ನು ಆಳುತಿದ್ದ ಸಂಧರ್ಭದಲ್ಲಿ ಸ್ವಾತಂತ್ರ್ಯ ಕ್ಕಾಗಿ ಹೋರಾಟ ಮಾಡಿ ತಮ್ಮ ಜೀವನವನ್ನು/ ಜೀವವನ್ನು ಮುಡಿಪಾಗಿಸಿ ಇಂದಿಗೂ ನಾವೆಲ್ಲರೂ ಅವರನ್ನು ಸ್ಮರಿಸುತ್ತ ಸ್ವಾತಂತ್ರ್ಯ ಆಚರಿಸುತ್ತೇವೆ, ಸಿಹಿ ತಿಂಡಿ ಹಂಚುತ್ತೇವೆ, ಒಂದಷ್ಟು ಭಾಷಣಗಳನ್ನು ಮಾಡುತ್ತೇವೆ, ಆದರೂ ಹೋರಾಟ ಮಾಡಿ ಮಡಿದ ಜನರನ್ನು ಬಿಡದೆ ಕೀಳು ರಾಜಕೀಯ ಕೂಡ ಮಾಡುತ್ತಿರುತ್ತೇವೆ. ಮತ್ತು ಪ್ರಸ್ತುತ ಸ್ಥಿತಿಗೆ ಅನುಸಾರವಾಗಿ ಬಾಯಿಗೆ ಬಂದ ಹಾಗೆ ಮಾತನಾಡುವ ಅನೇಕ ನಾಯಕರುಗಳನ್ನು ನಾವು ನೋಡುತ್ತಲೇ ಇದ್ದೇವೆ. ಹೋರಾಟದ ಹಾದಿಯಲ್ಲಿ ಒಂದಷ್ಟು ಜನರು ತನ್ನ ಜೇಬು ತುಂಬಿಸಿಕೊಳ್ಳಲು ಪ್ರಯತ್ನಿಸುತ್ತ ಕಣ್ಣೆದುರು ಸತ್ಯ ಕಾಣುತಿದ್ದರೂ ಸುಳ್ಳನ್ನು ಸೃಷ್ಟಿಮಾಡಿ ಹೋರಾಟದ ಚಿತ್ರಣವನ್ನು ಬದಲಿಸಲು ಪ್ರಯತ್ನಪಡುತ್ತಾರೆ. ಇಲ್ಲಿ ಅವರ ಸ್ವಾರ್ಥ, ಕೆಟ್ಟ ವರ್ತನೆ, ಅಹಂಕಾರ, ದಬ್ಬಾಳಿಕೆ, ಗೂಂಡಾಗಿರಿ, ಶೋಷಣೆ, ಗದರಿಸುವಿಕೆಯ ಅಂಶಗಳು ಮೇಲೆದ್ದು ಕಾಣುತ್ತವೆ. ಸಾಮಾನ್ಯವಾಗಿ, ಸುಳ್ಳನ್ನು ಶೋಷಣೆಯನ್ನು ಗದರಿಕೆ, ಮತ್ತು ಅನೇಕ ಮಾನಸಿಕ ಹಿ...
Comments
Post a Comment