ನಿಮ್ಮ ಸಿಟ್ಟು

ನಿಮ್ಮ ಸಿಟ್ಟು
ಮೂಗಿನ ತುದಿಯಲ್ಲಿದ್ದರೂ
ಸಂತೋಷದ ಕ್ಷಣದಲ್ಲಿ
ವ್ಯಕ್ತಪಡಿಸಬೇಡಿ ...!

ನಿಮ್ಮ ಸಂಬಂಧಿ
ನಿಮಗೆ ಗೌರವಿಸದಿದ್ದರೂ
ಸಂಬಂಧವೇ ಬೇಡವೆಂದು
ದೂರ ಸರಿಯಬೇಡಿ ...!

ನಿಮ್ಮ ಮನಸ್ಸು
ತುಂಬಾ ನೊಂದಿದ್ದರೂ
ಮತ್ತೊಬ್ಬರ ಎದುರು
ಕಣ್ಣೀರು ಹರಿಸಲೇ ಬೇಡಿ ...!

ಸಂತೋಷ , ಸಂಬಂಧ
ಮನಸ್ಸು , ಪ್ರೀತಿ
ನಿಮ್ಮಲ್ಲಿ ಭದ್ರವಾಗಿರಿಸಿ
ಜೀವನವೆಂಬುದೇ , ಹಾಗೇ ..!
              -ಮಾಧವ ಅಂಜಾರು





Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ