ಅಳೆಯುತ್ತಾರೆ ನಿಮ್ಮನ್ನು

ಅಳೆಯುತ್ತಾರೆ ನಿಮ್ಮನ್ನು
ಅವಕಾಶ ಕೊಟ್ಟರೆ
ತೊಳೆಯುತ್ತಾರೆ ನಿಮ್ಮನ್ನು
ಉಪಯೋಗವಿದ್ದರೆ

ತೆಗಳುತ್ತಾರೆ ನಿಮ್ಮನ್ನು
ತಲೆ ತಗ್ಗಿಸಿ  ನಿಂತರೆ
ಹೊಗಳುತ್ತಾರೆ ನಿಮ್ಮನ್ನು
ತಲೆಯೆತ್ತಿ ನಡೆದರೆ

ತೂಗುತ್ತಾರೆ ನಿಮ್ಮನ್ನು
ಅಪ್ಪಿ ತಪ್ಪಿ ಬಿದ್ದರೆ
ಜರೆಯಬಹುದು  ನಿಮ್ಮನ್ನು
ನಿಮ್ಮ ಸ್ಥಿತಿ ಕೆಟ್ಟು ಹೋಗಿದ್ದರೆ
     -ಮಾಧವ ಅಂಜಾರು


Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ