ವಾಟ್ಸಪ್ಪ್ ಡಿಪಿ ಚೆನ್ನಾಗಿದ್ದರೆ

ವಾಟ್ಸಪ್ಪ್ ಡಿಪಿ ಚೆನ್ನಾಗಿದ್ದರೆ
ಹೆಂಡತಿಗೆ ಚಿಂತೆ
ಹಾಗಂತ , ನನ್ನ ಡಿಪಿ ಯಲ್ಲಿ
ಸುಂದರಿಯು ಸೇರಿಕೊಂಡರೆ
ಬೈಗುಳದ ಸಂತೆ ..

ಪ್ರಿಯಕರನು  ಡಿಪಿ ಬದಲಾಯಿಸುತಿದ್ದರೆ
ಪ್ರೇಯಸಿಗೆ ನಿದ್ದೆಯಲೂ ಚಿಂತೆ
ಹಾಗಂತ , ಅವನ ಡಿಪಿ ಯಲ್ಲಿ
ಪ್ರೇಯಸಿ ಕಾಣಿಸಿಕೊಂಡರೆ
ಮೆಸಜುಗಳ ಸಂತೆ ...!

ಗೆಳೆಯನು ಡಿಪಿ ಬದಲಾಯಿಸುತಿದ್ದರೆ
ಎನಗಿಲ್ಲ ಚಿಂತೆ
ಹಾಗಂತ , ಅವನು ಡಿಪಿಯಲ್ಲಿ
ಎಷ್ಟು ಬದಲಾವಣೆ ಮಾಡಿದರೂ
ಪ್ರಯೋಜನ ಇಲ್ಲವಂತೆ ...!
             -ಮಾಧವ ಅಂಜಾರು




Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ